ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.
ಪ್ರತಿಯೊಬ್ಬರ ಜೀವನದಲ್ಲಿ ಅಮ್ಮ ಕಣ್ಣಾದರೆ ಅಪ್ಪ ಕಣ್ಣನ್ನು ರಕ್ಷಿಸುವ ಕಣ್ಣ ರೆಪ್ಪೆಯಾಗಿ ಯಾವತ್ತೂ ವ್ಯಕ್ತಿಯ ಬದುಕಿಗೆ ಆಸರೆಯಾಗಿರುತ್ತಾರೆ. ನನ್ನ ಜೀವನದಲ್ಲೂ ಅಪ್ಪನ ಪಾತ್ರ ಅವರ್ಣಿನೀಯ. ತನ್ನ ಕಾಲಲ್ಲಿ ಹರಿದ ಚಪ್ಪಲಿ ಮತ್ತು ಮೈಯಲ್ಲಿ ಹರಿದ ಬಟ್ಟೆ ಇದ್ದರೂ ಪರವಾಗಿಲ್ಲ, ಮಗನು ನಾಲ್ಕು ಜನರ ಮಧ್ಯೆ ಇರುವುದರಿಂದ ಒಳ್ಳೆಯ ಚಪ್ಪಲಿ, ಬಟ್ಟೆ ಧರಿಸಲಿ ಎನ್ನುವ ಸ್ವಭಾವದವರು.
ನನ್ನ ಪ್ರತಿಯೊಂದು ಆಸೆಗೆ ನೀರೆರೆಯುತ್ತ ನನ್ನ ಖುಷಿಯೇ ತನ್ನ ಖುಷಿ ಎಂದು ಹಗಲಿರುಳು ಶ್ರಮಿಸುವ ಶ್ರಮಜೀವಿ. ನಾನು ದುಡಿಯುವ ಸ್ಥಿತಿಯಲ್ಲಿದ್ದರೂ ಪ್ರತಿಸಲ ಮನೆಗೆ ಹೋಗಿ ಹಿಂದಿರುಗುವಾಗ ನನಗೆ ಗೊತ್ತಿರದಂತೆ ಬ್ಯಾಗಿನ ಯಾವುದಾದರೂ ಮೂಲೆಯಲ್ಲಿ ಒಂದಿಷ್ಟು ದುಡ್ಡು ಇಟ್ಟು ಆಮೇಲೆ ಕರೆ ಮಾಡಿ, ‘ನೀನು ಪಟ್ಟಣದಲ್ಲಿ ಇರುವವನು. ಖರ್ಚಿಗೆ ಬೇಕಾಗುತ್ತದೆ ಇಟ್ಟುಕೋ’ ಎನ್ನುವ ಔದಾರ್ಯದ ಪ್ರತಿರೂಪ ನನ್ನಪ್ಪ. ಇಳಿ ವಯಸ್ಸಿನಲ್ಲೂ ಕಾರ್ಯೋನ್ಮುಖರಾಗಿರುವ ನನ್ನಪ್ಪ ನನಗೆ ಎಂದಿಗೂ ಸ್ಪೂರ್ತಿಯ ಸೆಲೆ. ನನ್ನ ಜೀವನದ ಅಮೋಘ ಆಸ್ತಿ ನನ್ನಪ್ಪ.
| ವೆಂಕಟೇಶ ಬಿ ಪಾಟೀಲಶಹಾಪುರ, ಯಾದಗಿರಿ ಜಿಲ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
