ದಾವಣಗೆರೆ:ಕೋಣನ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿರುವ ಆಘಾತಕಾರಿ ಘಟನೆ ಚನ್ನಗಿರಿ ತಾಲೂಕಿನ ಎನ್ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನೀರಗಂಟಿ ಜಯಣ್ಣ (48) ಮೃತ ದುರ್ದೈವಿ. ಇವರು ಎನ್ ಬಸವನಹಳ್ಳಿ ಗ್ರಾಮದ ನಿವಾಸಿ. ಎಮ್ಮೆ ಜೊತೆ ಸೇರಲು ಬಿಡುತ್ತಿಲ್ಲ ಅಂತ ಆಕ್ರೋಶಗೊಂಡ ಕೋಣ ಜಯಣ್ಣರನ್ನು ಗುದ್ದಿ ಕೊಂದಿದೆ.
ಇದನ್ನೂ ಓದಿ:ಕೋಮುಗಲಭೆ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಜತೆಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ: ಸಿಎಂ ಭರವಸೆ
ಲಿಂಗದಹಳ್ಳಿಯ ಕೋಣವನ್ನು ಗ್ರಾಮದ ದೇವರಿಗೆ ಬಿಡಲಾಗಿದೆ. ಪಕ್ಕದಲ್ಲೇ ಇರುವ ಬಸವನ ಹಳ್ಳಿಯಲ್ಲಿ ಈ ಕೋಣ ಎಮ್ಮೆಗಳ ಜೊತೆ ಸೇರಿ ಸಾಕಷ್ಟು ದಾಂಧಲೆ ಮಾಡುತ್ತಿತ್ತು. ಪ್ರತಿಬಾರಿ ಎಮ್ಮೆಗಳ ಜೊತೆ ಸೇರಲು ಬಂದಾಗ ಜಯಣ್ಣ ದೊಣ್ಣೆಯಿಂದ ಹೊಡೆದು ಓಡಿಸುತಿದ್ದರು. ಹೀಗಾಗಿ ಜಯಣ್ಣನ ಮೇಲೆ ಕೋಣ ದ್ವೇಷ ಸಾಧಿಸುತಿತ್ತು.
ಈ ಹಿಂದೆ ಸಾಕಷ್ಟು ಬಾರಿ ಜಯಣ್ಣನ ಮೇಲೆ ಕೋಣ ದಾಳಿ ಮಾಡಿತ್ತು. ಅದೃಷ್ಟವಶಾತ್ ಹಿಂದಿನ ದಾಳಿಯಲ್ಲಿ ಜಯಣ್ಣ ಪಾರಾಗಿದ್ದ. ಆದರೆ, ನಿನ್ನೆ ಜಯಣ್ಣನ ಅದೃಷ್ಟ ಕೆಟ್ಟಿತ್ತು. ನಿನ್ನೆ ಸಾಯಂಕಾಲ ಯಾರು ಇಲ್ಲದ ಸಮಯದಲ್ಲೇ ಕೋಣ ಜಯಣ್ಣನ ಮೇಲೆ ದಾಳಿ ಮಾಡಿದೆ. ಮನಸೋ ಇಚ್ಚೆ ತಿವಿದು ಜಯಣ್ಣನನ್ನು ಕೊಂದು ಹಾಕಿದೆ. ಇದೀಗ ಕೋಣವನ್ನು ಗ್ರಾಮಸ್ಥರು ಹಿಡಿದು ಕಟ್ಟಿ ಹಾಕಿದ್ದಾರೆ.
ಇದನ್ನೂ ಓದಿ:ಪ್ರೇಮಿಗಳನ್ನು ಕೊಂದು ಮೊಸಳೆಗಳಿರುವ ನದಿಗೆ ಮೃತದೇಹಗಳ ಎಸೆತ: ವಿಚಾರಣೆಯಲ್ಲಿ ಭಯಾನಕ ಸಂಗತಿ ಬಯಲು
ಕೋಣ ದಾಂಧಲೆ ಮಾಡುತ್ತಿರುವ ಬಗ್ಗೆ ಬಸವನಹಳ್ಳಿಯ ಗ್ರಾಮಸ್ಥರು ಈ ಹಿಂದೆಯೇ ಲಿಂಗದಹಳ್ಳಿ ಗ್ರಾಮಸ್ಥರು, ಪಂಚಾಯತಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಇದರ ಬಗ್ಗೆ ಅಧಿಕಾರಿಗಳಾಗಲಿ ಅಥವಾ ಲಿಂಗದಹಳ್ಳಿ ಗ್ರಾಮಸ್ಥರಾಗಲಿ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಇದೀಗ ಕೋಣನ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.(ದಿಗ್ವಿಜಯ ನ್ಯೂಸ್​)
ಜೀನಿಯಸ್​ ಮಾತ್ರ ಕೇವಲ 10 ಸೆಕೆಂಡ್​ಗಳಲ್ಲಿ ಈ ಫೋಟೋದಲ್ಲಿರುವ ನಾಯಿ ಪತ್ತೆಹಚ್ಚಬಲ್ಲರು!

ಪ್ರೇಮಿಗಳನ್ನು ಕೊಂದು ಮೊಸಳೆಗಳಿರುವ ನದಿಗೆ ಮೃತದೇಹಗಳ ಎಸೆತ: ವಿಚಾರಣೆಯಲ್ಲಿ ಭಯಾನಕ ಸಂಗತಿ ಬಯಲು

ರಾಜ್ಯದಲ್ಲಿ ಮಳೆ ಕೊರತೆ: ಕಾಂಗ್ರೆಸ್​ಗೆ ಇದು ಶುಭಶಕುನವಲ್ಲ ಎಂದು ವಿಜಯೇಂದ್ರ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
