ಬಾಗಲಕೋಟೆ:ಪ್ರಿಯತಮೆಯನ್ನ ಪ್ರಿಯಕರನೇ ಕೊಂದು ಆಕೆಯ ದೇಹವನ್ನ 35 ತುಂಡುಗಳಾಗಿ ಕತ್ತರಿಸಿ ಪ್ರಿಡ್ಜ್​ನಲ್ಲಿಟ್ಟು ಇತ್ಯ ಒಂದೊಂದು ತುಂಡನ್ನು ರಾಷ್ಟ್ರರಾಜಧಾನಿ ದೆಹಲಿಯ ವಿವಿಧೆಡೆ ಎಸೆದ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮುಂಬೈ ಯುವತಿ ಶ್ರದ್ಧಾಳ ಭೀಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಕರ್ನಾಟಕದಲ್ಲಿ ಇಂತಹದ್ದೇ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ.
ನನ್ನ ಗಂಡ ಒಂದು ವಾರದಿಂದ ಕಾಣಿಸ್ತಿಲ್ಲ. ನನಗೆ ನನ್ನ ಮಗನ ಮೇಲೆ ಅನುಮಾನ ಇದೆ. ದಯವಿಟ್ಟು ತನಿಖೆ ಮಾಡಿ ಹುಡುಕಿಕೊಡಿ ಸರ್​… ಎಂದು ಮಹಿಳೆಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಮಗನನ್ನ ವಶಕ್ಕೆ ಪಡೆದು ತನಿಖೆ ಶುರು ಮಾಡುತ್ತಿದ್ದಂತೆ ಘೋರ ರಹಸ್ಯ ಬಯಲಾಗಿದೆ. ಜನ್ಮ ಕೊಟ್ಟ ತಂದೆಯನ್ನೇ ಕೊಂದು ಶವವನ್ನು ತುಂಡು ತುಂಡು ಮಾಡಿ ಕೊಳವೆಬಾವಿಗೆ ತುರುಕಿರುವುದಾಗಿ ಬಾಯ್ಬಿಟ್ಟಿದ್ದು, ಸ್ಥಳದಲ್ಲಿ ಮೃತದೇಹ ಪತ್ತೆ ಕಾರ್ಯಾಚರಣೆ ಮಂಗಳವಾರ ಬೆಳಗ್ಗೆಯಿಂದ ನಡೆಯುತ್ತಿದ್ದು, ಶವದ ತುಂಡುಗಳು ಪತ್ತೆಯಾಗುತ್ತಿವೆ…
ಮುಧೋಳ ನಗರದ ಪರಶುರಾಮ ಕುಳಲಿ(54) ಕೊಲೆಯಾದ ತಂದೆ. ಮಗ ವಿಠ್ಠಲ ಕುಳಲಿ(20) ಕೊಲೆ ಆರೋಪಿ. ಡಿ.6ರ ರಾತ್ರಿ 12 ಗಂಟೆಯಲ್ಲಿ ರಾಡ್​ನಿಂದ ಹಲ್ಲೆ ಮಾಡಿ ತಂದೆಯನ್ನು ಕೊಂದ ಮಗ, ಬಳಿಕ ಯಾರಿಗೂ ಅನುಮಾನ ಬಾರದಿರಲೆಂದು ಮೃತದೇಹವನ್ನು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಇರುವ ತನ್ನ ಹೊಲಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಮುಚ್ಚಿದರೆ ಗೊತ್ತಾಗಬಹುದೆಂದು, ಕೊಳವೆಬಾವಿಗೆ ಹಾಕಲು ಯತ್ನಿಸಿದ್ದಾನೆ. ದೇಹ ಒಳಗೆ ತೂರುತ್ತಿಲ್ಲ ಎಂದು ಶವವನ್ನು ಕೊಡಲಿಯಿಂದ ತುಂಡು ತಂಡು ಮಾಡಿ ಕೊಳವೆಬಾವಿಗೆ ಹಾಕಿದ್ದಾನೆ.

ಬಳಿಕ ಒಂದು ವಾರ ಏನೂ ಅರಿಯದಂತೆ ಊರಲ್ಲಿ ಓಡಾಡಿಕೊಂಡಿದ್ದ. ಅನುಮಾನಗೊಂಡ ತಾಯಿ, ಮುಧೋಳ ಠಾಣೆಯಲ್ಲಿ ಮಿಸ್ಸಿಂಗ್​ ಕೇಸ್​ ದಾಖಲಿಸಿದ್ದರು. ಪೊಲಿಸರು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾ ಸತ್ಯ ಬಾಯ್ಬಿಟ್ಟಿದ್ದಾನೆ. ಕುಡಿದ ಮತ್ತಲ್ಲಿ ನನ್ನ ತಂದೆ ನಿತ್ಯ ನನಗೆ ಹೊಡೆಯುತ್ತಿದ್ದ. ಅವಾಚ್ಯವಾಗಿ ಬೈಯ್ಯುತ್ತಿದ್ದ. ಅದಕ್ಕೆ ಸಿಟ್ಟಿನಲ್ಲಿ ರಾಡ್​ನಿಂದ ಹಲ್ಲೆ ಮಾಡಿದೆ. ಗಂಭೀರ ಗಾಯಗೊಂಡು ಮೃತಪಟ್ಟರು. ಪ್ರಕರಣ ಮುಚ್ಚಿಹಾಕಲು ಶವವನ್ನು ಜಮೀನಿಗೆ ತೆಗೆದುಕೊಂಡು ಹೋಗಿ ನಮ್ಮದೇ ಕೊಳವೆಬಾವಿಗೆ ಶವವನ್ನು ಸಣ್ಣ ಸಣ್ಣ ತುಂಡು ಮಾಡಿ ಹಾಕಿದೆ ಎಂದು ವಿವರಿಸಿದ್ದಾನೆ. ಜೆಸಿಬಿಯಿಂದ ಕೊಳವೆಬಾವಿ ಸುತ್ತ ಅಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಒಂದೆರಡು ತುಂಡುಗಳು ಪತ್ತೆಯಾಗಿವೆ. ಮಗನನ್ನು ಪೊಲೀಸರು ಬಂಧಿದ್ದಾರೆ. (ಪ್ರಾಥಮಿಕ ಮಾಹಿತಿ)
ನೀಟ್​, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಒಂದೇ ದಿನ ದುರಂತ ಅಂತ್ಯ! ಕೆಟ್ಟ ನಿರ್ಧಾರಕ್ಕೆ ನೂರಾರು ಕನಸುಗಳು ಭಗ್ನ

ರೋಪ್​ ವೇ ಮೂಲಕ ಮದ್ವೆ ಮಂಟಪಕ್ಕೆ ಎಂಟ್ರಿಕೊಟ್ಟ ವಧು! ಶೋಕವಾಗದಿರಲಿ ಆಡಂಬರ… ಎಂದ ನೆಟ್ಟಿಗರು, ಸಖತ್​ ವೈರಲ್​ ಆಗ್ತಿದೆ ವಿಡಿಯೋ

ವಿಧಿಯೇ ನೀನೆಷ್ಟು ಕ್ರೂರಿ? ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮೂವರು ಕೂಲಿ ಕಾರ್ಮಿಕರು ದುರ್ಮರಣ! ಆನೇಕಲ್​ನಲ್ಲಿ ಭೀಕರ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + nine =
Remember me
