ಶಿವಮೊಗ್ಗ:ಸಂಭ್ರಮ ಮನೆ ಮಾಡಬೇಕಿದ್ದ ಮದುವೆ ಮಂಟಪದಲ್ಲಿ ನೀರವ ಮೌನ ಆವರಿಸಿ, ಅತೀವ ದುಃಖದ ನಡುವೆಯೂ ವಿವಾಹ ಸಮಾರಂಭ ನಡೆದ ಅಪರೂಪದ ಹಾಗೂ ಮನಕಲಕುವ ಘಟನೆಗೆ ಸಾಗರ ತಾಲೂಕು ಸಾಕ್ಷಿಯಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಂದು ಮದುವೆ ಮನೆಯಲ್ಲಿ ಸಂಭ್ರಮ ಹೆಚ್ಚಾಗಿರುತ್ತಿತ್ತು. ಆದರೆ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಇನ್ನೊಂದು ದಿನ ಬಾಕಿ ಇರುವಾಗಲೇ ತಂದೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆ ಸಾಗರ ತಾಲೂಕು ಆನಂದಪುರ ಸಮೀಪದ ಚನ್ನಕೊಪ್ಪದಲ್ಲಿ ನಡೆದಿದೆ.
ಮಂಜುನಾಥ ಗೌಡ ಮೃತ ದುರ್ದೈವಿ. ನಿನ್ನೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದರು‌. ತನ್ನಿಬ್ಬರು ಮಕ್ಕಳ ಮದುವೆ ಸಂಭ್ರಮದಲ್ಲಿದ್ದ ತಂದೆ, ಇಂದು ನಡೆಯಬೇಕಿದ್ದ ಮದುವೆ ಕೆಲಸಕ್ಕಾಗಿ ಓಡಾಡುವಾಗಲೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಅರ್ಚಕರು, ಪುರೋಹಿತರ ನೆರವಿಗಾಗಿ ಒಕ್ಕೂಟ ಪ್ರಾರಂಭ: ಜಿಲ್ಲಾಧ್ಯಕ್ಷ ಎನ್.ಎಸ್.ನವೀನ್ ಹೇಳಿಕೆ
ತಂದೆ-ತಾಯಿ ಇಲ್ಲದೆ ನವ ವಧುಗಳಿಬ್ಬರು ತಬ್ಬಲಿಯಾಗಿದ್ದಾರೆ. ಮೂರು ವರ್ಷದ ಹಿಂದೆ ಅಪಘಾತದಲ್ಲಿ ತಾಯಿ ಮೃತಪಟ್ಟಿದ್ದರು. ಇದೀಗ ಮದುವೆಯ ಹಿಂದಿನ ದಿನವೇ ತಂದೆಯೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಜುನಾಥ ಗೌಡ ಅಪಘಾತದಲ್ಲಿ ಮೃತನಾಗುತ್ತಿದ್ದಂತೆ ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಸಂಬಂಧಿಕರು ಹಾಗೂ ಗ್ರಾಮಸ್ಥರು ಸೇರಿ ನಿನ್ನೆ‌ ರಾತ್ರಿಯೇ ಮಂಜುನಾಥ ಗೌಡ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಅಂತ್ಯಸಂಸ್ಕಾರದ ಬಳಿಕ ಇಂದು ಬೆಳಗ್ಗೆ ಪೂರ್ವನಿಗದಿಯಂತೆಯೇ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಗ್ರಾಮಸ್ಥರೇ ಮುಂದೆ ನಿಂತು ನೆರವೇರಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಕೆಂಜಿಗಾಪುರದ ದೇವಾಲಯದಲ್ಲಿ ಇಬ್ಬರು ಹೆಣ್ಣುಮಕ್ಕಳ‌ ಮದುವೆ ನೆರವೇರಿದೆ. ದುಃಖದ ನಡುವೆಯೂ ಹೆಣ್ಣು ಮಕ್ಕಳಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಕೃಷಿ ಇಲಾಖೆ ಜೆಡಿ ಚೇತನಾ ಪಾಟೀಲಗೆ ವ್ಯಾನಿಟಿ ಬ್ಯಾಗ್ ಶೋಕಿ! ಲೋಕಾ ದಾಳಿ ವೇಳೆ 30ಕ್ಕೂ ಹೆಚ್ಚು ಬ್ಯಾಗ್ ಪತ್ತೆ

ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಭಾರತದಾದ್ಯಂತ ತರಕಾರಿ ಬೆಲೆ ಏಕೆ ಏರುತ್ತಿದೆ?

ಕಾರಿನ ಪೇಂಟ್ ಮಾಡಲು 1 ಕೋಟಿ ರೂ. ವ್ಯಯಿಸಿದ ಮುಖೇಶ್ ಅಂಬಾನಿ!; ಇದರ ವಿಶೇಷತೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
