| ಭರತ್ ಶೆಟ್ಟಿಗಾರ್ ಮಂಗಳೂರು
ಹಿಂದು ಪಂಚಾಂಗದ ಪ್ರಕಾರ ಈ ಬಾರಿ ಆಶ್ವೀಜ (ಅಶ್ವಿನಿ) ಅಧಿಕ ಮಾಸವಾಗಿ ಬಂದಿರುವುದರಿಂದ ಪ್ರಮುಖ ಹಬ್ಬಗಳಾದ ಶರನ್ನವರಾತ್ರಿ ಮತ್ತು ದೀಪಾವಳಿ ಒಂದು ತಿಂಗಳಷ್ಟು ತಡವಾಗಿ ಬರಲಿವೆ.
ಮಹಾಲಯ ಅಮಾವಾಸ್ಯೆ ಮರುದಿನದಿಂದ ಸಾಮಾನ್ಯವಾಗಿ ನವರಾತ್ರಿ ಉತ್ಸವಗಳು ಆರಂಭವಾಗುತ್ತವೆ. ಆದರೆ ಈ ವರ್ಷ ಅದೇ ದಿನ ಅಧಿಕ ಮಾಸ (ಅಧಿಕ ಅಶ್ವೀಜ ತಿಂಗಳು) ಶುರುವಾಗುವುದರಿಂದ ಸೆ.17ರಂದು ಮಹಾಲಯ ಅಮಾವಾಸ್ಯೆ ಬಂದರೂ, ಸುಮಾರು 1 ತಿಂಗಳು ಕಳೆದು ನವರಾತ್ರಿ ಆರಂಭವಾಗಲಿದೆ.
ಮಾಘ ಹೊರತುಪಡಿಸಿ, ಉಳಿದ ಮಾಸಗಳು ಒಮ್ಮೆಯಾದರೂ ಅಧಿಕ ಮಾಸವಾಗುತ್ತವೆ. ಯಾವ ಚಾಂದ್ರಮಾಸದಲ್ಲಿ ಸಂಕ್ರಾಂತಿ ನಡೆಯುವುದಿಲ್ಲವೋ ಅದನ್ನು ಮಲಮಾಸ ಅಥವಾ ಅಧಿಕ ಮಾಸ ಎನ್ನುತ್ತಾರೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ ಎನ್ನುತ್ತಾರೆ ಮಂಗಳೂರು ಪಂಚಾಂಗ ತಜ್ಞ ನರಸಿಂಹ ಆಚಾರ್.
ಈ ಬಾರಿಯ ಆಚರಣೆ
ಈ ಬಾರಿ ಸೆ.18ರಿಂದ ಅಧಿಕ ಅಶ್ವೀಜ ಮಾಸ ಆರಂಭವಾಗಿ, ಅ.16ರವರೆಗೆ ಇರುತ್ತದೆ. ಅ.17ರಿಂದ ‘ನಿಜ ಅಶ್ವೀಜ’ ಮಾಸ ಶುರುವಾಗಲಿದ್ದು, ಅಂದೇ ಶರನ್ನವರಾತ್ರಿ ಆರಂಭವಾಗಲಿದೆ. ಅ.24ಕ್ಕೆ ಆಯುಧ ಪೂಜೆ, 25ಕ್ಕೆ ವಿಜಯದಶಮಿ, ನ. 14ಕ್ಕೆ ನರಕ ಚತುರ್ದಶಿ, ನ.15ರಂದು ಬಲಿಪಾಡ್ಯ ಇರಲಿದೆ. ಎರಡು ಅಷ್ಟಮಿ: ಹಿಂದಿನ ಕೆಲ ವರ್ಷಗಳಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿ 2 ಸಲ ಆಚರಣೆ ಆಗಲಿದೆ. ವಿವಿಧೆಡೆ ಆ.11ರಂದು ಅಷ್ಟಮಿ, 12ರಂದು ಮೊಸರು ಕುಡಿಕೆ ಆಚರಿಸಲ್ಪಟ್ಟರೆ, ಉಡುಪಿಯಲ್ಲಿ ಸೆ.10ರಂದು ಕೃಷ್ಣ ಜಯಂತಿ ಮತ್ತು 11ರಂದು ವಿಟ್ಲ ಪಿಂಡಿ ಆಚರಣೆ ಆಗಲಿದೆ.
ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಎಸಿಪಿ ಸತೀಶ್​! ಕರೊನಾ ವಿರುದ್ಧ ಗೆಲ್ಲೋಕೆ ಐಡಿಯಾ ಕೊಟ್ರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 7 =
Remember me
