ಕಲಬುರಗಿ:ನಾಲ್ಕು ಮಕ್ಕಳ ತಂದೆಯೊಬ್ಬ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣವೊಂದು ನಡೆದಿದೆ. ಕಲುಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಹೃದಯಹೀನ ಘಟನೆ ನಡೆದಿದೆ.
ಕಲಬುರಗಿ ನಗರದ ವೀರೇಂದ್ರ ಪಾಟೀಲ್​ ಬಡಾವಣೆ ಬಳಿ ಈ ಕೊಲೆ ನಡೆದಿದೆ. ಕಲಬುರಗಿ ನಗರದ ಬೋವಿಗಲ್ಲಿ ನಿವಾಸಿ, ಆಟೋಚಾಲಕ ಲಕ್ಷ್ಮೀಕಾಂತ್​ ಮಕ್ಕಳನ್ನು ಕೊಂದ ತಂದೆ. ಸೋನಿ (11), ಮಯೂರಿ (9) ಕೊಲೆಗೀಡಾದ ಮಕ್ಕಳು.
ಇದನ್ನೂ ಓದಿ:ಆಸ್ಪತ್ರೆಗೆ ಹೊಕ್ಕು 2 ದಿನದ ಹಸುಳೆಯನ್ನು ಕಚ್ಚಿಕೊಂಡು ಹೋದ ಬೀದಿನಾಯಿ, ಮಗು ಸಾವು..
ಈತನ ಪತ್ನಿ ನಾಲ್ಕು ತಿಂಗಳ ಹಿಂದೆ ಪರಪರುಷನ ಜೊತೆ ಓಡಿ ಹೋಗಿದ್ದಳು. ಹೀಗಾಗಿ ಮಕ್ಕಳು ಅಜ್ಜಿಮನೆಯಲ್ಲಿದ್ದರು.ಅಜ್ಜಿ ಮನೆಯಲ್ಲಿದ್ದ ಮಕ್ಕಳನ್ನು ನಾಲ್ಕು ದಿನಗಳ ಹಿಂದೆ ಕರೆದುಕೊಂಡು ಬಂದಿದ್ದ ಲಕ್ಷ್ಮೀಕಾಂತ್, ನಾಲ್ಕೂ ದಿನ ಮಕ್ಕಳನ್ನು ಆಟೋದಲ್ಲಿ ಕೂರಿಸಿಕೊಂಡು ಕಲಬುರಗಿ ನಗರಾದ್ಯಂತ ಸುತ್ತಾಡಿದ್ದ.
ನಿನ್ನೆ ಸಂಜೆ ಮಕ್ಕಳಿಬ್ಬರನ್ನು ಕೊಲೆ ಮಾಡಿರುವ ಲಕ್ಷ್ಮೀಕಾಂತ್, ಶವಗಳನ್ನು ಆಟೋದಲ್ಲಿಯೇ ಇರಿಸಿಕೊಂಡು ಇಂದು ಮಧ್ಯಾಹ್ನದವರೆಗೂ ಸುತ್ತಾಡುತ್ತಿದ್ದ. ಮಧ್ಯಾಹ್ನ ಇನ್ನಿಬ್ಬರು ಮಕ್ಕಳಾದ ಮೋಹಿತ್ ಮತ್ತು ಶ್ರೇಯಾ ಜತೆ ಠಾಣೆಗೆ ಬಂದ ಲಕ್ಷ್ಮೀಕಾಂತ್ ಪೊಲೀಸರಿಗೆ ಶರಣಾಗಿದ್ದಾನೆ. ಕಲಬುರಗಿ ನಗರದ ಮಹಾತ್ಮ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

ಮಲಗಿದ್ದಲ್ಲೇ ಓದಿ ಎಸ್​ಎಸ್​ಎಲ್​ಸಿಯಲ್ಲಿ 580 ಅಂಕ; 3 ವರ್ಷಗಳ ಬಳಿಕ ಮತ್ತೆ ತರಗತಿಗೆ ಹಾಜರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
