|ಮೃತ್ಯುಂಜಯ ಕಪಗಲ್ಬೆಂಗಳೂರು
ಬೆಳೆ ನಷ್ಟ, ಸಾಲದಂತಹ ವಿವಿಧ ಕಾರಣಗಳಿಂದಾಗಿ ಯುವಪೀಳಿಗೆ ಕೃಷಿಯಿಂದ ವಿಮುಕ್ತವಾಗುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಒಂದು ಲಕ್ಷ ಎಕರೆಗೂ ಅಧಿಕ ಕೃಷಿ ಜಮೀನಿನ ಫಲವತ್ತತೆ ಕುಸಿದಿರುವ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿರುವುದು ಕೃಷಿ ಕ್ಷೇತ್ರಕ್ಕೆ ಮತ್ತೊಂದು ಮಹಾಗಂಡಾಂತರದ ಮುನ್ಸೂಚನೆ ನೀಡಿದೆ. ಹೆಚ್ಚು ಇಳುವರಿ ಪಡೆಯುವ ಭರದಲ್ಲಿ ಅತಿಯಾದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಬಳಕೆ ಪರಿಣಾಮ ಒಟ್ಟಾರೆ 41816.80 (ಅಂದಾಜು ಲಕ್ಷ ಎಕರೆ) ಹೆಕ್ಟೇರ್ ಫಲವತ್ತಾದ ಸಾಗುವಳಿ ಭೂಮಿ ಸವಳು-ಜವಳಾಗಿದೆ.
ಬೆಂಗಳೂರಿನಲ್ಲಿರುವ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಕೃಷಿ ಇಲಾಖೆ ಈ ಮಾಹಿತಿ ಪಡೆದುಕೊಂಡಿದೆ. ಉಪಗ್ರಹ ರವಾನಿಸಿದ ಚಿತ್ರಗಳು ಕ್ಷಾರಯುಕ್ತತೆ ಪ್ರಮಾಣವನ್ನು ಬಿಂಬಿಸಿವೆ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳ ಸಂಶೋಧನೆಗಳು ಶಿಫಾರಸು ಮೀರಿ ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಸುತ್ತಿರುವುದನ್ನು ಇಲಾಖೆ ಒಪ್ಪಿಕೊಂಡಿದೆ.
ನಿಗದಿತ ಪ್ರಮಾಣ:ಕೃಷಿ ವಿವಿಗಳ ಶಿಫಾರಸು ಹಾಗೂ ಕೇಂದ್ರ ಸರ್ಕಾರದ ಮಾನದಂಡ ಅನ್ವಯ ಸಮತೋಲಿತ ಬಳಕೆ ಪ್ರಮಾಣ ಗುರುತಿಸಿದ್ದು, ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ರಸಗೊಬ್ಬರವು 4:2:1 ಅನುಪಾತದಲ್ಲಿ ಇರಬೇಕು ಎಂದಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರವು 3.32:1.94:1.00 ಅನುಪಾತದಲ್ಲಿದೆ. ಅಂದರೆ, ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ, ಅದರಲ್ಲೂ ನೀರಾವರಿ ಪ್ರದೇಶ, ವಾಣಿಜ್ಯ ಬೆಳೆ ಹೆಚ್ಚು ಬೆಳೆಯುವ ಜಿಲ್ಲೆಗಳಲ್ಲಿ ಬೆಳೆವಾರು ಶಿಫಾರಸು ಪ್ರಮಾಣ ಮೀರಿ ಕ್ರಿಮಿನಾಶಕ, ರಸಗೊಬ್ಬರ ಬಳಕೆಯಿಂದ ಜಮೀನು ಕ್ಷಾರಯುಕ್ತವಾಗಿದೆ.
ಸಾವಯವ ಪರಿಹಾರ ಕ್ರಮ:ಸವಳು-ಜವಳು ಜಮೀನು ಮರುಪೂರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ವಿವಿಧ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಿಗಳಿಗೆ ಕೃಷಿ ವಿವಿಗಳು ನೆರವಾಗುತ್ತಿವೆ. ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸಲು ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ರಿಯಾಯಿತಿ ದರದಲ್ಲಿ ಹಸಿರೆಲೆಗೊಬ್ಬರ ಬೀಜ, ಜೈವಿಕ, ಎರೆಗೊಬ್ಬರ ಜತೆಗೆ ಕಾಂಪೋಸ್ಟ್​ನಂತಹ ಸಾವಯವ ಗೊಬ್ಬರಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಜತೆಗೆ ಹೆಚ್ಚು ಕ್ರಿಮಿನಾಶಕ, ರಸಗೊಬ್ಬರ ಬಳಕೆ ಅಡ್ಡ ಪರಿಣಾಮಗಳೇ ಜಾಸ್ತಿ. ಇಳುವರಿ ಹೆಚ್ಚಾಗುವ ಬದಲು ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ ಎಂಬ ಬಗ್ಗೆ ರೈತರಿಗೆ ತಿಳಿಸಿಕೊಡಲಾಗುತ್ತಿದೆ. ಪ್ರಗತಿಪರ ರೈತರ ಸಹಭಾಗಿತ್ವದಲ್ಲಿ ಅರಿವು, ಮಾಹಿತಿ ನೀಡಲಾಗುತ್ತಿದೆ. ನೀರಾವರಿಯಲ್ಲಿ ನಷ್ಟವೇ ಪರಿಹಾರ ಮಾರ್ಗ ಎಂಬುದಿಲ್ಲ. ರೈತರಿಗೆ ಕ್ರಮೇಣ ವಸ್ತುಸ್ಥಿತಿ ಅರ್ಥವಾಗುತ್ತಿದೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.
ಸಾವಯವದತ್ತ ಆಕರ್ಷಣೆ:ಸರ್ಕಾರ, ಇಲಾಖೆ, ಕೃಷಿ ವಿವಿಗಳ ನಿರಂತರ ಪ್ರಯತ್ನ ಹಾಗೂ ಪ್ರಗತಿಪರ ರೈತರ ಪ್ರೇರಣೆಯಿಂದ ಸಾವಯವ ಕೃಷಿಯತ್ತ ರೈತರು ಆಕರ್ಷಿರಾಗುತ್ತಿದ್ದಾರೆ. ಅನ್ನದಾತರ ಸಂಕಷ್ಟ ನಿವಾರಣೆ, ರಾಸಾಯನಿಕ ಕೃಷಿಯಿಂದ ಮುಕ್ತಿ, ಉತ್ಪಾದನೆ ವೆಚ್ಚ ಕಡಿತ, ಪರಿಸರ ಸಂರಕ್ಷಣೆ ಹೀಗೆ ಬಹು ಪ್ರಯೋಜನಗಳು ಸಾವಯವ ಕೃಷಿಯಲ್ಲಿವೆ. ಸಾವಯವ ಕೃಷಿ ಮಹತ್ವವನ್ನು ಅರಿತುಕೊಂಡು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರ 2004ರಲ್ಲಿ ಸಾವಯವ ಕೃಷಿ ನೀತಿ ಜಾರಿಗೊಳಿಸಿದೆ. ಸುಸ್ಥಿರ ಕೃಷಿ ಪದ್ಧತಿಯೆಂದು ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ. 2004ರಲ್ಲಿ 2,500 ಹೆಕ್ಟೇರ್​ಗಳಷ್ಟಿದ್ದ ಪ್ರಮಾಣೀಕೃತ ಸಾವಯವ ಕೃಷಿ ಪ್ರದೇವು 2021ರ ಅಂತ್ಯಕ್ಕೆ 2,09,400 ಹೆಕ್ಟೇರ್​ಗೆ (ಸುಮಾರು ಐದು ಲಕ್ಷ ಎಕರೆ) ವಿಸ್ತರಣೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಅತಿಯಾದ ರಸಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಮಣ್ಣಿನಲ್ಲಿ ಪೋಷ ಕಾಂಶಗಳು ನಶಿಸುತ್ತಿವೆ, ರೈತರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿಗೆ ಆದ್ಯತೆ ನೀಡಿದ್ದು, ದೇಶದಲ್ಲಿಯೇ ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ.
|ಬಿ.ಸಿ.ಪಾಟೀಲ್ಕೃಷಿ ಸಚಿವ

ತುಲನಾತ್ಮಕ ಅಧ್ಯಯನ, ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕೊಟ್ಟಿಗೆ ಗೊಬ್ಬರ ಬಳಕೆ ಶೇ.80 ಕುಸಿದು, ರಾಸಾಯನಿಕ ಗೊಬ್ಬರ ಬಳಕೆ ಶೇ.120 ಏರಿಕೆಯಾಗಿದೆ. ಕೃಷಿ ಜಮೀನಿಗೆ ಸಾವಯವ ಅಂಶಗಳನ್ನು ಹೆಚ್ಚೆಚ್ಚು ಸೇರಿಸಲು ಕೈಗೊಳ್ಳಬೇಕಾದ ಪ್ರೋತ್ಸಾಹದಾಯಕ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
|ಹನುಮನಗೌಡ ಬೆಳಗುರ್ಕಿರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ
ಸರ್ಕಾರದಿಂದ ನೈಸರ್ಗಿಕ ಕೃಷಿ ಪ್ರಯೋಗ:ಸಾವಯವ ಜತೆಗೆ ನೈಸರ್ಗಿಕ ಕೃಷಿ ಪ್ರಯೋಗಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ರಾಸಾಯನಿಕ ಮುಕ್ತ ಕೃಷಿಯತ್ತ ಮಹತ್ವದ ಹೆಜ್ಜೆಯಿರಿಸಿದೆ. ನೇರವಾಗಿ ರೈತರ ಹೊಲಗಳಿಗೆ ಕೊಂಡೊಯ್ದರೆ ಕಷ್ಟ-ನಷ್ಟ ಅನುಭವಿಸಲಿದ್ದಾರೆ ಎಂಬ ಕಾರಣಕ್ಕೆ ಕೃಷಿ/ತೋಟಗಾರಿಕೆ ವಿವಿಗಳ ತಲಾ 1,000 ಎಕರೆಯಲ್ಲಿ ಸಹಜ ಕೃಷಿಗೆ ಮುಂದಾಗಿದೆ. ರೈತರಿಗೆ ಪ್ರೇರಣೆ ನೀಡುವುದು ಈ ಪ್ರಯೋಗದ ಮುಖ್ಯ ಉದ್ದೇಶ ಎಂದು 2022-23ನೇ ಸಾಲಿನ ಬಜೆಟ್​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಸಾರಜನಕ ಸ್ಥಿರೀಕರಣ, ಜೈವಿಕ ವಿಶ್ಲೇಷಣೆ ಮುಂತಾದ ಅಧ್ಯಯನ ಕೈಗೊಂಡ ನಂತರ ರೈತರ ಹೊಲಗಳಿಗೆ ವಿಸ್ತರಿಸಲು ತೀರ್ವನಿಸಿದ್ದಾರೆ.
ಜಿಲ್ಲಾವಾರು ಪರಿಸ್ಥಿತಿ:ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಧಿಕ 10,076.1 ಹೆಕ್ಟೇರ್ ಸಾಗುವಳಿ ಭೂಮಿ ಫಲವತ್ತತೆ ಹಾಳಾಗಿದೆ. ಬಳ್ಳಾರಿ- 8794.1, ರಾಯಚೂರು- 5093.3, ದಾವಣಗೆರೆ- 5047.3 ನಂತರದ ಸ್ಥಾನದಲ್ಲಿದೆ. ಆದರೆ, ಅತಿ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಕೇವಲ 1652.9 ಹೆಕ್ಟೇರ್ ಭೂಮಿ ಮಾತ್ರ ಫಲವತ್ತತೆ ಕಳೆದುಕೊಂಡಿರುವುದು ವಿಶೇಷ. ತೋಟಗಾರಿಕೆ ಬೆಳೆ, ನೀರು ಮಿತವ್ಯಯಕ್ಕೆ ಹೆಸರಾದ ಕೋಲಾರ ಜಿಲ್ಲೆಯಲ್ಲಿ ಭೂಮಿ ಗುಣಮಟ್ಟ ಉತ್ತಮವಾಗಿದ್ದು, ಶ್ರೀನಿವಾಸಪುರ ತಾಲೂಕಿನ 17.7 ಹೆಕ್ಟೇರ್ ಜಮೀನಿನ ಫಲವತ್ತತೆ ಹಾಳಾಗಿದೆ. ಒಟ್ಟಾರೆ ರಾಜ್ಯದಲ್ಲಿ 41816.80 ಹೆಕ್ಟೇರ್ ಜಮೀನು ಸವಳು-ಜವಳಾಗಿದೆ.
ಭಗ್ನ ಪ್ರೇಯಸಿ ಉಪನ್ಯಾಸಕಿ; ಪ್ರಿಯಕರನ ಮದುವೆ ದಿನವೇ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + five =
Remember me
