ರಾಯಚೂರು:ಮಗು ಅಳುತ್ತಿದೆ ಎಂದು ಅದರ ಮೂಗು-ಬಾಯಿಯನ್ನು ಅಪ್ಪ ಒತ್ತಿ ಹಿಡಿದ ಪರಿಣಾಮ 14 ತಿಂಗಳ ಕೂಸು ಉಸಿರುಗಟ್ಟಿ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಪತ್ನಿಯೊಂದಿಗೆ ಜಗಳದ ಬಳಿಕ ಅಪ್ಪ ಇಂಥದ್ದೊಂದು ಎಡವಟ್ಟು ಮಾಡಿದ್ದಾನೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪದಡಿ ತಂದೆ ಮಹಾಂತೇಶ್ ಎಂಬಾತನನ್ನು ಮುದಗಲ್ ಪೊಲೀಸರು ಬಂಧಿಸಿದ್ದಾರೆ. 14 ತಿಂಗಳ ಅಭಿನವ ತಂದೆಯಿಂದಲೇ ಸಾವಿಗೀಡಾದ ಮಗು.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಮಹಾಂತೇಶ್​ ಪತ್ನಿ ಜತೆ ಜಗಳ ಮಾಡಿಕೊಂಡಿದ್ದ. ಇದರಿಂದ ನೊಂದಿದ್ದ ಪತ್ನಿ ಮಗು ಜತೆ ಇತ್ತೀಚೆಗೆ ಕನಸಾವಿ ಗ್ರಾಮದಲ್ಲಿನ ತವರು ಮನೆಗೆ ಹೋಗಿದ್ದಳು. ಹೀಗಾಗಿ ಬಾಗಲಕೋಟೆಯ ಇಳಕಲ್‌ ನಿವಾಸಿ ಮಹಾಂತೇಶ್ ಪತ್ನಿ ಊರಿಗೆ ಹೋಗಿದ್ದ. ಅಲ್ಲಿಯೂ ಪತ್ನಿ ಜತೆ ಜಗಳವಾಡಿದ್ದ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಬಳಿಕ ಮಗುವನ್ನು ಎತ್ತಿಕೊಂಡು ವಾಪಸ್ ಹೊರಟಿದ್ದ. ಆದರೆ ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲಾಗದ ಈತ ಮಗು ಅಳಬಾರದು ಎಂದು ಅದರ ಮೂಗು-ಬಾಯಿಯನ್ನು ಮುಚ್ಚಿ ಒತ್ತಿ ಹಿಡಿದಿದ್ದ. ಉಸಿರುಗಟ್ಟಿ ಮಗು ಸತ್ತುಹೋಗಿತ್ತು. ಆಗ ಭಯಗೊಂಡ ಈತ ಮಗುವನ್ನು ಕಲ್ಲುಗಳ ಮರೆಯಲ್ಲಿ ಇಟ್ಟುಹೋಗಿದ್ದ. ನಿನ್ನೆ ರಾತ್ರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಅವರು ಮಹಾಂತೇಶ್​ನನ್ನು ಬಂಧಿಸಿದ್ದಾರೆ.
ಹಿಂದೂ ಧರ್ಮ ಯಾವಾಗ ಹುಟ್ಟಿತು‌‌‌.. ಯಾರು ಹುಟ್ಟಿಸಿದ್ದರು?: ಗೃಹ ಸಚಿವ ಡಾ.ಜಿ.ಪರಮೇಶ್ವರ್​

ಶಾಲಾ ಬಸ್​ನಿಂದ ಕೆಳಕ್ಕೆ ಬಿದ್ದ ಬಾಲಕ; ತಲೆ ಮೇಲೇ ಸಾಗಿದ ವಾಹನ, ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
