ಬೆಂಗಳೂರು:ಆನ್‌ಲೈನ್ ಸೇವೆಯ ಲೋಪದೇಶಗಳನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕೊನೆಗೂ ಮುಂದಾಗಿದೆ.
ಕೈಕೊಟ್ಟ ಆನ್‌ಲೈನ್ ನೋಂದಣಿ ಸೇವೆ’ ಶೀರ್ಷಿಕೆಯಡಿ ಬುಧವಾರ(ನ.4) ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ಇಲಾಖೆಯು, ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಕಾವೇರಿ ಆನ್‌ಲೈನ್ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದೂಡಿದೆ.
ಇಲಾಖೆಯ ಕಚೇರಿ ಆನ್‌ಲೈನ್‌ಗಳಾದ ಇಸಿ, ಸಿಸಿ ಮತ್ತು ಆಸ್ತಿ ನೋಂದಣಿ ಸೇವೆಗಳಲ್ಲಿ ಆನ್‌ಲೈನ್ ಮೂಲಕ ಪ್ರಾಯೋಗಿಕವಾಗಿ ಜಾರಿಗೆ ತಂದ ನಂತರ, ಸದರಿ ಸೇವೆಗಳಲ್ಲಿ ಸಾರ್ವಜನಿಕರಿಗೆ ಕೆಲ ತಾಂತ್ರಿಕ ಸಮಸ್ಯೆಗಳು ಕಂಡಬಂದಿದೆ. ಆದ್ದರಿಂದ, ಈ ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಸಿ-ಡಾಕ್ ಸಂಸ್ಥೆ ಒಂದು ತಿಂಗಳು ಕಾಲಾವಕಾಶ ಕೇಳಿದೆ. ಹಾಗಾಗಿ, ಮುಂದಿನ ಆದೇಶವರೆಗೆ ಆನ್‌ಲೈನ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಇಲಾಖೆ ಆಯುಕ್ತರು ಆದೇಶಿದ್ದಾರೆ.
ಉಪ ನೋಂದಣಿ ಕಚೇರಿಗಳಲ್ಲಿ ಸೇವೆಗಳನ್ನು ಸರಳೀಕರಣ ಮಾಡುವ ಉದ್ದೇಶದಿಂದ ಕಾವೇರಿ ಪೋರ್ಟಲ್ ಮೂಲಕ ನೋಂದಣಿ ಸೇವೆಯನ್ನು ನ.2ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿಯಿತು. ತುಮಕೂರು ಜಿಲ್ಲೆ ಬೈಲಹೊಂಗಲ, ಕಲಬರ್ಗಿ ಜಿಲ್ಲೆ ಚಿಂಚೋಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನೋಂದಣಿ ಕಚೇರಿಗಳಲ್ಲಿ ಆನ್‌ಲೈನ್ ಸೇವೆ ಕಲ್ಪಿಸಲಾಗಿತ್ತು. ಆದರೆ, 3 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲೂ ಒಂದು ನೋಂದಣಿ ಪ್ರಕ್ರಿಯೆಯೂ ನಡೆದಿಲ್ಲ.
ಅಲ್ಲದೆ, ಆಸ್ತಿ ಕ್ರಯ, ಮಾರಾಟ, ವರ್ಗಾವಣೆ ಪತ್ರ ಅಡಮಾನ ಪತ್ರ ನೋಂದಣಿಗಾಗಿ ಜಾರಿಗೆ ತರಲಾದ ಬಹುನಿರೀಕ್ಷಿತ ಆನ್‌ಸೇವೆ ಆರಂಭದಲ್ಲೇ ಮುಗ್ಗರಿಸಿದೆ. ಎರಡು ವರ್ಷಗಳ ಹಿಂದೆ ವಿಲಗೊಂಡಿದ್ದ ಯೋಜನೆಯನ್ನು ಲೋಪ ಸರಿಪಡಿಸಿದೇ, ಮತ್ತೆ ಜಾರಿಗೆ ತಂದಿರುವುದು ಸಮಸ್ಯೆ ಕಾರಣವಾಗಿದೆ. ಇದರ ವಿರುದ್ಧ ಜನಾಕ್ರೋಶವೂ ವ್ಯಕ್ತವಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
