| ಮಂಜುನಾಥ ಕೆ. ಬೆಂಗಳೂರು
ಎಸಿಬಿ ರದ್ದುಗೊಂಡು ಲೋಕಾಯುಕ್ತ ಮರುಸ್ಥಾಪನೆಯಾದ ಬಳಿಕ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿರುವುದಂತೂ ನಿಜ. ಆದರೆ, ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಏರಿಕೆಯಾಗುತ್ತಿಲ್ಲ.
ಸರ್ಕಾರದ ಭ್ರಷ್ಟ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ನಗದು, ಚಿನ್ನಾಭರಣ ಮತ್ತು ಕೋಟ್ಯಂತರ ಮೌಲ್ಯದ ಅಕ್ರಮ ಸ್ವತ್ತು ಪತ್ತೆ ಹಚ್ಚಿದೆ. 2022ರ ಜೂ.15ರಿಂದ 2023ರ ಡಿ.31ರ ಅವಧಿಯಲ್ಲಿ ಒಟ್ಟು 87 ದಾಳಿ, 307 ಟ್ರಾ್ಯಪ್, ಇತರ 50 ಕೇಸ್ ಸೇರಿ ಒಟ್ಟು 444 ಪ್ರಕರಣಗಳಲ್ಲಿ ಕಾರ್ಯಾಚರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ.
ಸದ್ದು ಮಾಡಿದ ಪ್ರಕರಣಗಳು:ಎಸಿಬಿ ರದ್ದುಗೊಂಡು ಹೈಕೋರ್ಟ್ ಆದೇಶದಿಂದ ಮರುಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ ಲೋಕಾಯುಕ್ತ ಭರ್ಜರಿ ಬೇಟೆಯಾಡಿತ್ತು. ಟೆಂಡರ್ ನೀಡಲು ಲಂಚಕ್ಕೆ ಬೇಡಿಕೆಯೊಡ್ಡಿದ್ದ ಕೆಎಸ್​ಡಿಎಲ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದಲ್ಲದೆ ಅವರ ಕಚೇರಿಯಲ್ಲಿ 2.02 ಕೋಟಿ ರೂ. ಕಂತೆಕಂತೆ ನೋಟುಗಳು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ತಂದೆ-ಮಗನ ಬಂಧನವಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಕೆ.ಆರ್. ಪುರ ತಹಸೀಲ್ದಾರ್ ಅಜಿತ್​ಕುಮಾರ್ ರೈಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಅವರ ಆಸ್ತಿ ಕಂಡು ದಂಗಾಗಿದ್ದರು. 100 ಎಕರೆಗೂ ಹೆಚ್ಚು ಬೇನಾಮಿ ಆಸ್ತಿ ಪತ್ತೆಯಾಗಿತ್ತು. ನಂತರ ಸರ್ಕಾರ ಈತನನ್ನು ಕೆಲಸದಿಂದ ಅಮಾನತು ಮಾಡಿತ್ತು.
38 ಪ್ರಕರಣದಲ್ಲಷ್ಟೇ ಶಿಕ್ಷೆ:ಲೋಕಾಯುಕ್ತ ಮರುಸ್ಥಾಪನೆಯಾದ ಬಳಿಕ ಹೊಸದಾಗಿ 433 ಪ್ರಕರಣ ದಾಖಲಾಗಿದೆ. ಇದರಲ್ಲಿ 83 ಪ್ರಕರಣಗಳು ಖುಲಾಸೆಯಾಗಿವೆ. ಕೇವಲ 38 ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಅಂದರೇ ಶೇ.30 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಕೊಡಿಸುವಲ್ಲಿ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದರಲ್ಲಿ 2023ರ ಡಿ. 27ರವರೆಗೆ 409 ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್) ವರದಿ ಬರುವುದು ಬಾಕಿ ಉಳಿದಿದೆ. ಈ ವರದಿ ಲೋಕಾಯುಕ್ತ ಅಧಿಕಾರಿಗಳ ಕೈ ಸೇರಿದ್ದರೆ ಮತ್ತಷ್ಟು ಆರೋಪಿಗಳಿಗೆ ಶಿಕ್ಷೆಯಾಗುವುದು ಖಚಿತ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷೆ ಪ್ರಮಾಣ ಕಡಿಮೆ ಆಗಲು ಕಾರಣವೇನು?ಪೊಲೀಸರ ಮುಂದೆ ಹೇಳಿಕೆ ನೀಡುವ ದೂರುದಾರರು ಕೋರ್ಟ್​ನಲ್ಲಿ ಅದನ್ನು ಬದಲಾಯಿಸುತ್ತಾರೆ. ಟ್ರಾ್ಯಪ್​ಗೆ ಒಳಗಾದ ಅಧಿಕಾರಿ ದೂರುದಾರನ ಬಳಿ ಹೋಗಿ ಕೈ ಕಾಲು ಹಿಡಿದುಕೊಂಡು ಬೇಡಿಕೊಳ್ಳುತ್ತಾನೆ. ದೂರುದಾರರು ಕೂಡ ಕೆಲ ಆಮಿಷಕ್ಕೆ ಒಳಗಾಗುತ್ತಾರೆ. ಹೀಗಾಗಿ ನ್ಯಾಯಾಧೀಶರ ಮುಂದೆ ತದ್ವಿರುದ್ಧ ಹೇಳಿಕೆ ನೀಡುತ್ತಾರೆ. ಈ ಎಲ್ಲ ಕಾರಣಗಳಿಂದ ಶಿಕ್ಷೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜನರ ಮನಸ್ಥಿತಿ ಬದಲಾದರೆ ಶಿಕ್ಷೆ ಪ್ರಮಾಣ ಹೆಚ್ಚಾಗುತ್ತದೆ. ಸಿಬಿಐನಲ್ಲಿ ಶಿಕ್ಷೆಯ ಪ್ರಮಾಣ ಶೇ.50ರಿಂದ 60ರವರೆಗೆ ಇದೆ. ಇದಕ್ಕೆ ಕಾರಣ ಅವರು ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಿರುವುದು. ಜತೆಗೆ ತನಿಖಾಧಿಕಾರಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
* 2023 ಸೆ.13ರಂದು ಬೆಂಗಳೂರಿನ ಆರ್​ಟಿಒ ಕಚೇರಿಗಳ ಮೇಲೆ ದಾಳಿ.
* 2023 ನ.20 ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಭೂ ದಾಖಲೆಗಳ ಮತ್ತು ಸರ್ವೆ ಇಲಾಖೆ ಕಚೇರಿಗಳಲ್ಲಿ (ಎಡಿಎಲ್​ಆರ್) ಶೋಧ.
* 2023 ಡಿ.22ರಂದು ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ, ಸಂಜಯ್ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಘೋಷಾ, ವಾಣಿವಿಲಾಸ್, ಯಲಹಂಕ, ಕೆ.ಆರ್.ಪುರ ಮತ್ತು ನೆಲಮಂಗಲ ಸರ್ಕಾರಿ ಆಸ್ಪತ್ರೆಗಳ ಮೇಲೆ ದಾಳಿ.
* 2024 ಜ.9 ರಂದು ಕಸ ಹಾಕುವ ಸ್ಥಳಗಳಿಗೆ ಲೋಕಾ ಯುಕ್ತರ ಭೇಟಿ. ಸ್ವಯಂಪ್ರೇರಿತ ಪ್ರಕರಣ ದಾಖಲು.
* ಬಿಡಿಎ ಕಚೇರಿ ಕಚೇರಿ ಮೇಲೆ ದಾಳಿ ನಡೆಸಿ ಮಹತ್ತರವಾದ ದಾಖಲೆ ವಶಕ್ಕೆ ಪಡೆಯಲಾಗಿತ್ತು. ಎಸ್​ಟಿ ಅಭಿವೃದ್ಧಿ ನಿಗಮ, ಡಿಸಿ, ಎಸಿ, ತಾಲೂಕು ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಲೋಕಾಯುಕ್ತ ಕಾರ್ಯವೈಖರಿ ನೋಡಿ ಸಾರ್ವ ಜನಿಕರು ಹೆಚ್ಚು ದೂರುಗಳನ್ನು ನೀಡುತ್ತಿದ್ದಾರೆ. ಮೊದಲು 8 ಸಾವಿರ ಇದ್ದದ್ದು ಈಗ 16 ಸಾವಿರಕ್ಕೆ ಏರಿಕೆಯಾಗಿದೆ. ಶಿಕ್ಷೆ ಪ್ರಮಾಣ ಹೆಚ್ಚಿಗೆ ಮಾಡಲು ಈಗಾಗಲೇ ಎರಡು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳಿಗೆ ತಾಂತ್ರಿಕವಾಗಿ ಸೂಕ್ತ ತರಬೇತಿ ನೀಡಲಾಗುತ್ತಿದೆ. ಎಫ್​ಎಸ್​ಎಲ್ ವರದಿಯನ್ನು ಶೀಘ್ರ ಸ್ವೀಕರಿಸುವಂತೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
| ನ್ಯಾ. ಬಿ.ಎಸ್. ಪಾಟೀಲ್ ಲೋಕಾಯುಕ್ತ
ಪ್ರಮುಖ ಕಾರ್ಯಾಚರಣೆಗಳು
* 2022 ಸೆ.30 ರಂದು ರಾಜ್ಯದಾದ್ಯಂತ ಆರ್​ಟಿಒಗಳ ಮೇಲೆ ದಾಳಿ ನಡೆಸಿ 11.03 ಲಕ್ಷ ರೂ. ಜಪ್ತಿ.
* 2022 ನ.3 ರಂದು ಬೆಂಗಳೂರು ನಗರ ಮತ್ತು ಬೆಂ.ಗ್ರಾಮಾಂತರ ಸಬ್-ರಿಜಿಸ್ಟಾರ್ ಕಚೇರಿಗಳ ಮೇಲೆ ದಾಳಿ ನಡೆಸಿ 9.72 ಲಕ್ಷ ರೂ. ವಶ.
* 2023 ಏ.17 ರಂದು ದೇವರಾಜ್ ಅರಸ್ ಟ್ರಕ್ ಟರ್ವಿುನಲ್ ಮೇಲೆ ದಾಳಿ.
* 2023 ಆ.2 ರಂದು ಬಿಬಿಎಂಪಿ ಕಂದಾಯ ಇಲಾಖೆ ಕಚೇರಿ ಮೇಲೆ ದಾಳಿ.

ದೂರಾದ ತಂದೆಯಿಂದಾಗಿ ಶಾಲೆಯಲ್ಲಿ ನಿಂದನೆ: ಪುತ್ರನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ಸಾನಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + nineteen =
Remember me
