ಬೆಂಗಳೂರು : ಖಾಸಗಿ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದ್ದ ಮಹಿಳೆ ಖಾತೆಗೆ ಬ್ಯಾಂಕ್ ನೌಕರನೇ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಜಯನಗರದ ಇಕ್ವೀಟಿಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರೈ.ಲಿ. ಜಯನಗರ ಶಾಖೆ ವ್ಯವಸ್ಥಾಪಕ ಶ್ಯಾಮ್ ಕುಮಾರ್ ಎಂಬುವರು ದೂರು ನೀಡಿದ್ದಾರೆ. ಬ್ಯಾಂಕ್ ನೌಕರ ವೈಷ್ಣವ್ ಎಂಬಾತನ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ತಿಲಕನಗರ ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರಾದ ಸಿಂಧೂ ಎಸ್. ಉಪಾಧ್ಯ ಆಗಸ್ಟ್‌ನಲ್ಲಿ 5 ಲಕ್ಷ ರೂ. ನಿಶ್ಚಿತ ಠೇವಣಿ(ಎಫ್​ಡಿ) ಹೂಡಿಕೆ ಮಾಡಿದ್ದರು. ನೆಟ್ ಬ್ಯಾಂಕಿಂಗ್‌ನಲ್ಲಿ ಗ್ರಾಹಕರಿಗೆ ಸೇರಿದ ಹಣ ಬೇರೆ ಖಾತೆ ವರ್ಗಾವಣೆ ಆಗಿರುವುದು ಗೊತ್ತಾಗಿ. ಬ್ಯಾಂಕ್ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ ನೌಕರ ವೈಷ್ಣವ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಸೋನಿಯಾ ಗಾಂಧಿ ಬದಲು ಶರದ್ ಪವಾರ್​ ನಾಯಕತ್ವ ವಹಿಸಲಿ: ಶಿವಸೇನಾ ನಾಯಕ ಸಂಜಯ್​ ರಾವುತ್​
ಎಫ್​​ಡಿ ಮಾಡಿದ ಬಳಿಕ ಗ್ರಾಹಕಿ ಬ್ಯಾಂಕಿಗೆ ಬಂದು ಮೊಬೈಲ್ ನಂಬರ್ ಬದಲಾಯಿಸಲು ಬಂದಾಗ ಖಾಲಿ ಅರ್ಜಿಗೆ ಸಹಿ ಪಡೆದು ತನ್ನ ಮೊಬೈಲ್ ನಂಬರ್ ಮತ್ತು ನಕಲಿ ಇಮೇಲ್ ಐಡಿ ನಮೂದಿಸಿದ್ದ. ಗ್ರಾಹಕಿ ತೆರಳಿದ ಬಳಿಕ ಅವರ ಎಫ್​ಡಿ ಹಣವನ್ನು ಬೇರೆ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಅಲ್ಲಿಂದ ಮತ್ತೆ ಬೇರೊಂದು ಖಾತೆಗೆ ವರ್ಗಾವಣೆ ಮಾಡಿದ್ದ. ಖಾತೆ ಪರಿಶೀಲನೆ ನಡೆಸಿದಾಗ ಆಕೆ ಎಫ್​ಡಿ ಹಣಕ್ಕೂ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಮಾತುಕತೆಗೆ ರೆಡಿ ಇದ್ದೇವೆ, ಪ್ರಸ್ತಾವನೆ ಓದಿ- ರೈತ ನಾಯಕರಿಗೆ ಕೇಂದ್ರ ಕೃಷಿ ಸಚಿವ ತೋಮರ್
ಈ ಕುರಿತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವ್ಯವಸ್ಥಾಪಕ ಶ್ಯಾಮ್‌ಕುಮಾರ್, ದೂರಿನಲ್ಲಿ ಮನವಿ ಮಾಡಿದ್ದಾರೆ. ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಮನೆ ಬಾಗಿಲಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seventeen =
Remember me
