ಬೆಂಗಳೂರು:ತುಮಕೂರು-ಬೆಂಗಳೂರು ರಸ್ತೆ ಮಾದಾವರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ) ಮೈದಾನದ ಶೆಡ್​ಗಳಲ್ಲಿ ಆಶ್ರಯ ಪಡೆದಿದ್ದ ವಲಸೆ ಕಾರ್ವಿುಕರಲ್ಲಿ 14 ಮಂದಿಗೆ ಜ್ವರ ಕಂಡುಬಂದಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ (ಮೇ 5) ಬೆಳಗ್ಗೆಯೇ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಜ್ವರ ಕಾಣಿಸಿಕೊಂಡ ಕಾರ್ವಿುಕರನ್ನು ಕರೆದೊಯ್ದು ಕ್ವಾರಂಟೈನ್ ಮಾಡಿಸಿ ಗಂಟಲದ್ರವವನ್ನು ಪಡೆದು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕರೊನಾ ಸೋಂಕು ದೃಢವಾದರೆ ಆಶ್ರಯ ಪಡೆದಿರುವ ಮೂರೂವರೆ ಸಾವಿರ ಕಾರ್ವಿುಕರು ಅತಂತ್ರ ರಾಗಲಿದ್ದಾರೆ. ಅವರ ಮೇಲೆ ನಿಗಾವಹಿಸುವುದು ಸರ್ಕಾರಕ್ಕೂ ತಲೆನೋವಾಗಲಿದೆ. ಹೊರ ಜಿಲ್ಲೆ ಮತ್ತು ಹೊರರಾಜ್ಯಗಳಿಗೆ ತೆರಳಲು ವಲಸೆ ಕಾರ್ವಿುಕರಿಗೆ ಸರ್ಕಾರ ಕೆಎಸ್​ಆರ್​ಟಿಸಿ ಮತ್ತು ರೈಲು ವ್ಯವಸ್ಥೆ ಮಾಡಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಹೊರ ಜಿಲ್ಲೆಗಳಿಗೆ 83 ಸಾವಿರ ಮತ್ತು ಹೊರ ರಾಜ್ಯಗಳಿಗೆ 10,583 ವಲಸೆ ಕಾರ್ವಿುಕರು ತೆರಳಿದ್ದಾರೆ.
ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿದ್ದ ಬಿಹಾರ, ಜಾರ್ಖಂಡ್ ಸೇರಿ ಹೊರ ರಾಜ್ಯಗಳ ವಲಸೆ ಕಾರ್ವಿುಕರು ರೈಲು ಏರಲು ಭಾನುವಾರ ಹಾಗೂ ಸೋಮವಾರ ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಬಂದಿದ್ದರು. ಅವರನ್ನು ಬರಮಾಡಿಕೊಳ್ಳಲು ಆ ರಾಜ್ಯಗಳಿಂದ ಅನುಮತಿ ಸಿಗದ ಕಾರಣಕ್ಕೆ ಸೋಮವಾರ ಮಾದಾವರ ಬಳಿಯ ಬಿಐಇಸಿಯ ಮೈದಾನದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ವೇಳೆ ಕೆಲ ಮಂದಿ ಕಿಡಿಗೇಡಿಗಳು, ಊರಿಗೆ ಕಳುಹಿಸುವ ನೆಪದಲ್ಲಿ ಕಾರ್ವಿುಕರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ವದಂತಿ ಹಬ್ಬಿಸಿದ್ದರು. ಲಾಕ್​ಡೌನ್​ನಿಂದ ಬಸವಳಿದಿದ್ದ ಕಾರ್ವಿುಕರು ಅದನ್ನು ನಂಬಿ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು.
ಅಧಿಕಾರಿ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಮನವೊಲಿಸಿದ್ದರು. ಅಲ್ಲಿಗೆ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಕಾರ್ವಿುಕರ ಪೈಕಿ 14 ಮಂದಿಗೆ ಜ್ವರ ಕಾಣಿಸಿಕೊಂಡಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರಯೋಗಾಲಯ ವರದಿ ಬುಧವಾರ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಸ ಸ್ಥಳಕ್ಕೆ ಸ್ಥಳಾಂತರ
ಮಂಗಳವಾರ 130 ಬಿಎಂಟಿಸಿ ಬಸ್​ಗಳನ್ನು ವ್ಯವಸ್ಥೆ ಮಾಡಿ ವಲಸೆ ಕಾರ್ವಿುಕರನ್ನು ಆನೇಕಲ್, ಅತ್ತಿಬೆಲೆ, ಶಿವಾಜಿನಗರ ಸೇರಿ ಅವರು ವಾಸವಾಗಿದ್ದ ಸ್ಥಳಕ್ಕೆ ಬಿಡಲಾಗಿದೆ. ಶಂಕಿತರಿಗೆ ಕರೊನಾ ದೃಢವಾದರೆ ಎಲ್ಲರನ್ನೂ ವೈದ್ಯಕೀಯ ನಿಗಾ ಬಂಧನದಲ್ಲಿಡುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಲಿದೆ.
ಇನ್​ಸ್ಪೆಕ್ಟರ್​ಗೆ ವಿಶ್ರಾಂತಿ
ವಲಸೆ ಕಾರ್ವಿುಕರ ಕಲ್ಲು ತೂರಾಟದಿಂದ ಗಾಯಗೊಂಡಿದ್ದ ಪೀಣ್ಯ ಠಾಣೆ ಇನ್​ಸ್ಪೆಕ್ಟರ್ ಮುದ್ದುಕೃಷ್ಣ ಅವರ ತಲೆಗೆ ಹೊಲಿಗೆ ಹಾಕಲಾಗಿದ್ದು, ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಹಲ್ಲೆ ನಡೆಸಿದ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೇಶಕ್ಕೆ 25 ಸಾವಿರ ಕೋಟಿ ರೂ. ಉಳಿತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 5 =
Remember me
