ಬೆಳಗಾವಿ:ಮಗನ ಕಾಟವನ್ನು ತಾಳಲಾಗದೆ ತಂದೆಯೊಬ್ಬ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ತಂದೆ ಮಾರಕಾಸ್ತ್ರದಿಂದ ಬೀಸಿದ ಹೊಡೆತಕ್ಕೆ ಮಗ ಸ್ಥಳದಲ್ಲೇ ಸಾವಿಗೀಡಾಗಿದ್ದು, ಶವ ರಕ್ತದ ಮಡುವಿನಲ್ಲಿ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಈ ಬರ್ಬರ ಕೊಲೆ ನಡೆದಿದೆ. ಭರತೇಶ ಜಿನ್ನಪ್ಪಾ ಕಾಂಜಿ (30) ಕೊಲೆಯಾದವ. ಈತನ ತಂದೆ ಜಿನ್ನಪ್ಪಾ ಕಾಂಜಿ ಕೊಲೆ ಆರೋಪಿ. ಪ್ರಾಥಮಿಕ ಮೂಲಗಳ ಪ್ರಕಾರ ಮಗನ ಕಾಟ ತಾಳಲಾಗದೆ ತಂದೆ ಕೊಲೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು
ಮದ್ಯಪಾನಕ್ಕೆ ಹಣ ಕೊಡು ಎಂದು ಪುತ್ರ ನಿತ್ಯವೂ ತಂದೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಈತನ ಉಪಟಳ ತಾಳಲಾರದೆ ತಂದೆ ಹರಿತವಾದ ಆಯುಧದಿಂದ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದಿದ್ದಾನೆ. ಹೊಡೆತ ತೀವ್ರತೆಗೆ ತಲೆಯ ಹಿಂಭಾಗ ಕತ್ತರಿಸಿಹೋಗಿದ್ದು, ಪುತ್ರ ಸ್ಥಳದಲ್ಲೇ ಶವವಾಗಿ ಬಿದ್ದಿದ್ದಾನೆ. ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದೆ. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾನೆ.
ಮುಳ್ಳುಹಂದಿಯ ಆಸೆಗೆ ಪ್ರಾಣವನ್ನೇ ಕಳೆದುಕೊಂಡ್ರು; ಗುಹೆಯೊಳಗೆ ಉಸಿರುಗಟ್ಟಿ ಇಬ್ಬರ ಸಾವು

ಶಾಸಕರ ಭಾವಚಿತ್ರಕ್ಕೆ ಸೆಗಣಿ ಬಳಿದು ಚಪ್ಪಲಿ ಹೊಡೆತ; ಹೊಡೆದವರು ತಲೆ ಕೆಟ್ಟವರು, ದೂರು ನೀಡಲ್ಲ ಎಂದ ಮಹೇಶ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 + six =
Remember me
