ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.
ಜನ್ಮ ಜನ್ಮಾಂತರದಲ್ಲೂ ಋಣ ತೀರಿಸಲಾಗದ ಭಗವಂತ ಅಪ್ಪಾ. ಅಪ್ಪಾ ಅಂದಾಗಲೆಲ್ಲಾ ನನಗೆ ನೆನಪಾಗುವುದು ನನ್ನ 12 ವಯಸ್ಸಿನಲ್ಲಿ ನಡೆದ ಒಂದು ಮರೆಯಲಾಗದ ಘಟನೆ. ನಾನು ಹುಟ್ಟಿದ ಗ್ರಾಮ ಆವಾಗ ಅಷ್ಟೇನೂ ವೈದ್ಯಕೀಯ ಸೌಲಭ್ಯಗಳಿಲ್ಲದ ದಿನಗಳು. ಅದೊಂದು ದಿನ ರಾತ್ರಿಯ ಸಮಯ 1 ಗಂಟೆ ನನಗೆ ವಿಪರೀತ ಜ್ವರ-ವಾಕರಿಕೆ ಬಂದು ಬಳಲುತ್ತಿದ್ದ ನನ್ನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು 1 ಕೀ.ಮಿ ನಡೆದು ಗ್ರಾಮದ ವೈದ್ಯರ ಮನೆಗೆ ಕತ್ತಲಲ್ಲಿ ತೆರಳಿದರು. ಮಗನಿಗೆ ಏನಾಗುತ್ತದೆಯೋ ಎಂದು ಗಾಬರಿಯಿಂದ ಕೂಗಿದಾಗ ವೈದ್ಯರು ಕಿಟಕಿಯಿಂದಲೇ ವಿಚಾರಿಸಿ ಮಾತ್ರೆಗಳನ್ನು ನೀಡಿದರು, ಆ ಮಧ್ಯರಾತ್ರಿ ನಮ್ಮ ತಂದೆಯವರು ಪಟ್ಟ ಶ್ರಮ ಇವತ್ತಿಗೂ ನೆನೆದಾಗ ಕಣ್ಣಂಚಿನಲ್ಲಿ ನೀರುಬರುವುದು. ತಂದೆ ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನೇ ಲೆಕ್ಕಿಸದೆ ಹೋರಾಡುವ ಕಣ್ಣಿಗೆ ಕಾಣುವ ಭಗವಂತ.
| ಶ್ರೀಕಾಂತರಾವ್ ಕುಲಕರ್ಣಿಲಿಂಗಸುಗೂರು, ರಾಯಚೂರ ಜಿಲ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − eight =
Remember me
