ಆನೇಕಲ್:ಮೊನ್ನೆಮೊನ್ನೆಯಷ್ಟೇ ಸಾಲದ ಕಂತು ಕಟ್ಟಲು ಒಪ್ಪದ ಮಗನೊಬ್ಬ ತಾಯಿಯ ಮೇಲೆ ವಾಹನ ಹರಿಸಿ ಕೊಂದ ಘಟನೆ ನಡೆದಿದೆ. ಇದೀಗ ವ್ಯಕ್ತಿಯೊಬ್ಬ ಹಣದ ಮುಗ್ಗಟ್ಟಿನಿಂದಾಗಿ ಎಂಟು ವರ್ಷದ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಗ್ರಾಮದ ನಿವಾಸಿ ಎಲ್. ವಿಜಯಕುಮಾರ್ (39) ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ. ಸಮೀಕ್ಷಾ (8) ತಂದೆಯಿಂದಲೇ ಕೊಲೆಗೀಡಾದ ಪುತ್ರಿ. ಸಮೀಕ್ಷಾ ಎಸ್​.ಕೆ. ಪಬ್ಲಿಕ್ ಇಂಗ್ಲಿಷ್​ ಹೈಸ್ಕೂಲ್​ನಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರಾದ ವಿಜಯಕುಮಾರ್ ವೆಲ್ಡರ್​ ಕೆಲಸ ಮಾಡಿಕೊಂಡಿದ್ದು, ಇವರ ಕುಟುಂಬ ಬೊಮ್ಮಸಂದ್ರದ ರೇವಣ್ಣ ಎಂಬುವರ ಮನೆಯಲ್ಲಿ ಬಾಡಿಗೆಗೆ ನೆಲೆಸಿತ್ತು. ಇವರ ಪತ್ನಿ ಗಾರ್ಮೆಂಟ್ಸ್​ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. ವಿಜಯಕುಮಾರ್ ಹಣಕಾಸಿನ ಮುಗ್ಗಟ್ಟಿನಿಂದಾಗಿ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಗಳಿಗೆ ಚಾರ್ಜರ್​ ವಯರ್​ನಿಂದ ಕುತ್ತಿಗೆ ಬಿಗಿದ ವಿಜಯಕುಮಾರ್​ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಅಲ್ಲದೆ ಅದಕ್ಕೂ ಮೊದಲು ಮಗಳಿಗೆ ನಿದ್ರೆ ಮಾತ್ರೆ ತಿನ್ನಿಸಿರುವ ಶಂಕೆಯೂ ಇದೆ. ಇನ್ನು ಇವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನಾನಾ ರೀತಿಯಲ್ಲಿ ಪ್ರಯತ್ನಿಸಿದ್ದು ಕಂಡುಬಂದಿದೆ. ನೇಣು ಹಾಕಿಕೊಳ್ಳುವ ಮೊದಲು ವಿವಿಧ ಮಾತ್ರೆ ಮತ್ತು ವಿಷ ಸೇವಿಸಲು ಯತ್ನಿಸಿದ ಸುಳಿವು ಕಂಡುಬಂದಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್​ಪಿ ಮಲ್ಲೇಶ್​ ಮತ್ತಿತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಗೆ ಹೋಗು ಎಂದಿದ್ದಕ್ಕೆ ಸತ್ತೇ ಹೋದ್ಲು ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
