ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುವಾರ ಹೊಸದಾಗಿ 10 ಕರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಪಾದರಾಯನಪುರದಲ್ಲಿ ನಡೆಸಿದ್ದ ರ್ಯಾಂಡಂ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕಿರುವುದು ಖಚಿತವಾಗಿದ್ದು, ಸಮುದಾಯಕ್ಕೆ ಹರಡಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ಪಾದರಾಯನಪುರ ದಲ್ಲಿ ಒಟ್ಟು 260 ಪ್ರಥಮ ಮತ್ತು ದ್ವಿತೀಯ ಸಂಪ ರ್ಕಿತರನ್ನು ಕ್ವಾರಂ ಟೈನ್ ಮಾಡಲಾಗಿದ್ದು, ಅವರಲ್ಲಿ 6 ಜನರಿಗೆ ಗುರುವಾರ ಸೋಂಕು ದೃಢವಾಗಿದೆ. ಕಳೆದ ವಾರದಿಂದ 70 ಜನರನ್ನು ರ್ಯಾಂಡಂ ಪರೀಕ್ಷೆಗೆ ಒಳಪಟ್ಟಿದ್ದವರಲ್ಲಿ ಮಂಗಳ ವಾರ ಒಬ್ಬ ಹಾಗೂ ಗುರುವಾರ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇಬ್ಬರು ಹೊಸ ಸೋಂಕಿತರ ಪ್ರಾಥಮಿಕ ಸಂಪರ್ಕದ 6 ಹಾಗೂ ದ್ವಿತೀಯ ಸಂಪರ್ಕದ 24 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು 26 ಜನರ ರ್ಯಾಂಡಂ ಪರೀಕ್ಷಾ ವರದಿ ಶುಕ್ರವಾರ ಬರಲಿದ್ದು, ಇಡೀ ಸಮುದಾಯಕ್ಕೆ ಸೋಂಕು ಹರಡಿದೆ ಎಂಬ ಆತಂಕ ಎದುರಾಗಿದೆ.
ಹೊಸ ಕಂಟೇನ್​ವೆುಂಟ್ ದೀಪಾಂಜಲಿನಗರ: ಸೀಲ್​ಡೌನ್ ಪ್ರದೇಶವಾದ ಬಾಪೂಜಿನಗರದ ಪಕ್ಕದ ದೀಪಾಂಜಲಿನಗರ ವಾರ್ಡ್​ನಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು, ಹೊಸ ಕಂಟೇನ್​ವೆುಂಟ್ ಪಟ್ಟಿಗೆ ಸೇರ್ಪಡೆಯಾಗಿದೆ. ಬೆಂಗಳೂರು ನಗರ ಜಿಲ್ಲೆಗೆ ಸೇರಿದ (ಹೊಂಗಸಂದ್ರ ವಾರ್ಡ್ ಪಕ್ಕ) ಗ್ರಾಮದಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಇನ್ನು ಇವರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುವುದು ಎಂದು ವಿಶೇಷ ಆಯುಕ್ತ ಡಾ. ಲೋಕೇಶ್ ಮಾಹಿತಿ ನೀಡಿದ್ದಾರೆ.
ಒಂದು ಹೊತ್ತಿನ ಊಟಕ್ಕೂ ಕಷ್ಟ
ಒಂದು ಹೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದೇವೆ. ಇನ್ನು ಕೆಲವು ಸಂಘ- ಸಂಸ್ಥೆಗಳು ನೀಡುವ ಆಹಾರ ನಮಗೆ ಸಾಲುತ್ತಿಲ್ಲ. ದಿನಸಿ ಕಿಟ್ ವಿತರಣೆ ಮಾಡಿಲ್ಲ ಎಂದು ಪಾದರಾಯನಪುರದ 13ನೇ ಕ್ರಾಸ್​ನ ನಯಾಜ್ ಎಂಬುವರು ‘ವಿಜಯವಾಣಿ’ಗೆ ಕರೆ ಮಾಡಿ ನೋವು ತೋಡಿಕೊಂಡಿದ್ದಾರೆ.
ಕಸ ಕೊಂಡೊಯ್ಯದ ಪಾಲಿಕೆ
ಬಾಪೂಜಿನಗರ ಹಾಗೂ ಪಾದರಾಯನಪುರದಲ್ಲಿ ಮನೆಯ ಕಸವನ್ನು ಔಷಧ ಸಿಂಪಡಣೆ ಮಾಡಿ ಸಂಗ್ರಹಿಸಲಾಗುತ್ತಿದೆ. ಆದರೆ ಐದಾರು ದಿನಗಳಿಂದ ಪಾಲಿಕೆ ವಾಹನಗಳು ಕಸ ಸಂಗ್ರಹಣೆ ಮಾಡುತ್ತಿಲ್ಲ. ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೀದಿಯಲ್ಲಿ ಬಿದ್ದಿರುವ ಕಸದಿಂದಲೂ ಸಾಂಕ್ರಾಮಿಕ ರೋಗದ ಭೀತಿ ಎದುರಿಸುವಂತಾಗಿದೆ ಎಂದು ದೂರುಗಳು ಕೇಳಿಬರುತ್ತಿವೆ.
4ರಿಂದ ಮನೆ ಮನೆಗೂ ಭೇಟಿ ನೀಡಿ ಸಮೀಕ್ಷೆ
ಬೆಂಗಳೂರು: ಉದ್ಯಾನನಗರಿಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ, ವಾಸವಾಗಿರುವವರ ಸಮೀಕ್ಷೆ ಆರಂಭಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ನಗರದಲ್ಲಿ ಉಸಿರಾಟ ತೊಂದರೆ ಹಾಗೂ ಶೀತಜ್ವರ ಮಾದರಿಯ ಸಮಸ್ಯೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಮನೆಯ ಸಮೀಕ್ಷೆ ಮಾಡುವಂತೆ ಆದೇಶಿಸಿತ್ತು. ಅಂಗನವಾಡಿ ಕಾರ್ಯಕರ್ತೆ ಯರು, ಸರ್ಕಾರಿ ಹಾಗೂ ಬಿಬಿಎಂಪಿ ಶಾಲಾ ಶಿಕ್ಷಕರು ಸೇರಿ 17,684 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿ ಮತಗಟ್ಟೆವಾರು ಮೇ 4 ಅಥವಾ 5ರಿಂದ ಸರ್ವೆ ಆರಂಭವಾಗುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ಆಸ್ಪತ್ರೆ ಪುನರಾರಂಭ:ಮೂಡಲಪಾಳ್ಯ ಹೆರಿಗೆ ಆಸ್ಪತ್ರೆಯಲ್ಲಿ ಏ.22ರಂದು ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯೆಗೆ ಏ. 24ರಂದು ಸೋಂಕು ದೃಢಪಟ್ಟಿತ್ತು. ಏ.26ರಂದು ಸೋಂಕಿತ ಮಹಿಳೆ ಸಾವನ್ನಪ್ಪಿದ್ದರಿಂದ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿತ್ತು. ಗುರುವಾರ (ಏ. 30) ಆಸ್ಪತ್ರೆಯನ್ನು ಶುಚಿಗೊಳಿಸಿ ಸೇವೆಗೆ ಮುಕ್ತಗೊಳಿಸಲಾಗಿದೆ. ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ್ದ ಇಬ್ಬರು ವೈದ್ಯರು ಹಾಗೂ 8 ನರ್ಸ್​ಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ 8 ಜನರಿಗೆ ನೆಗೆಟಿವ್ ಬಂದಿದ್ದು, ಶುಕ್ರವಾರ (ಮೇ 1) ಇನ್ನಿಬ್ಬರ ವರದಿ ಬರಲಿದೆ ಎಂದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕ್) ಡಾ. ನಿರ್ಮಲಾ ಬುಗ್ಗಿ ತಿಳಿಸಿದ್ದಾರೆ.
VIDEO| ವಾರ್ನರ್ ದಂಪತಿಯ ಬುಟ್ಟ ಬೊಮ್ಮ ಮಸ್ತ್​​​ ಸ್ಟೆಪ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − one =
Remember me
