ಬೆಂಗಳೂರು :ಕರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಮತ್ತಷ್ಟು ಟಫ್ ರೂಲ್ಸ್ಅನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಹೋಳಿ, ಯುಗಾದಿ, ಶಬ್ ಎ ಬಾರಾತ್, ಗುಡ್ ಫ್ರೈಡೇ ಮುಂತಾದ ಹಬ್ಬಹರಿದಿನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವುದರ ಮೇಲೆ ಸರ್ಕಾರ ನಿಷೇಧ ವಿಧಿಸಿದೆ.
ಮುಂಬರಲಿರುವ ಈ ಹಬ್ಬಗಳ ಪ್ರಯುಕ್ತ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಮೈದಾನ, ಮಾರುಕಟ್ಟೆ, ಪಾರ್ಕ್ ಅಥವಾ ಪ್ರಾರ್ಥನಾ ಮಂದಿರಗಳಲ್ಲಿ ಜನರು ಸೇರದ ಹಾಗೆ ಕ್ರಮ ತೆಗೆದುಕೊಳ್ಳಬೇಕೆಂದು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಬಿಬಿಎಂಪಿ ಕಮಿಷನರ್​ಗೆ ಇಂದು ಆದೇಶ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ:ಮಾಲ್​ಗೆ ಹೋಗುವ ಮಂದಿಗೆ ಕರೊನಾ ಬರೆ ! ದುಡ್ಡು ತೆತ್ತು ಪರೀಕ್ಷೆ ಮಾಡಿಸಿಕೊಳ್ಳಿ !
ಈ ಆದೇಶದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಕರೊನಾ ಸೋಂಕು ನಿಯಮಿತವಾಗಿ ಹೆಚ್ಚುತ್ತಿದೆ. ಅದನ್ನು ತಡೆಯಲು ತೆಗೆದುಕೊಳ್ಳುವ ಕ್ರಮಗಳಿಗೆ ಈ ಹಬ್ಬಗಳ ಸಾರ್ವಜನಿಕ ಆಚರಣೆಯಿಂದ ಹೊಡೆತ ಬೀಳುವುದರಿಂದ ಈ ನಿಷೇಧ ವಿಧಿಸಲಾಗುತ್ತಿದೆ ಎಂದು ವಿವರಿಸಲಾಗಿದೆ. ಈ ಆದೇಶವನ್ನು ಮೀರಿ ಹಬ್ಬಗಳ ಆಚರಣೆಗೆ ಪ್ರಯತ್ನಿಸುವುದು ಅಪರಾಧವೆಂದು ಪರಿಗಣಿಸಲ್ಪಡುವುದು ಎನ್ನಲಾಗಿದೆ.
‘ರಾಜ್ಯದ ಜನತೆ ಸಂಕಷ್ಟದಲ್ಲಿದಾರೆ, ದಿಕ್ಕು ತಪ್ಪಿಸಬೇಡಿ’ : ಸಿಡಿ ಲೇಡಿಗೆ ಎಚ್​ಡಿಕೆ ಸಲಹೆ

‘ಫರಹಾನ್ ಹ್ಯಾಸ್ ಟು ಫಾಲೋ ರಾಂಚೋ’ ಎಂದು ಕರೊನಾ ಸುದ್ದಿ ಕೊಟ್ಟ ನಟ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
