ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.
ಅಪ್ಪ ಎಂದರೆ ಅದೊಂದು ಶಕ್ತಿ, ಅವನೊಬ್ಬ ಸರ್ವಶಕ್ತ. ಈಗಲೂ ಅಷ್ಟೇ, ಅಪ್ಪ ನನ್ನ ಜತೆಗಿದ್ದರೆ ನನ್ನೆಲ್ಲ ಜವಾಬ್ದಾರಿ, ಭಾರಗಳು ಸರ›ಂತ ಇಳಿದುಹೋಗಿಹಗುರವಾದ ನಿರಾಳ ಭಾವ ಆವರಿಸುತ್ತದೆ. ಬರೋಬ್ಬರಿ ಸಾರ್ಥಕ ಎಂಬತ್ತ ಮೂರು ವರ್ಷಗಳನ್ನು ಪೂರೈಸಿ ದಿನವೂ ಲವಲವಿಕೆಯಿಂದಿರುವ ನನ್ನಪ್ಪ ಇಡೀ ಮನೆತನಕ್ಕೇ ಹಿರಿಯ. ಆದರೆ, ಮನೆಮಂದಿಯ ಪಾಲಿನ ಪುಟ್ಟ ಮಗು! ಜತೆಗೆ ನನ್ನ ಪಾಲಿಗೆ ಒಳ್ಳೆಯ ಗೆಳೆಯ ಕೂಡಾ ಹೌದು!
ನಾನು ಕಾಲೇಜು ಮೆಟ್ಟಿಲನ್ನು ಹತ್ತಿದಾಗ, ‘ರಾಜೂ.. ವಿದ್ಯಾಭ್ಯಾಸ ನಿನ್ನ ಸಾಮರ್ಥ್ಯದಂತೆ ಮಾಡು, ಇದರಲ್ಲಿ ನನ್ನ ಯಾವುದೇ ಒತ್ತಡ ಇಲ್ಲ. ಆದರೆ, ಯಾವುದೇ ದುಷ್ಟಚಟಗಳನ್ನು ಕಲಿಯಬೇಡಾ. ಮನಸ್ಸಿನ ಮೇಲೆ ಹತೋಟಿ ಇದ್ದವನೇ ಮಹಾತ್ಮಾ. ನೆನಪಿನಲ್ಲಿಟ್ಟುಕೊ’ ಎಂದಿದ್ದ. ಪ್ರಾಮಾಣಿಕತೆ, ನ್ಯಾಯ, ನೀತಿ, ಸತ್ಯ, ಧರ್ಮದಿಂದ ಬದುಕು. ಬೆಟ್ಟದ ತುದಿಯಲ್ಲಿ ಒಬ್ಬನೇ ಕುಳಿತರೂ ಒಂದು ತುತ್ತು ಅನ್ನ ಸಿಗುತ್ತದೆ ಅಂದಿದ್ದರು.ಈಗಲೂ ಅನ್ನುತ್ತಲೇ ಇರುತ್ತಾರೆ. ಅಪ್ಪ ಅಂದ ಈ ಮಾತುಗಳನ್ನು ನಾನು ಮರೆತಿಲ್ಲ. ತತ್ಪಲವಾಗಿ ನನ್ನದು ಸಂತೃಪ್ತಿಯ ಜೀವನ.
| ರಾಜೂ ಶಂಕರಪ್ಪ ಪೇಟಕರ ವಿನಾಯಕ ನಗರ, ಹಾವೇರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + six =
Remember me
