ಬೆಂಗಳೂರು:ಆತಂಕಕಾರಿ ಘಟನೆಯೊಂದರಲ್ಲಿ ವಿಶ್ವ ತಾಯಂದಿರ ದಿನದಂದೇ ಪಾಪಿ ಮಗನೊಬ್ಬ ತಂದೆ-ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಜೆಪಿ ನಗರದ ಆರ್​ಬಿಐ ಲೇಔಟ್ ಬಳಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಗೋವಿಂದಪ್ಪ, ಶಾಂತಮ್ಮ ಕೊಲೆಯಾದ ದುರ್ದೈವಿಗಳು. ಮದ್ಯದ ಅಮಲಿನಲ್ಲಿ ಮಗ ನವೀನ್​ ಹರಿತವಾದ ಆಯುಧದಿಂದ ಹೊಡೆದು ತಂದೆ-ತಾಯಿಯನ್ನು ಕೊಲೆಗೈದಿದ್ದಾನೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ:ಏರ್ತಿದೆ ಗ್ರಾಫ್ ಆದ್ರೂ ಸೇಫ್; ಟೆಸ್ಟ್ ಹೆಚ್ಚಳದಿಂದಷ್ಟೇ ಸಂಖ್ಯೆ ಏರಿಕೆ, ಅನ್ಯ ರಾಜ್ಯದವರ ಆಗಮನವೂ ಕಾರಣ
ಆರೋಪಿ ನವೀನ್ ಸಾಫ್ಟ್​​ವೇರ್ ಇಂಜಿನಿಯರ್ ಆಗಿದ್ದ. ನಿನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದ ಆತ ಮದ್ಯಪಾನ ಮಾಡಿ ಮನೆಗೆ ಹಿಂದಿರುಗಿದ್ದ. ಈಗಾಗಲೇ ಮನೆಯಲ್ಲಿ ಹಲವು ವಿಚಾರಗಳಿಗೆ ಅಂತರಿಕ ಕಲಹವಿತ್ತಂತೆ, ಅದೇ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕೋಣನಕುಂಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ನವೀನ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಫೇಸ್​ಬುಕ್​ನಲ್ಲಿ ಜಾಹೀರಾತು ಹಾಕಿ ವಂಚನೆ; ಸೈಬರ್ ಕಳ್ಳರ ಕೃತ್ಯ ಹೆಚ್ಚಳ, ನಗರದಲ್ಲಿ ಮೂರು ಪ್ರತ್ಯೇಕ ಪ್ರಕರಣ
ಪ್ರಕರಣ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸಫೆಟ್ ಮಾತನಾಡಿ, ಹರಿತವಾದ ಆಯುಧದಿಂದ ಇರಿದು ವೃದ್ದ ದಂಪತಿ ಹತ್ಯೆ ನಡೆಸಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಮೃತ ಶಾಂತಮ್ಮ ಗುಮಾಸ್ತೆಯಾಗಿದ್ದರು. ಮೃತ ಗೋವಿಂದಪ್ಪ ಸರ್ಕಾರಿ ನಿವೃತ್ತ ನೌಕರರಾಗಿದ್ದರು. ದುಷ್ಕರ್ಮಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ. ಘಟನೆ ಸಂಬಂಧ ಏರಿಯಾದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದಿದ್ದು ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಬೇರೆಯವರೊಂದಿಗಿನ ಹರಟೆ ಈ ರಾಶಿಯ ಸಂಗಾತಿಯ ಮುನಿಸಿಗೆ ಕಾರಣವಾಗಲಿದೆ
ರಾಯಚೂರಿನ ಮಾಜಿ ಸಂಸದ ರಾಜಾರಂಗಪ್ಪ ನಾಯಕ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
