ಬೆಂಗಳೂರು:ಅತ್ತ ದೇಶದ ಆರ್ಥಿಕತೆಯ ಮೇಲೆ ಕರೊನಾ ಮಾರಿಯ ಕಾಮೋಡ ಕಾಣಿಸಿಕೊಂಡರೆ ಇತ್ತ ಕರ್ನಾಟಕಕ್ಕೆ ಎಚ್1ಎನ್1, ಡೆಂಘ, ಕರುಳುಬೇನೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ದಾಂಗುಡಿ ಇಟ್ಟಿವೆ. ರಾಜ್ಯದ ವಿವಿಧೆಡೆ ಕಳೆದ 2 ತಿಂಗಳ ಅವಧಿಯಲ್ಲಿ 215 ಮಂದಿಯಲ್ಲಿ ಎಚ್1ಎನ್1 ಸೋಂಕು ದೃಢಪಟ್ಟಿದ್ದು, ಕಳೆದೊಂದು ವಾರದಲ್ಲೇ ಮೂವರು ಮೃತಪಟ್ಟಿದ್ದಾರೆ. ಕಳೆದ ವರ್ಷ ಎಚ್1ಎನ್1ಗೆ 96 ಮಂದಿ ಬಲಿಯಾಗಿದ್ದರು. ಇದೀಗ ಕೇವಲ 60 ದಿನಗಳಲ್ಲಿ ಬೆಂಗಳೂರಿನಲ್ಲೇ 112 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಉಡುಪಿಯಲ್ಲಿ 48, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15, ಶಿವಮೊಗ್ಗದಲ್ಲಿ 10, ಬೆಂಗಳೂರು ಗ್ರಾಮಾಂತರ 7 (1ಸಾವು), ದಾವಣಗೆರೆಯಲ್ಲಿ 7 (1 ಸಾವು), ತುಮಕೂರಿನಲ್ಲಿ 1 (1 ಸಾವು) ಪ್ರಕರಣ ವರದಿಯಾಗಿದೆ.
ಎಚ್1ಎನ್1 ರೋಗ ಲಕ್ಷಣ ಆಧರಿಸಿ ಈವರೆಗೆ 2028 ಶಂಕಿತರ ಸ್ವಾ್ಯಬ್ (ಗಂಟಲಿನ ದ್ರವ) ಮಾದರಿಯನ್ನು ಪರೀಕ್ಷಿಸಲಾಗಿದ್ದು, 215 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಎಚ್1ಎನ್1ಗೆ ಬೇಸಿಗೆ ಮಳೆ ಎಂದು ಯಾವುದೇ ಕಾಲವಿಲ್ಲ, ಇದು ಗಾಳಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ ಆಗಿರುವುದರಿಂದ ಮುನ್ನೆಚ್ಚರಿಕೆ ಅತ್ಯಗತ್ಯ ಎನ್ನುತ್ತಾರೆ ವೈದ್ಯರು.
ರೋಗಗಳ ಭೀತಿ:ಬಿಸಿಲ ತೀವ್ರತೆಯಿಂದಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ರಾಜ್ಯಾದ್ಯಂತ ವೈರಲ್ ಫೀವರ್​ನಿಂದ ಚಿಕಿತ್ಸೆ ಪಡೆಯುವವರು ಹೆಚ್ಚಿದ್ದಾರೆ. ರಾಜ್ಯದಲ್ಲಿ ಈವರೆಗೆ 18,044 ಕರುಳುಬೇನೆ, (ಗ್ಯಾಸ್ಟ್ರೋಎಂಟರೈಟಿಸ್) ಹಾಗೂ 8,717 ಟೈಫಾಯಿಡ್, 412 ವೈರಲ್ ಹೆಪಟೈಟಿಸ್ ಪ್ರಕರಣಗಳು ವರದಿಯಾಗಿವೆ.
ಕಲುಷಿತ ಸೇವನೆ ಕಾರಣ:ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸಾಮಾನ್ಯ. ಜತೆಗೆ ಜಾತ್ರೆಗಳು, ಉತ್ಸವಗಳು, ಮದುವೆ, ಸಭೆ ಸಮಾರಂಭಗಳು ಹೆಚ್ಚು ನಡೆಯುತ್ತವೆ. ಈ ವೇಳೆ ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದಾಗಿ ಕರುಳುಬೇನೆ, ಕಾಲರಾ, ಟೈಫಾಯಿಡ್, ಜಾಂಡೀಸ್, ನ್ಯುಮೋನಿಯಾ, ಗಂಟಲು ಬೇನೆಯಂತಹ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಬಿಸಿಲ ಝುಳಕ್ಕೆ ದಣಿವಾರಿಸಿಕೊಳ್ಳಲು ಜನರು ರಸ್ತೆ ಬಳಿ ಕತ್ತರಿಸಿ ಮಾರುವ ಹಣ್ಣುಗಳು ಹಾಗೂ ತಂಪು ಪಾನೀಯ ಸೇವನೆ ಮಾಡುವುದು ಹೆಚ್ಚು. ಈ ವೇಳೆ ಶುದ್ಧತೆ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡದ ಕಾರಣ ಕರಳುಬೇನೆ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.
ಬಂತು ಮಂಗನ ಕಾಯಿಲೆ
ಸಿದ್ದಾಪುರ:ತಾಲೂಕಿಗೆ ಈ ವರ್ಷವೂ ಮಂಗನ ಕಾಯಿಲೆ ಪ್ರವೇಶವಾಗಿದೆ. ತಾಲೂಕಿನ ಇಟಗಿ, ಹೊನ್ನೆಘಟಗಿ ಸುತ್ತಮುತ್ತ ಒಂದು ತಿಂಗಳಿನಿಂದಿಚೆಗೆ 15ಕ್ಕೂ ಹೆಚ್ಚು ಮಂಗಗಳು ಮೃತಪಟ್ಟಿವೆ. ಈ ಭಾಗದ ಒಬ್ಬರಿಗೆ ಮಂಗನ ಕಾಯಿಲೆ ಕಂಡುಬಂದಿದೆ. ಅವರು ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಿಸಿ ರಕ್ತ ತಪಾಸಣೆ ನಡೆಸಿದ ನಂತರ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.
ಸಾವಿರ ಗಡಿ ದಾಟಿದ ಡೆಂಘ
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಡೆಂಘ ಈಗಾಗಲೇ1,090 ಮಂದಿಯನ್ನು ಬಾಧಿಸಿದೆ. 538 ಚಿಕೂನ್ ಗುನ್ಯಾ ಪ್ರಕರಣಗಳು ವರದಿ ಯಾಗಿವೆ. ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಪಸ್ ಸೊಳ್ಳೆಗಳಿಂದ ಹರಡುವ ಡೆಂಘ ಈಗ ಎಲ್ಲ ಕಾಲದಲ್ಲೂ ಕಾಡಲಾರಂಭಿಸಿದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ಜನ ಹೆಚ್ಚು ದಿನ ನೀರು ಸಂಗ್ರಹಿಸಿಡುತ್ತಾರೆ. ಅಂತಹವರು ಸಂಗ್ರಹಿಸಿದ ನೀರಿನ ಮೇಲೆ ಮುಚ್ಚಳ ಮುಚ್ಚಿ, ಸಕಾಲದಲ್ಲಿ ನೀರು ಬದಲಿಸಿ ಸೊಳ್ಳೆಗಳು ಉಗಮವಾಗದಂತೆ ಎಚ್ಚರವಹಿಸಬೇಕು.
ಎಚ್ಚರಿಕೆ ಕ್ರಮಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
