ಕಲಬುರಗಿ:ಇಂದು ಫಾದರ್ಸ್ ಡೇ ಖುಷಿಯಲ್ಲಿ ಹಲವರು ತಂದೆಯೊಂದಿಗೆ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಅಗಲಿದ ತಂದೆಯನ್ನು ಸ್ಮರಿಸಿಕೊಂಡಿದ್ದಾರೆ. ಆದರೆ ಅಪ್ಪನ ದಿನವೇ ಇಲ್ಲೊಂದು ತಂದೆಯ ಪಾಲಿಗೆ ಕೊನೆಯ ದಿನವಾಗಿದೆ. ಫಾದರ್ಸ್ ಡೇಯಂದೇ ವ್ಯಕ್ತಿಯೊಬ್ಬರು ತನ್ನ ಮಕ್ಕಳಿಬ್ಬರನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ್ದು, ಮೂವರೂ ಸಾವಿಗೀಡಾಗಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಪೋಚಾವರಂನಲ್ಲಿ ಈ ಪ್ರಕರಣ ನಡೆದಿದೆ. ಹಣಮಂತ (36) ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಂದೆ. ಇವರು ತನ್ನ 6 ವರ್ಷದ ಪುತ್ರಿ ಅಕ್ಷತಾ, 9 ವರ್ಷದ ಪುತ್ರ ಓಂಕಾರ್ ಇಬ್ಬರನ್ನೂ ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ್ದರು.
ಇದನ್ನೂ ಓದಿ:ಅವನಲ್ಲಿ.. ಇವಳಿಲ್ಲಿ..; ಇಬ್ಬರೂ ಸತ್ತ ಮೇಲೆ ಬಹಿರಂಗವಾಯ್ತು ಪ್ರೇಮ!
ಪತ್ನಿ ಮಕ್ಕಳೊಂದಿಗೆ ಹೈದರಾಬಾದ್​ನಲ್ಲಿ ವಾಸಿಸುತ್ತಿದ್ದ ಹಣಮಂತ, ನಿನ್ನೆ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಬಂದಿದ್ದರು. ಇಂದು ಮೂವರೂ ಇನ್ನಿಲ್ಲ ಎಂಬಂತಾಗಿದೆ. ಈ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನನ್ನಪ್ಪ ಒಬ್ಬ ಬೆಪ್ಪ.. ನಾನೂ ಬೆಪ್ಪ..’: ಆತ್ಮಾವಲೋಕನ ರೀತಿಯಲ್ಲಿ ಹ್ಯಾಪಿ ಫಾದರ್ಸ್ ಡೇ ವಿಷ್ ಮಾಡಿದ ನಟ

ಹೆಂಡ್ತಿ ಆ್ಯಪ್ ಡೌನ್​ಲೋಡ್ ಮಾಡೋದು ತಡವಾಯ್ತೆಂದು ಸಿಟ್ಟಾದ ಗಂಡ; ಸಮಾಧಾನಿಸಲು ಬಂದ ಮಗನ ಎದೆಗೆ ಚೂರಿ ಇರಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
