ತಂದೆ ಜತೆಗಿನ ಒಡನಾಟ,ಅನುಭವ,ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.
ನಾನು ನನ್ನ ಅಪ್ಪನನ್ನು ಅಪ್ಪಾಜಿ ಎಂದು ಕರೆಯುತ್ತಿದ್ದೆ. ಒಬ್ಬನೇ ಮಗನಾದ್ದರಿಂದ ಬಡತನದಲ್ಲೂ ಪ್ರೀತಿಯಿಂದ ಸಾಕಿದ್ದರು. ನಾನು ಅಪ್ಪನೊಂದಿಗೆ ಊಟ ಮಾಡುತ್ತಿದ್ದೆ. ಆಗ ಅನ್ನಕ್ಕೆ ಕ್ಷಾಮವಿದ್ದುದರಿಂದ ಅಪ್ಪ ತನ್ನ ಪಾಲಿನ ಅನ್ನವನ್ನೂ ನನಗೆ ಬಿಟ್ಟು ತಾನು ಬರೀ ರಾಗಿ ಮುದ್ದೆಯಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದರು. ನಾನು ಚಿಕ್ಕವನಿದ್ದಾಗಲೇ ನನ್ನ ತಾಯಿ ತೀರಿಕೊಂಡರು. ಅನಂತರ ನನಗೆ ಅಪ್ಪನೇ ಎಲ್ಲವಾದರು.
ಊಟ ಬಡಿಸುವುದರಿಂದ ಹಿಡಿದು ನನ್ನೆಲ್ಲಾ ಕಷ್ಟಸುಖಗಳಿಗೂ ಸ್ಪಂದಿಸುವ ತಾಯಿಯಾದರು. ಮಗ ಓದಿ ದೊಡ್ಡ ವಿದ್ಯಾವಂತನಾಗಬೇಕೆಂಬ ಮಹದಾಸೆ ಅವರಿಗಿತ್ತು. ನಾನು ಎಂ.ಎ. ಓದಲು ಮಾನಸ ಗಂಗೋತ್ರಿಗೆ ಹೋದಾಗ ಅತ್ತೂ ಕರೆದು ರಂಪ ಮಾಡಿದರು. ನನಗೆ ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಸಿಕ್ಕಾಗ ಅಲ್ಲಿಗೆ ಹೋಗದಂತೆ ದುಃಖದ ಕೋಡಿಯನ್ನೇ ಹರಿಸಿದರು. ಜೀವನವಿಡೀ ನನಗೆ ಒಂದೇಟನ್ನು ಹೊಡೆಯದೆ ಸಾಕಿದ ಪುಣ್ಯಾತ್ಮನಮ್ಮಪ್ಪ. ಶಿಸ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ, ಸಮಚಿತ್ತದ ಆಲೋಚನೆ ನಮ್ಮಪ್ಪ ನನಗೆ ಕಲಿಸಿದ ಮಹತ್ವದ ಪಾಠಗಳು. ಅಪ್ಪ ನನ್ನನ್ನಗಲಿ ಹನ್ನೆರಡು ವರ್ಷಗಳು ಉರುಳಿಹೋಗಿವೆ.ಅಪ್ಪನ ಆದರ್ಶದ ಹಾದಿಯಲ್ಲಿ ನಡೆಯುತ್ತಿದ್ದೇನೆಂಬ ಕಿಂಚಿತ್ ಸಮಾಧಾನವಿದೆ. ಅಪ್ಪನನ್ನು ಬಹುಕಾಲ ಸುಖದಿಂದ ಸಾಕಿದ ಕರ್ತವ್ಯದ ತೃಪ್ತಿ ಇದೆ. ಅಷ್ಟೇ ಸಾಕು ನನ್ನೀ ಜೀವನಕೆ.
| ಮೊದುರು ಮಹೇಶಾರಾಧ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 13 =
Remember me
