ಚಿಕ್ಕಬಳ್ಳಾಪುರ:ಮನೆಯಲ್ಲಿ ಯಾರಿಗೇ ಒಬ್ಬರಿಗೆ ಸೋಂಕು ತಗುಲಿದರೂ ಮನೆಮಂದಿಯೆಲ್ಲಾ ಕ್ವಾರಂಟೈನ್‌ನಲ್ಲಿ ಇರಬೇಕಾದುದು ನಿಯಮ. ಇದನ್ನು ಉಲ್ಲಂಘಿಸುವಂತೆಯೇ ಇಲ್ಲ.
ಆದರೆ ಚಿಕ್ಕಬಳ್ಳಾಪುರದ ಹೋಟೆಲ್‌ ಮಾಲೀಕರೊಬ್ಬರು ತಮ್ಮ ಮಗನಿಗೆ ಕರೊನಾ ಸೋಂಕು ತಗುಲಿದ್ದರೂ ಹೋಟೆಲ್‌ ಓಪನ್‌ ಮಾಡಿ ಇದೀಗ ಗ್ರಾಹಕರನ್ನು ಪೇಚಿಗೆ ಸಿಲುಕಿಸಿದ್ದಾರೆ.
ಈ ಮಾಲೀಕರ ಮಗನಿಗೆ ಸೋಂಕು ದೃಢಪಟ್ಟಿದ್ದರಿಂದ ನಿನ್ನೆ ಅಂದರೆ ಶನಿವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗನ ಸಂಪರ್ಕಕ್ಕೆ ಬಂದಿರುವ ತಂದೆ ಮತ್ತು ತಾಯಿ ಕಡ್ಡಾಯವಾಗಿ ಕ್ವಾರಂಟೈನ್‌ ಆಗಲೇಬೇಕು. ಏಕೆಂದರೆ ಇವರು ಪ್ರಥಮ ಸಂಪರ್ಕಿತರು. ಇಷ್ಟೇ ಅಲ್ಲದೇ ಸೋಂಕಿತ ವ್ಯಕ್ತಿಯ ಇತರ ಕುಟುಂದವರೂ ಕ್ವಾರಂಟೈನ್‌ ಆಗಬೇಕು. ಈ ಕುರಿತು ಅಧಿಕಾರಿಗಳು ಈ ಕುಟುಂಬಕ್ಕೆ ಹೇಳಿಹೋಗಿದ್ದರು ಕೂಡ.
ಇದನ್ನೂ ಓದಿ:ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್​​ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?
ಆದರೆ ಅಧಿಕಾರಿಗಳ ಮಾತಿಗೆ ಕ್ಯಾರೇ ಎನ್ನದೇ ಹೋಟೆಲ್‌ ಮಾಲೀಕ ಹೋಟೆಲ್‌ ತೆರೆದದ್ದು ಮಾತ್ರವಲ್ಲದೇ, ಅನೇಕ ಗ್ರಾಹಕರಿಗೂ ಆಹಾರ ಪೂರೈಕೆ ಮಾಡಿದ್ದಾರೆ.
ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಕೂಡಲೇ ಹೋಟೆಲ್‌ ಬಳಿ ದೌಡಾಯಿಸಿ, ಹೋಟೆಲ್‌ನ್ನು ಕೂಡಲೇ ಸೀಲ್‌ಡೌನ್‌ ಮಾಡಿದ್ದೂ ಅಲ್ಲದೇ, ಸೋಂಕಿತನ ಮನೆಯನ್ನೂ ಸೀಲ್‌ಡೌನ್‌ ಮಾಡಿ, ಕುಟುಂಬಸ್ಥರನ್ನು ಹೋಂ ಕ್ವಾರಂಟೈನ್‌ ಆಗುವಂತೆ ಹೇಳಿ ಹೋಗಿದ್ದಾರೆ.
ಇವರೇನೋ ಕ್ವಾರಂಟೈನ್‌ ಆದರು. ಅದರೆ ಹೋಟೆಲ್‌ನಲ್ಲಿ ತಿಂಡಿ ತಿಂದವರ ಗತಿ?
8-10ನೇ ತರಗತಿಗೆ ‘ಚಂದನ’ನಲ್ಲಿ ಬೋಧನೆ- ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × three =
Remember me
