ದಾವಣಗೆರೆ:ತಂದೆಯೊಬ್ಬ ತನ್ನ ಅವಳಿ ಮಕ್ಕಳಿಗೆ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಂದಿರುವ ಘಟನೆ ರಾಣೆಬೆನ್ನೂರಿನ ಚಳಗೇರಿ ಟೋಲ್ ಸರ್ವೀಸ್ ರೋಡ್ ಬಳಿ ನಡೆದಿದೆ.
ಅದೈತ್ ಮತ್ತು ಅನ್ವೀತ್ ಮೃತ ದುರ್ದೈವಿಗಳು. ಅಮರ್ ಕಿತ್ತೂರು (36) ಮಕ್ಕಳನ್ನ ಕೊಂದ ತಂದೆ. ದಾವಣಗೆರೆ ಆಂಜನೇಯ ಬಡಾವಣೆ ನಿವಾಸಿ. 4 ವರೆ ವರ್ಷದ ಅವಳಿ ಸಹೋದರರನ್ನು ಪಾಪಿ ತಂದೆ ತನ್ನ ಕೈಯಾರೆ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ; ಸಹಾಯಕ್ಕೆ ಬಾರದೆ ಕುಣಿದು ಕುಪ್ಪಳಿಸಿದ ಪತಿರಾಯ!
ಬೆಳಗಾವಿ ಮೂಲದ ಅಮರ್ ದಾವಣಗೆರೆಯಲ್ಲಿ ತನ್ನ ಕುಟುಂಬದ ಜತೆಗೆ ವಾಸವಾಗಿದ್ದನು. ಈತ ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ. ಇವನ ಪತ್ನಿ ಜಯ ಲಕ್ಷ್ಮಿ ಕೆಲ ತಿಂಗಳ ಹಿಂದೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು. ಈ ವೇಳೆ ಮಕ್ಕಳನ್ನ ಕೊಲ್ಲುವುದಾಗಿ ಪತ್ನಿಗೆ ಹೇಳಿ ಬೆದರಿಸಿದ್ದ. ಆದರೆ ಪತ್ನಿ ಮಾತ್ರ ಮರಳಿ ಬಂದಿರಲಿಲ್ಲ.
ಮಕ್ಕಳು ಹೆಚ್ಚು ಹಠ ಮಾಡುತ್ತವೆ ಎಂದು ಮಕ್ಕಳನ್ನು ತನ್ನ ಕಾರಿನಲ್ಲಿ ರಾಣೇಬೆನ್ನೂರು ತಾಲೂಕು ಚಳಗೇರಿ ಟೋಲ್ ಹತ್ತಿರ ಕರೆದುಕೊಂಡು ಹೋಗಿ ಸರ್ವೀಸ್ ರಸ್ತೆಯಲ್ಲಿ ಮಕ್ಕಳ ಬಾಯಿ ಮತ್ತು ಮೂಗಿಗೆ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಗುರುವಾರ ಬೆಳಗ್ಗೆ ತನ್ನ ಮೊಬೈಲ್ ಆನ್ ಮಾಡಿದಾಗ ಪತ್ನಿ ಕರೆ ಮಾಡಿದ್ದಾರೆ. ಆಗ ವಿಷಯ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿ ಸಂಪರ್ಕಿಸಿದ ನಂತರ ಆತನು ಮಕ್ಕಳ ಮೃತ ದೇಹಗಳೊಂದಿಗೆ ದಾವಣಗೆರೆಗೆ ಬಂದಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಇಲ್ಲಿನ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿದು ಅಮರ್ ಮೊಬೈಲ್ ಲೊಕೇಶನ್ ಆದಾರದ ಮೇಲೆ ಪತ್ತೆ ಮಾಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಕಾಸ್ತ್ರ ಹಿಡಿದು ಸುಲಿಗೆ; ರೆಡ್ ಹ್ಯಾಂಡ್‌ ಆಗಿ ಹಿಡಿದ ಟ್ರಾಫಿಕ್ ಸಿಬ್ಬಂದಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fourteen + 20 =
Remember me
