|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ರಸಗೊಬ್ಬರ ಬೆಲೆ, ಕಾರ್ವಿುಕರ ಕೂಲಿ, ಟ್ರಾ್ಯಕ್ಟರ್ ಸೇರಿದಂತೆ ಕೃಷಿ ಯಂತ್ರಗಳ ಬಾಡಿಗೆ ಎಲ್ಲವೂ ಪ್ರತಿವರ್ಷ ಏರುಗತಿಯಲ್ಲಿಯೇ ಸಾಗಿ ರೈತರನ್ನು ಹೈರಾಣಾಗಿಸುತ್ತವೆ. ಈ ಬಾರಿ ರಸಗೊಬ್ಬರಗಳ ಬೆಲೆ ಇನ್ನಿಲ್ಲದಂತೆ ಏರಿಕೆ ಕಂಡಿದೆ. ಇದರೊಂದಿಗೆ ಕೀಟನಾಶಕ ಹಾಗೂ ಇತರ ವಸ್ತುಗಳ ಬೆಲೆ ಕೈಗೆಟುಕುವಂತಿಲ್ಲ. ವಿಪರ್ಯಾಸವೆಂದರೆ, ಇಷ್ಟೆಲ್ಲ ಖರ್ಚು ಮಾಡಿ ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಸರ್ಕಾರವೂ ಸೂಕ್ತ ಬೆಂಬಲ ಬೆಲೆಯನ್ನು ಘೋಷಿಸುತ್ತಿಲ್ಲ. ಹೀಗಾಗಿ ಮುಂದಿನ ಹಂಗಾಮಿಗೆ ಸಿದ್ಧವಾಗಬೇಕಾದ ರೈತರು ಕೃಷಿ ಚಟುವಟಿಕೆಗಳಿಂದಲೇ ವಿಮುಖರಾಗುವಂಥ ಪರಿಸ್ಥಿತಿ ನಿರ್ವಣವಾಗುತ್ತಿದೆ.
ಡಿಎಪಿ, ಎನ್​ಪಿಕೆ, ಯೂರಿಯಾ, ಪೊಟಾಷ್ ಸೇರಿ ವಿವಿಧ ಬಗೆಯ ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾಮಾನ್ಯವಾಗಿ 50 ಕೆಜಿ ಚೀಲಕ್ಕೆ 50 ರಿಂದ 100 ರೂ.ಗೆ ಹೆಚ್ಚಳ ಮಾಡುತ್ತಿದ್ದ ಕಂಪನಿಗಳು ಈ ವರ್ಷ ಶೇ.15 ರಿಂದ 25 ಏರಿಕೆ ಮಾಡಿವೆ. ಅದರಲ್ಲಿಯೂ ಜೂನ್​ನಲ್ಲಿ ರಸಗೊಬ್ಬರ ಬೆಲೆ ಏರಿಕೆ ಮಾಡುವ ಬದಲು ಏಪ್ರಿಲ್​ನಲ್ಲಿಯೇ 50 ಕೆಜಿ ಚೀಲಕ್ಕೆ 150 ರಿಂದ 400 ರೂ. ವರೆಗೆ ಬೆಲೆ ಹೆಚ್ಚಳ ಮಾಡಿವೆ. ಹೀಗೆ ಏರಿದ ದರ ವರ್ಷ ಮುಗಿಯುತ್ತ ಬಂದರೂ ಇಳಿಯಲೇ ಇಲ್ಲ. ರೈತರು ಮುಂಗಾರು ಬಿತ್ತನೆಗೆ ಅನಿವಾರ್ಯವಾಗಿ ದುಪ್ಪಟ್ಟು ಹಣ ಕೊಟ್ಟು ರಸಗೊಬ್ಬರ ಖರೀದಿಸಬೇಕಾಯಿತು. ಇದಲ್ಲದೆ ಕೊಟ್ಟಿಗೆ ಗೊಬ್ಬರ, ನೈಸರ್ಗಿಕ ಗೊಬ್ಬರ ಕೂಡ ತುಟ್ಟಿಯಾಗಿವೆ.
ಕೈಗಾರಿಕೆ, ನಗರ, ಪಟ್ಟಣದತ್ತ ಗ್ರಾಮೀಣ ಜನರು ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ವಿುಕರ ಸಂಖ್ಯೆ ದಿನೇದಿನೆ ಇಳಿಮುಖವಾಗುತ್ತಿದೆ. ಪರಿಣಾಮವಾಗಿ 450 ರೂ. ಇದ್ದ ಕೂಲಿ 700 ರೂ. ವರೆಗೂ ಮುಟ್ಟಿದೆ. ಅಂದರೆ ಶೇ.90 ಹೆಚ್ಚಳವಾಗಿದೆ. ಇದರಿಂದಲೂ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ. ಮತ್ತೊಂದೆಡೆ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ, ಕೃಷಿ ಯಂತ್ರಗಳ ಬೆಲೆಯಲ್ಲಿ ಹೆಚ್ಚಳವಾದ ಪರಿಣಾಮ ಬಾಡಿಗೆ ದರ ಸಹ ದುಪ್ಪಟ್ಟಾಗಿದೆ. ಟ್ರಾ್ಯಕ್ಟರ್​ನಲ್ಲಿ ಉಳುಮೆ ಮಾಡಲು 1 ಗಂಟೆಗೆ 500 ರೂ. ಇದ್ದ ಬಾಡಿಗೆ ಈಗ 750 ರಿಂದ 800 ರೂ.ಗೆ ಹೆಚ್ಚಳವಾಗಿದೆ. ಇದೇ ರೀತಿ ಎಲ್ಲ ರೀತಿಯ ಕೃಷಿ ಯಂತ್ರಗಳ ಬಾಡಿಗೆ ಸಹ ದ್ವಿಗುಣವಾಗಿದೆ. ಪ್ರತಿವರ್ಷ ಕೃಷಿಗೆ ಬೇಕಾದ ರಸಗೊಬ್ಬರ, ಯಂತ್ರೋಪಕರಣ, ಕೂಲಿ ಹೆಚ್ಚಳವಾಗುತ್ತಿದೆ. ಗೊಬ್ಬರ ಬಳಸದಿದ್ದರೆ ಫಸಲು ಇಲ್ಲ ಎನ್ನುವ ಸ್ಥಿತಿಗೆ ರೈತರು ತಲುಪಿದ್ದಾರೆ. ಬೆಲೆ ಏರಿಕೆ ಆಘಾತದಿಂದ ಚೇತರಿಸಿಕೊಳ್ಳಲು ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ಕೊರಗು ರೈತರಿಂದ ದೂರಾಗುತ್ತಿಲ್ಲ. ಸೂಕ್ತ ಬೆಂಬಲ ಬೆಲೆಯೂ ದೊರೆ ಯುತ್ತಿಲ್ಲ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ.
ಕೃತಕ ಅಭಾವ ಸೃಷ್ಟಿಸುವ ಜಾಲ:ಪ್ರತೀ ವರ್ಷವೂ ಕೃಷಿ ಚಟುವಟಿಕೆ ಬಿರುಸು ಪಡೆಯುವ ಸಂದರ್ಭದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಸಲಾಗುತ್ತದೆ. ಕೇಂದ್ರ ಸರ್ಕಾರ ನಿರಂತರ ಬೆಲೆ ಏರಿಕೆಯ ಜತೆಗೆ ಅಂಗಡಿ ಮಾಲೀಕರ ಕಳ್ಳಾಟದಿಂದ ರೈತರು ದುಪ್ಪಟ್ಟು ಬೆಲೆ ತೆರಬೇಕಾಗುತ್ತಿದೆ. ಇದರ ಜತೆಗೆ ರೈತರ ಹೆಸರಲ್ಲಿ ಸಬ್ಸಿಡಿ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲಗಳು ಸಕ್ರಿಯವಾಗಿದೆ.
ಪ್ರಸಕ್ತ ವರ್ಷದ ಏಪ್ರಿಲ್​ನಿಂದ ನವೆಂಬರ್​ವರೆಗೆ 46.14 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ 187.21 ಲಕ್ಷ ಟನ್ ಯೂರಿಯಾ ಉತ್ಪಾದನೆ ಆಗಿದೆ. ಬೇಡಿಕೆ ಹೆಚ್ಚಿದ್ದ ಕಾರಣ ಹೊರ ದೇಶಗಳಿಂದ ಯೂರಿಯಾ ಖರೀದಿಸಲಾಗಿದೆ.
|ಭಗವಂತ ಖೂಬಾರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ (ಸಂಸತ್​ಗೆ ಮಾಹಿತಿ)
ರೈತರ ಹಿತಾಸಕ್ತಿ ಕಾಯಲು ಸರ್ಕಾರ ಸಿದ್ಧವಿದೆ. ರಸಗೊಬ್ಬರದ ಕೊರತೆಯಿಲ್ಲ. ಕಾಳಸಂತೆಕೋರರು, ಕೃತಕ ಅಭಾವ ಸೃಷ್ಟಿಸುವವರ ಮಾತಿಗೆ ಕಿವಿಗೊಡಬೇಡಿ. ರಸಗೊಬ್ಬರ ಬೆಲೆ ಏರಿಕೆ ಮತ್ತು ಕೊಬ್ಬರಿ ಬೆಲೆ ಇಳಿಕೆ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ.
|ಬಿ.ಸಿ. ಪಾಟೀಲ್ಕೃಷಿ ಸಚಿವ
ನ್ಯಾನೋ ಗೊಬ್ಬರ:ವರ್ಷದ ಆರಂಭದಲ್ಲಿ ನ್ಯಾನೋ ಯೂರಿಯಾವನ್ನು ರೈತರಿಗೆ ಪರಿಚಯಿಸಲಾಯಿತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ರೈತರಿಂದ ಬಳಕೆಯಾಗುತ್ತಿಲ್ಲ. ಬೆಳೆಗೆ ಯಾವ ರೀತಿ ಸಿಂಪಡಿಸಬೇಕು ಮತ್ತು ಅದರಿಂದ ಇಳುವರಿ ಸಿಗುತ್ತಾ ಎಂಬ ಗೊಂದಲದಲ್ಲಿ ರೈತರು ನ್ಯಾನೋ ಯೂರಿಯಾವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ.
ಕೊಬ್ಬರಿ ಬೆಲೆ ದಿಢೀರ್ ಕುಸಿತ:ಕೊಬ್ಬರಿ ಬೆಲೆ ದಿಢೀರನೆ ಇಳಿಕೆ ಆಗಿರುವುದು ರೈತರಿಗೆ ದೊಡ್ಡ ನಷ್ಟ ಉಂಟಾಗಿದೆ. ಅದಕ್ಕಾಗಿ ಬೆಂಬಲ ಬೆಲೆ 11 ಸಾವಿರ ರೂ.ನಿಂದ 16,500 ರೂ.ಗೆ ಏರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಪ್ರಸ್ತುತ 1 ಕ್ವಿಂಟಾಲ್ ಉಂಡೆ ಕೊಬ್ಬರಿಗೆ 11 ಸಾವಿರ ರೂ. ಬೆಂಬಲ ಬೆಲೆ ಮತ್ತು 2 ಸಾವಿರ ರೂ. ಪ್ರೋತ್ಸಾಹ ಧನ ಸಿಗಲಿದೆ. ಸರ್ಕಾರ ಕೊಬ್ಬರಿ ಖರೀದಿಸದ ಪರಿಣಾಮ ಖಾಸಗಿ ಟೆಂಡರ್​ನಲ್ಲಿ 11,000 ರಿಂದ 11,500 ರೂ.ಗೆ ದರ ನಿಗದಿ ಮಾಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯೂ ಸಿಗುತ್ತಿಲ್ಲ. ಕಳೆದ ವರ್ಷ 15 ರಿಂದ 16 ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತು. ಆದರಿಂದ 16,500 ರೂ.ಗೆ ಬೆಂಬಲ ಬೆಲೆ ನಿಗದಿ ಮಾಡಿದರೆ ಖಾಸಗಿ ಟೆಂಡರ್​ನಲ್ಲಿ 16 ಸಾವಿರ ರೂ. ಸಿಗಲಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಡರಾತ್ರಿ ಕಳೆದರೂ ಹೋಟೆಲ್ ಓಪನ್; ಬೆಳಗಿನ ಜಾವ 3.30ರ ವರೆಗೂ ವಹಿವಾಟು: ಎಲ್ಲಿ, ಏಕೆ, ಎಷ್ಟು ದಿನ?

ಮಹಿಳೆಯ ಒಳ ಉಡುಪು, ಸೀರೆ, ಬಿಂದಿ, ಬಳೆ ಧರಿಸಿದ್ದ ಹತ್ತನೇ ತರಗತಿ ಹುಡುಗ ಮನೆಯಲ್ಲಿ ಶವವಾಗಿ ನೇತಾಡುತ್ತಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
