ಬೆಂಗಳೂರು:ಯುವತಿಯರು ಅಡುಗೆ ಮನೆಯಯಾಚೆಗೂ ಸ್ಪರ್ಧಾತ್ಮಕವಾಗಿ ಬೆಳೆಯಬೇಕು, ಅವರಿಂದ ಎಲ್ಲವೂ ಸಾಧ್ಯವಿದೆ, ಅವೆಲ್ಲವನ್ನು ಸಾಧಿಸಿ ಸಾಧಕರಾಗಬೇಕು ಎಂದು ‘ಸದರ್ನ್ ಎಕಾನಮಿಸ್ಟ್ʼ ಇಂಗ್ಲಿಷ್​ ಪಾಕ್ಷಿಕದ ಸಂಪಾದಕಿ ಮತ್ತು ಹಿರಿಯ ಪತ್ರಕರ್ತೆ ಸುಶೀಲಾ ಸುಬ್ರಹ್ಮಣ್ಯ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ʼಮನೆಯಂಗಳದಲ್ಲಿ ಮನತುಂಬಿ ನಮನʼ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಇಂದು ವಿವಿಧ ಆಯಾಮಗಳನ್ನು ಪಡೆಯುತ್ತಿದ್ದು, ಪತ್ರಕರ್ತರು ಯಾವುದೇ ಭೇದಭಾವ ತೋರಿಸದೆ ಒಗ್ಗಟ್ಟಾಗಿ ಮುನ್ನಡೆದರೆ ಪತ್ರಿಕೋದ್ಯಮ ಇನ್ನೂ ಉತ್ತಮ ದಾರಿಯತ್ತ ಸಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುಶೀಲಾ ಅವರು ಎಂಬತ್ತೆಂಟರ ವಯಸ್ಸಲ್ಲೂ ಇಂಗ್ಲಿಷ್ ನಿಯತಕಾಲಿಕವೊಂದರ ಸಂಪಾದಕಿ ಆಗಿರುವುದು ನಿಜಕ್ಕೂ ಪತ್ರಿಕೋದ್ಯಮದ ಹಿರಿಮೆ. ಅವರು ಕೆಯುಡಬ್ಲ್ಯುಜೆ ಹಿತೈಷಿ ಆಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅವರು ಇರಿಸಿರುವ ದತ್ತಿನಿಧಿಯಲ್ಲಿ ಪ್ರತಿ ಸಮ್ಮೇಳನದಲ್ಲೂ ಆಂಗ್ಲಭಾಷೆಯ ಪತ್ರಕರ್ತರೊಬ್ಬರಿಗೆ ಸಂಘವು ಪ್ರಶಸ್ತಿ ನೀಡುತ್ತಿದೆ ಎನ್ನುತ್ತ ಸುಶೀಲ ಅವರಿಗೆ ಸಂಘದೊಂದಿಗೆ ಇರುವ ನಂಟನ್ನು ಸ್ಮರಿಸಿದರು.
ಹಿರಿಯ ಪತ್ರಕರ್ತ ರವಿಪ್ರಕಾಶ್ ಮಾತನಾಡಿ, ಮಹಿಳೆಯಾಗಿ ಸುಶೀಲ ಸುಬ್ರಹ್ಮಣ್ಯ ಅವರ ಸಾಧನೆ ಇಂದಿನ ಪತ್ರಕರ್ತರಿಗೆ ಮಾರ್ಗದರ್ಶಕ ಎಂದರು. ಪತ್ರಕರ್ತೆ ಡಿ. ಯಶೋದಾ ಮಾತನಾಡಿ, ಸುಶೀಲಾ ಅವರು ಕೇವಲ ಪತ್ರಕರ್ತೆಯಾಗದೆ, ಪುಸ್ತಕ ಪ್ರಕಾಶಕರೂ ಆಗಿದ್ದು ಅವರ ಬದ್ಧತೆ ಮತ್ತು ಛಲ ಎಲ್ಲರಿಗೂ ಮಾದರಿ ಎಂದು ಹೇಳಿದರು.
ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ವಂದನಾರ್ಪಣೆ ಮಾಡಿದರು. ಕೆಯುಡಬ್ಲ್ಯುಜೆ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಜಕ್ರಿಯಾ, ಖಜಾಂಜಿ ಎ.ಬಿ. ಶಿವರಾಜು ಮತ್ತಿತರ ಸದಸ್ಯರು ಭಾಗವಹಿಸಿದ್ದರು.
ಬರ್ತ್​​ಡೇಗೆ ಕೇಕು-ಹೂಗುಚ್ಛ ಬೇಡ, 18 ಪದಗಳೇ ಸಾಕು: ಅಭಿಮಾನಿಗಳಲ್ಲಿ ವಿಶಿಷ್ಟ ಬೇಡಿಕೆ ಇಟ್ಟ ಉಪೇಂದ್ರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − seven =
Remember me
