| ಪಂಕಜ ಕೆ.ಎಂ.ಬೆಂಗಳೂರುರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲ ಝುಳ ವ್ಯಾಪಕವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕೆಲ ದಿನಗಳಿಂದ ಕೆಮ್ಮು, ನೆಗಡಿ, ಜ್ವರಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಏರಿಕೆಯಾಗುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಕೈಗೊಂಡ ಎಚ್ಚರಿಕೆ ಕ್ರಮಗಳಿಂದಾಗಿ ಇತರ ಸಾಂಕ್ರಾಮಿಕ ರೋಗಗಳನ್ನು ಬಹುತೇಕ ನಿಯಂತ್ರಣದಲ್ಲಿದ್ದವು. ಆದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಲೇ ಜನರು ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ 8-10 ತಿಂಗಳಿಂದ ಇಳಿಕೆಯಾಗಿದ್ದ ಸಾಂಕ್ರಾಮಿಕ ರೋಗಗಳು ಈಗ ಪುನಃ ಕಾಡಲಾರಂಭಿಸಿದ್ದು, ಕೆಲದಿನಗಳಿಂದ ಚಿಕಿತ್ಸೆ ಬರುವವರು ಹೆಚ್ಚುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯೊಂದಿಗೆ ಜನರ ಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಎಂದಿನಂತೆ ಸಭೆ ಸಮಾರಂಭಗಳು ಆಯೋಜನೆಗೊಳ್ಳುತ್ತಿವೆ. ಒಂದೊಂದಾಗಿ ಜಾತ್ರೆ, ಉತ್ಸವಗಳು ನಡೆಯುತ್ತಿವೆ. ಇದರ ನಡುವೆ ಬೇಸಿಗೆಯ ಬೇಗೆಯೂ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವಕೆ ಪ್ರಮಾಣವೂ ಏರಿಕೆಯಾಗಿದೆ. ಇದು ಕೋವಿಡ್ ಹೆಚ್ಚಳಕ್ಕೂ ಕಾರಣವಾಗಲಿದ್ದು, ಜನರು ಕೋವಿಡ್ ನಿಯಮಗಳನ್ನು ಮುಂದೆಯೂ ಪಾಲಿಸುವುದು ಒಳ್ಳೆಯದು ಎನ್ನುತ್ತಾರೆ ಕೆ.ಜಿ. ಜನರಲ್ ಆಸ್ಪತ್ರೆಯ ಡಾ. ಲಕ್ಷ್ಮೀಪತಿ.
ಬೇಸಿಗೆಯಲ್ಲಿ ಕಾಡುವ ಕಾಯಿಲೆಗಳು:ಬೇಸಿಗೆಯಲ್ಲಿ ಆಹಾರ, ನೀರಿನ ವ್ಯತ್ಯಾಸ ಹಾಗೂ ನೈರ್ಮಲ್ಯದ ಕೊರತೆಯಿಂದ ಹಲವು ಸಾಂಕ್ರಾಮಿಕ ರೋಗಗಳು ಬಾಧಿಸಲಿವೆ. ಕೆಮ್ಮು, ನೆಗಡಿ, ಜ್ವರ, ವಿಪರೀತ ತಲೆನೋವು, ಕಣ್ಣುಗಳಲ್ಲಿ ನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ನೋವು ರೋಗಗಳ ಪ್ರಮುಖ ಲಕ್ಷಣಗಳು. ಬಿಸಿಲಿನಿಂದ ದೇಹದಲ್ಲಿ ನೀರಿನಾಂಶ ಕಡಿಮೆ ಆಗುವುದರಿಂದ ಅತಿಸಾರ ಸಮಸ್ಯೆ, ಚರ್ಮದಲ್ಲಿ ತೊಂದರೆ, ವಾತಾವರಣದಲ್ಲಿ ಧೂಳು ಹೆಚ್ಚುವುದರಿಂದ ನಾನಾ ಅಲರ್ಜಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ. ಸೊಳ್ಳೆ ಮತ್ತು ನೊಣದ ಕಾಟ ಹೆಚ್ಚಲಿದ್ದು, ವಾಂತಿ ಬೇಧಿಯಂತಹ ತೊಂದರೆಗೆ ಕಾರಣವಾಗಲಿವೆ.
ಎಚ್ಚರಿಕೆ ಕ್ರಮಗಳೇನು?
ಕೋವಿಡ್ ಸಂದರ್ಭದಲ್ಲಿ ನಾವು ಬದುಕಿನ ಬದುಕೇ ನಿಜವಾದ ಬದುಕು. ಮುಂದೆಯೇ ಮನೆಯ ಆಹಾರ ಸೇವನೆ, ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಕೈಗಳನ್ನು (ಸ್ಯಾನಿಟೈಸರ್ ಅಥವಾ ಸಾಬೂನು ಬಳಸಿ) ಸ್ವಚ್ಛವಾಗಿಟ್ಟುಕೊಳ್ಳುವುದು, ಜನರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ಜತೆಗೆ ಇತರೆ ಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದು.| ಡಾ. ನಿಜಗುಣಮಕ್ಕಳ ತಜ್ಞಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ
ರಾಜ್ಯದಲ್ಲಿ ಕರೊನಾ 2ನೇ ಅಲೆ ಭೀತಿಬೆಂಗಳೂರು:ರಾಜ್ಯದಲ್ಲಿ ಕಳೆದ 15 ದಿನಗಳಿಂದ ಸೋಂಕು ಖಚಿತ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೋವಿಡ್ 2ನೇ ಅಲೆ ಭೀತಿ ಎದುರಾಗಿದೆ. ಇದಕ್ಕೆ ಪುರಕವಾಗಿ ಬೆಂಗಳೂರಿನ ಕಾವಲು ಬೈರಸಂದ್ರದ ನರ್ಸಿಂಗ್ ಕಾಲೇಜಿನಲ್ಲಿ 40 ವಿದ್ಯಾರ್ಥಿಗಳು ಹಾಗೂ ಬೊಮ್ಮನಹಳ್ಳಿಯ ಲೇಕ್​ವ್ಯೂವ್ ರೆಸಿಡೆನ್ಸಿಯ 28 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ಕೋವಿಡ್ ನಿಯಮಗಳನ್ನು ಸಡಿಲಿಕೆ ಮಾಡಲಾಯಿತು. ಆದರೆ, ಇತ್ತೀಚಿನ ಕೆಲ ದಿನಗಳಿಂದ ಪ್ರತಿನಿತ್ಯ 6 ರಿಂದ 8 ಸಾವಿರ ಸೋಂಕು ಪ್ರಕರಣ ಪತ್ತೆಯಾಗುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ 200ರಿಂದ 300ಕ್ಕೆ ಇಳಿಮುಖವಾಗಿದ್ದ ಸೋಂಕು ಖಚಿತ ಪ್ರಕರಣಗಳು, ಹದಿನೈದು ದಿನದಿಂದೀಚೆಗೆ 600ರಿಂದ 700 ಸರಾಸರಿ ಕಂಡುಬರುತ್ತಿದೆ. ಜತೆಗೆ, ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಯಾವುದೇ ನಿರ್ಬಂಧ ಇಲ್ಲವಾದ್ದರಿಂದ ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿ ಹಲವರು ಹೆಚ್ಚಾಗಿ ಬರುತ್ತಿದ್ದಾರೆ. ಅವರಿಂದಲೂ ರಾಜ್ಯಕ್ಕೆ 2ನೇ ಸೋಂಕು ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ.
ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
