ಉಡುಪಿ:ರಸ್ತೆ ಪಕ್ಕದ ನದಿಗೆ, ಕೆರೆಗೆ ಘನವಾಹನಗಳು ಬೀಳುವುದು ಹೊಸದೇನಲ್ಲ. ಆದರೆ ಇಲ್ಲೊಂದು ಕಡೆ ಲಾರಿಯೊಂದು ಬಾವಿಗೆ ಬಿದ್ದಿರುವಂಥ ಆಶ್ಚರ್ಯಕರ ಅಪಘಾತ ಸಂಭವಿಸಿದೆ. ಲಾರಿ ಬಾವಿಗೆ ಬಿದ್ದಿದೆ ಎಂದರೆ ಬರೀ ಮಾತಲ್ಲಿ ಹೇಳಿದರೆ ಯಾರಾದರೂ ಒಮ್ಮೆ ಅನುಮಾನದಿಂದ ನೋಡುವುದು ಸಹಜ. ಆದರೆ ಇಲ್ಲಿ ಲಾರಿ ಮಾತ್ರವಲ್ಲ, ಅದರೊಂದಿಗೆ ಮೂಟೆಗಟ್ಟಲೆ ಗೊಬ್ಬರ ಕೂಡ ಬಾವಿಪಾಲಾಗಿದೆ!
ಉಡುಪಿ ಜಿಲ್ಲೆಯ ಕಾರ್ಕಳದ ಟಿಎಪಿಎಂಸಿ ಬಳಿ ಚಾಲಕ ಹಾಗೂ ಕ್ಲೀನರ್​ ಇಬ್ಬರ ಅಜಾಗರೂಕತೆಯಿಂದಾಗಿ ಇಂಥದ್ದೊಂದು ಅಪಘಾತ ಸಂಭವಿಸಿದೆ. ಗೊಬ್ಬರ ತುಂಬಿದ್ದ ಲಾರಿಯನ್ನು ಚಾಲಕ ರಿವರ್ಸ್ ತೆಗೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಬಾವಿಗೆ ಹಿಂಭಾಗ ಜಾರಿದೆ. ಬಳಿಕ ಇಡೀ ಲಾರಿ ಮುಂಭಾಗ ಮೇಲ್ಮುಖವಾಗಿ ಬಾವಿಗೆ ಜಾರಿದ್ದು, 30 ಅಡಿ ಆಳದ ಬಾವಿಯೊಳಗೆ ಲಾರಿ ಸಿಲುಕಿಕೊಂಡಿದೆ.
ಈ ಲಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ರಸಗೊಬ್ಬರ ತುಂಬಿಕೊಂಡು ಬರಲಾಗಿತ್ತು. ಲಾರಿಯಲ್ಲಿದ್ದ ಒಟ್ಟು 1.36 ಲಕ್ಷ ಮೊತ್ತದ, 20 ಟನ್​ ಗೊಬ್ಬರ ಬಾವಿ ಪಾಲಾಗಿದೆ. ಚಾಲಕ ಹಾಗೂ ಕ್ಲೀನರ್ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
https://www.facebook.com/VVani4U/videos/818098465622476/
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 − 11 =
Remember me
