ಬಾಗಲಕೋಟೆ:ಜೀವನದ ಬಗ್ಗೆ ಕನಸು ಕಟ್ಟಿಕೊಂಡು ಎಫ್​ಡಿಎ ಪರೀಕ್ಷೆ ಬರೆದ ಯುವಕನೊಬ್ಬ, ಮನಗೆ ಹೋಗುವಷ್ಟರಲ್ಲೇ ಅಪಘಾತಕ್ಕೀಡಾಗಿದ್ದು, ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದ ಅಕ್ಷಯ್​ಕುಮಾರ್​ ಮೃತ ಯುವಕ. ಈತ ತನ್ನ ಸ್ನೇಹಿತನೊಂದಿಗೆ ಬಾಗಲಕೋಟೆಗೆ ಎಫ್ ಡಿಎ ಪರೀಕ್ಷೆ ಬರೆಯಲು ಬಂದಿದ್ದ. ಇಬ್ಬರು ಪರೀಕ್ಷೆ ಬರೆದು ಊರಿಗೆ ವಾಪಾಸಾಗಲು ಹೊರಟಿದ್ದಾರೆ. ಬೈಕ್​ನಲ್ಲಿ ಹೋಗುತ್ತಿದ್ದಾಗ, ಮುಧೋಳ ತಾಲೂಕಿನ ಲೋಕಾಪುರ ಬಳಿ ಎತ್ತೊಂದು ಅಡ್ಡ ಬಂದಿದ್ದು, ಅದಕ್ಕೆ ಬೈಕ್​ ಗುದ್ದಿದೆ. ಈ ಅಪಘಾತದಿಂದಾಗಿ ಅಕ್ಷಯಕುಮಾರ ಸಾವನ್ನಪ್ಪಿದ್ದಾನೆ. ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕನಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿಸಲಾಗಿದೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)
ಬಿಗ್​ ಬಾಸ್​ ಸೀಸನ್​ 8 ಸ್ಪರ್ಧಿಗಳ ಪಟ್ಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
