ಶಿರಸಿ:ಜೀವನದಲ್ಲಿ ಆಸೆ ಇರಬೇಕು ಆದರೆ ದುರಾಸೆ ಇರಬಾರದು. ಗುರಿ ಇಟ್ಟುಕೊಂಡು ಅರ್ಥಪೂರ್ಣವಾದ ಜೀವನವನ್ನು ನಡೆಸಬೇಕು ಎಂದುಎಂದು ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.ನಗರದ ನೆಮ್ಮದಿ ಕುಟೀರದ ರಂಗಧಾಮದಲ್ಲಿ ಶನಿವಾರ ಆಯೋಜಿಸಿದ್ದ “ಧನ್ಯವಾದ” ದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಾವುದೇ ಕೆಲಸ ಮಾಡುವಾಗಲೂ ಒಂದು ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಕೊನೆಯುಸಿರಿರುವ ವರೆಗೂ ಕಾಯಕದಲ್ಲಿ ತೊಡಗಿಕೊಂಡಿರಬೇಕು.ಜನರ ಸೇವೆಯನ್ನು ಮಾಡುತ್ತೆನೆ ಎಂಬ ಛಲವಿರಬೇಕು.ಕಡಿಮೆ ಆಹಾರ ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು.ನಾನು ಸಂಸದನಾಗಿದ್ದ ಸಮಯದಲ್ಲಿ ಅನೇಕ ಮುಕ್ತಿ ಧಾಮ ಗಳಿಗೆ ಅನುದಾನ ನೀಡುವ ಸೌಭಾಗ್ಯ ಸಿಕ್ಕಿತ್ತು. ನಮ್ಮ ವಿಆರ್‌ಎಲ್‌ ಕಂಪನಿ ವತಿಯಿಂದ ವಿದ್ಯಾ ನಗರ ರುದ್ರ ಭೂಮಿ ಅಭಿವೃದ್ಧಿ ಸಮಿತಿ ಗೆ ಹಣ ಬಿಡುಗಡೆ ಅವಕಾಶ ಸಿಕ್ಕಿದೆ.ಇಂತಹ ಪುಣ್ಯ ಕೆಲಸಕ್ಕೆ ಅವಕಾಶ ಸಿಕ್ಕಿರುವುದಕ್ಕೆ ನಮ್ಮ ಸಂಸ್ಥೆಯ ಪರವಾಗಿ ಧನ್ಯವಾದಗಳು ಎಂದರು.ಈ ಪ್ರದೇಶದ ಹೆಸರು ಬಹಳ ಸುಂದರವಾಗಿದೆ “ನೆಮ್ಮದಿ” ಎಂದು. ಹುಟ್ಟು ಆಕಸ್ಮಿಕ ಸಾವು ಖಚಿತ. ನಾವು ಬದುಕಿದ್ದಾಗಲೂ ದಿನವೂ ಸಾವನ್ನು ಕಾಣುತ್ತಿದ್ದೆವೆ ಎಂದರು.
ಕಾಶಿನಾಥ ಮೂಡಿ ಹಾಗೂ ವಿ.ಪಿ. ಹೆಗಡೆಯವರು ಒಂದು ಗುರಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡುತ್ತಿದ್ದಾರೆ.ಅವರು ನಮಗೆ ಆದರ್ಶ ವ್ಯಕ್ತಿಗಳು. ಅವರ ಜೀವನವನ್ನೇ ಸೇವೆಗೆ ಮುಡಿಪಾಗಿಟ್ಟಿರುವುದು ಅವರ ನೆಮ್ಮದಿ ಜೀವನ ವಾಗಿದೆ. ನೆಮ್ಮದಿಯ ಜೀವನವನ್ನು ಅವರು ಸಾಧಿಸಿರುವದರಿಂದಲೇ ಕಾಶಿನಾಥ ಮೂಡಿಯವರು 94 ನೇ ವರ್ಷದಲ್ಲೂ ಇಷ್ಟು ಆರೋಗ್ಯವಾಗಿದ್ದಾರೆ ಎಂದರು. ಶಿರಸಿ,ಯಲ್ಲಾಪುರ,ಸಾಗರ ಭಾಗದ ಜನರು ಬಹಳ ಪ್ರಾಮಾಣಿಕರು, ಬುದ್ದಿವಂತರು ಹಾಗೂ ಪರಿಶ್ರಮಿಗಳು. ಆದರೆ ಈಗೀಗ ಜನರು ಇಲ್ಲಿನ ಆಸ್ತಿಗಳನ್ನು ಮಾರಿ ಹೊರ ದೇಶಗಳಿಗೆ ಹೋಗುತ್ತಿರುವುದು ನೋಡಿದರೆ ಬೇಸರವಾಗುತ್ತದೆ. ಮುಂದಿನ ಭವಿಷ್ಯ ಕತ್ತಲಿನಲ್ಲಿದೆ.ನಮ್ಮ ದೇಶಕ್ಕಾಗಿ ನಾವು ದುಡಿಯಬೇಕು.ನಮ್ಮ ಶ್ರಮ ನಮ್ಮ ಬುದ್ದಿ ಮಟ್ಟವನ್ನು ಬೇರೆ ದೇಶಕ್ಕೆ ಸಮರ್ಪಣೆ ಮಾಡಬಾರದು. ಮುಂದಿನ ಪೀಳಿಗೆ ಉಜ್ವಲವಾಗಲು ನಮ್ಮ ಶ್ರಮ ದೇಶಕ್ಕೆ ಅವಶ್ಯಕ ಎಂದರು.
ಇದನ್ನೂ ಓದಿ:ಯಲ್ಲಾಪುರದಲ್ಲಿ ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಉದ್ಘಾಟನೆಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಡಾ.ವಿಜಯ ಸಂಕೇಶ್ವರ ಅವರು ನನ್ನ ಪಾಲಿಗೆ ಪ್ರಾತಃ ಸ್ಮರಣೀಯರು. ಒಳ್ಳೆಯ ಮನಸ್ಸು ಗಳು ಬೆಂಬಲವಾಗಿ ನಿಂತರೆ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಶಿರಸಿಯ ವಿದ್ಯಾ ನಗರ ರುದ್ರ ಭೂಮಿ ಟ್ರಸ್ಟ್ ಉದಾಹರಣೆ ಯಾಗಿದೆ. ವೈಶಾಲಿಯವರ ಸರ್ವಸ್ವವೇ ವಿದ್ಯಾ ನಗರ ರುದ್ರ ಭೂಮಿಯಾಗಿದೆ. “ವಿಜಯವಾಣಿ” ಪತ್ರಿಕೆಯ ಯಶಸ್ಸಿನ ಮೊದಲ ಬೀಜ ಬಿತ್ತಿದ್ದು ಇದೇ ನೆಮ್ಮದಿ ಕುಟೀರದಲ್ಲಿ. ವಿಜಯ ಸಂಕೇಶ್ವರ ಅವರ ಹೊಸತನ, ಸತತ ಪರಿಶ್ರಮದ ಫಲವಾಗಿ ಕೇವಲ 24ತಿಂಗಳಲ್ಲಿ ರಾಜ್ಯದ ನಂ1 ಪತ್ರಿಕೆಯಾಗಿ “ವಿಜಯವಾಣಿ” ಪತ್ರಿಕೆ ಬೆಳೆಯಿತು.ನೆಮ್ಮದಿ ಕುಟೀರದ ವಿಷಯವಾಗಿ “ವಿಜಯವಾಣಿ” ಪತ್ರಿಕೆಯ ಮುಖಪುಟದಲ್ಲಿ ಒಂದು ಅಂಕಣವನ್ನು ಬರೆಯಲಾಗಿತ್ತು.ಅದರ ಫಲವಾಗಿ 60ಲಕ್ಷ ರೂಪಾಯಿ ಅನುದಾನ ನೆಮ್ಮದಿ ಕುಟೀರಕ್ಕೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಬಿಡುಗಡೆ ಮಾಡಿದ್ದರು.ಆದರೆ ಆ ಅನುದಾನವು ಕೈ ಸೆರಲು ಸಾಕಷ್ಟು ಶ್ರಮ ಪಡಬೇಕಾಯಿತು ಎಂದರು.ಇಂದು ನಾಲ್ಕಾರು ಜನ ನನ್ನನ್ನು ಗುರುತಿಸುತ್ತಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಡಾ.ವಿಜಯ ಸಂಕೇಶ್ವರ ಅವರು. ಕನ್ನಡ ಪತ್ರಿಕೋದ್ಯಮ ದಲ್ಲಿ ಆದರ್ಶ ವನ್ನು ಸೃಷ್ಟಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿ ಬೆಳೆಸುತ್ತಿದ್ದಾರೆ. ವಿಜಯ ಸಂಕೇಶ್ವರ ಅವರನ್ನು ನೋಡಿ ನಾವು ಕಲಿಯುವುದು ಸಾಕಷ್ಟಿದೆ ಎಂದರು.
ಡಾ. ವಿಜಯ ಸಂಕೇಶ್ವರ ಅವರನ್ನು ಸುಬ್ರಹ್ಮಣ್ಯ ಹುಬ್ಬಳ್ಳಿ ಪರಿಚಯಿಸಿದರು. ಯಲ್ಲಾಪುರದ ಡಾ.ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್ ನ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಹರಿಪ್ರಕಾಶ ಕೋಣೆಮನೆಯವರನ್ನು ಪರಿಚಿಸಿದರು. ವಿದ್ಯಾ ನಗರ ರುದ್ರ ಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಶಿನಾಥ ಮೂಡಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಉಪಾಧ್ಯಕ್ಷ ವಿ ಪಿ ಹೆಗಡೆ ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ:ಕನ್ನಡ ಪತ್ರಿಕೋದ್ಯಮದಲ್ಲಿ ಬಹು ದೊಡ್ಡ ಬದಲಾವಣೆ ತಂದವರು ಡಾ.ವಿಜಯ ಸಂಕೇಶ್ವರ-ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
