ಶಿವಮೊಗ್ಗ:ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು, ಈ ಹತ್ಯೆಯ ಹಿಂದೆ ಇನ್ನೂ ಹಲವರು ಇದ್ದು, ಸದ್ಯದಲ್ಲೇ ಬಂಧಿತ ಆರೋಪಿಗಳ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ. ಶಿವಮೊಗ್ಗದಲ್ಲಿ ಎಸ್​ಪಿ ಲಕ್ಷ್ಮೀಪ್ರಸಾದ್​ ಅವರ ಹೇಳಿಕೆ ನೀಡಿದ್ದು, ಮತ್ತಷ್ಟು ಅಂಶಗಳು ಬೆಳಕಿಗೆ ಬಂದಿವೆ.
ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು‌ ಜನರನ್ನು ಬಂಧಿಸಿದ್ದೇವೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗುವುದು. ಆ ಬಳಿಕ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಹದಿನಾಲ್ಕು ದಿನಗಳ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. ಕೊಲೆ ಮಾಡಲು ಬಳಸಿದ್ದ ಕಾರನ್ನು ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಬಳಸಿದ್ದ ಕಾರು ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದೇವೆ. ಕೊಲೆ ಮಾಡಲು ಬೇರೆ ರಾಜ್ಯದ ಕಾರನ್ನು ಬಳಸಿಕೊಂಡಿದ್ದಾರೆ. ಆ ಕಾರು ಯಾರದ್ದು, ಶಿವಮೊಗ್ಗಕ್ಕೆ ಏಕೆ ಬಂತು, ಕಾರಿನ ಮಾಲೀಕರು ಯಾರು ಎಂಬ ಬಗ್ಗೆ ತನಿಖೆ ನಡೆಸುತಿದ್ದೇವೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಹರ್ಷ ಕೊಲೆ ಪ್ರಕರಣದಲ್ಲಿ ಸಾತು ಆ್ಯಂಡ್​ ಗ್ಯಾಂಗ್ ಭಾಗಿಯಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸುತಿದ್ದೇವೆ. ಹರ್ಷ ಕೊಲೆ ಹಿಂದೆ ಯಾವುದಾದರೂ ಸಂಘಟನೆಗಳು ಇವೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತಿದ್ದೇವೆ. ಹರ್ಷನ ಮೊಬೈಲ್ ಫೋನ್​ ಇದುವರೆಗೆ ಪತ್ತೆಯಾಗಿಲ್ಲ. ಆದರೆ ಆತನಿಗೆ ವೀಡಿಯೋ ಕರೆ ಮಾಡಿದವರನ್ನು ಪತ್ತೆ ಮಾಡಿದ್ದೇವೆ. ಪೊಲೀಸರಿಗೆ ಲಾಂಗ್ ಮಚ್ಚು ತೋರಿಸಿ ಬೆದರಿಕೆ ಹಾಕಿದವರು ಯಾರು ಎಂಬುದು ಕೂಡ ಗೊತ್ತಾಗಿದೆ. ಅವರನ್ನೂ ಶೀಘ್ರವೇ ಬಂಧಿಸುತ್ತೇವೆ ಎಂದು ಎಸ್​ಪಿ ತಿಳಿಸಿದ್ದಾರೆ.
ಗೋಡೆ ಮೇಲೆ ರಕ್ತದ ಕಲೆ; ಅಜ್ಜಿ-ಮೊಮ್ಮಗಳ ಶವ ಪತ್ತೆ, ಕಾರಣವಿನ್ನೂ ನಿಗೂಢ..

ಪೇದೆಯನ್ನು ನಂಬಿ ಗಂಡನ ಬಿಟ್ಟ ಮಹಿಳೆಯ ಬಾಳೇ ಈಗ ಗೋಳು: ಕಾನ್​ಸ್ಟೆಬಲ್​ ಕಿತಾಪತಿ ಒಂದೆರಡಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
