|ಪಂಕಜ ಕೆ.ಎಂ.ಬೆಂಗಳೂರು
ಮುಂಗಾರು ಮಳೆ ಬಿರುಸಾಗುತ್ತಿರುವ ನಡುವೆಯೇ ರಾಜ್ಯದಲ್ಲಿ ಶೀತ ಜ್ವರ ಸೇರಿ ನಾನಾ ಬಗೆಯ ರೋಗಗಳು ಉಲ್ಬಣಿಸಿವೆ. ಒಂದೆಡೆ ಕೋವಿಡ್ ಪ್ರಕರಣಗಳ ಏರಿಕೆ ಕಾಣುತ್ತಿದ್ದರೆ, ಮಕ್ಕಳಿಂದ ವೃದ್ಧರವರೆಗೆ ಡೆಂಘ, ಚಿಕೂನ್ ಗುನ್ಯಾ, ಎಚ್1ಎನ್1, ವೈರಾಣು ಜ್ವರಗಳು ಬಾಧಿಸುತ್ತಿವೆ. ಮೈ ಬಿಸಿ ಕೊಂಚ ಏರಿದರೂ ಆತಂಕಪಡುವ ವಾತಾವರಣ ನಿರ್ವಣವಾಗಿದೆ.
ಬೆಂಗಳೂರು ಸೇರಿ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಎರಡು ವರ್ಷಗಳಿಂದ ಮನೆಯಲ್ಲಿ ಉಳಿದಿದ್ದ ಮಕ್ಕಳು ಇದೀಗ ಶಾಲೆಗೆ ಹೋಗಲು ಪ್ರಾರಂಭಿಸಿದ್ದು, ಅವರಲ್ಲಿ ಕೈ ಕಾಲು ಬಾಯಿ ರೋಗ, ಶೀತಜ್ವರ, ವೈರಾಣು ಜ್ವರಗಳು ಹೆಚ್ಚು ವರದಿಯಾಗುತ್ತಿವೆ. ಕೋವಿಡ್ ನಂತರದಲ್ಲಿ ಯಾವುದೇ ಜ್ವರ ಸೇರಿ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ವೈದ್ಯರು ಪ್ರಯೋಗಾಲಯ ಪರೀಕ್ಷೆಗೆ ಶಿಫಾರಸು ಮಾಡುವುದು ಹೆಚ್ಚಾಗಿದೆ. ಅದರಲ್ಲೂ ಶೀತ, ನೆಗಡಿ, ಕೆಮ್ಮು, ಜ್ವರ ಎಂದ ಕೂಡಲೇ ಕೋವಿಡ್ ಪರೀಕ್ಷೆಗೆ ಸೂಚಿಸಲಾಗುತ್ತಿದೆ.
ಇದರಿಂದ ಜನರ ಜೇಬಿಗೂ ಕತ್ತರಿ ಬೀಳುತ್ತಿದೆ. ಕೋವಿಡ್​ನಿಂದಾಗಿ ಕಳೆದ ಎರಡು ವರ್ಷಗಳಿಂದ ತಗ್ಗಿದ್ದ ಇತರೆ ರೋಗಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 9.65 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 1,740 ಮಂದಿ ಸಾವನ್ನಪ್ಪಿದ್ದಾರೆ. ಇದರ ನಡುವೆಯೇ 2,987 ಡೆಂಘ, 671 ಚಿಕೂನ್ ಗುನ್ಯಾ, 104 ಮಲೇರಿಯಾ, 219 ಎಚ್1ಎನ್1, 131 ಅಕ್ಯೂಟ್ ಎನ್​ಸೆಫಲೈಟಿಸ್ ಸಿಂಡ್ರೋಮ್ (ತೀವ್ರವಾದ ಮಿದುಳು ಜ್ವರ), 53, 439 (1 ಸಾವು) ಗ್ಯಾಸ್ಟ್ರೋ ಎಂಟರೈಟಿಸ್, 16 ಕಾಲರಾ, 17,579 ಟೈಫಾಯ್್ಡ 1,715 ವೈರಲ್ ಹೆಪಟೈಟಿಸ್, 49 (2 ಸಾವು) ಮಂಗನ ಕಾಯಿಲೆ, 288 (1 ಸಾವು) ಇಲಿ ಜ್ವರ ಪ್ರಕರಣಗಳು ವರದಿಯಾಗಿವೆ.
8 ಜಿಲ್ಲೆಗಳಲ್ಲಿ ಜಾಸ್ತಿ:ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಕಲಬುರಗಿ, ರಾಮನಗರ, ರಾಯಚೂರು ಜಿಲ್ಲೆಗಳಲ್ಲಿ ರೋಗಗಳು ಹರಡುವಿಕೆ ಆತಂಕ ಹೆಚ್ಚಿದೆ.
ಜ್ವರ ಹೇಗೆ ಬರುತ್ತದೆ?:ಈಡಿಸ್ ಈಜಿಪ್ಟಿ ಸೊಳ್ಳೆ ಕಚ್ಚುವುದರಿಂದ ಡೆಂಘ ಬಂದರೆ, ಇತರೆ ಸೊಳ್ಳೆಗಳ ಕಚ್ಚುವಿಕೆಯಿಂದ ಚಿಕೂನ್ಯ ಗುನ್ಯಾ, ಮಲೇರಿಯಾ, ಫೈಲೇರಿಯಾ ಬಾಧಿಸಲಿದೆ. ವಾತಾವರಣದಲ್ಲಿನ ಮಲಿನತೆಯಿಂದ ವೈರಲ್ ಅರ್ಥರೈಟಿಸ್ ಸೇರಿ ಹಲವು ವೈರಾಣು ಜ್ವರಗಳು ಕಾಡಲಿವೆ. ಕಲುಷಿತ ನೀರು ಸೇವನೆಯಿಂದ ಕಾಲರಾ, ಕಲುಷಿತ ಆಹಾರ ಹಾಗೂ ಗಾಳಿ ಸೇವನೆಯಿಂದ ಗ್ಯಾಸ್ಟ್ರೋ ಎಂಟರೈಟಿಸ್ ಹಾಗೂ ಟೈಫಾಯ್್ಡ ಇಲಿಗಳ ಮಲ-ಮೂತ್ರ ನೀರಿನಲ್ಲಿ ಮಿಶ್ರಣಗೊಂಡರೆ ಇಲಿ ಜ್ವರ (ಪ್ರವಾಹ ಹಾಗೂ ಅತಿಯಾದ ಮಳೆ ಸಂದರ್ಭದಲ್ಲಿ ಇದು ಹೆಚ್ಚಲಿದೆ), ವಾತಾವರಣದಲ್ಲಿನ ಏರುಪೇರಿನಿಂದಾಗಿ ಮಕ್ಕಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ, ನ್ಯೂಮೊನಿಯಾ ಕಾಣಿಸಿಕೊಳ್ಳುತ್ತದೆ. ಎಚ್1ಎನ್1, ಡೆಂಘ ಸೇರಿ ಇತರೆ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳು ಮನೆಗಳಿಗೆ ಸೀಮಿತವಾಗಿದ್ದರಿಂದ, ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗಿರುವುದು ಕಂಡು ಬರುತ್ತಿದೆ. ಜತೆಗೆ ಹವಾಮಾನ ವೈಪರೀತ್ಯದಿಂದಾಗಿ ಅವರಲ್ಲಿ ವೈರಾಣು ಜ್ವರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ನಿತ್ಯ ಇಂಥ 30-40 ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಗಮನ ಹರಿಸುವ ಅಗತ್ಯವಿದೆ.
|ಡಾ. ಹರೀಶ್ ಕುಮಾರ್ಆಸ್ಟರ್ ಸಿಎಂಐ ಆಸ್ಪತ್ರೆಯ ಮಕ್ಕಳ ತಜ್ಞ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 20 =
Remember me
