ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ಕರೊನಾ ನಿಯಂತ್ರಿಸುವ ಹೊಣೆಗಾರಿಕೆ ವಿಚಾರದಲ್ಲೂ ಸಚಿವರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಚರ್ಚೆ ಶರುವಾಗಿದೆ.
ತಂದೆ, ಪತ್ನಿ, ಮಗಳಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಹಾಗಾಗಿ ಇವರು ನಿರ್ವಹಿಸುತ್ತಿದ್ದ ಬೆಂಗಳೂರಿನ ಕರೊನಾ ನಿಯಂತ್ರಣ ಉಸ್ತುವಾರಿ ಜವಾಬ್ದಾರಿ ಈಗ ಆರ್. ಅಶೋಕ್​ರ ಹೆಗಲೇರಿದೆ. ಬೆಂಗಳೂರಿನ ಕರೊನಾ ಉಸ್ತುವಾರಿ ಕೊಡುವವರೆಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಅಶೋಕ್ ಸದ್ಯ ಫುಲ್ ಆಕ್ಟೀವ್ ಆಗಿದ್ದಾರೆ. ಇದರ ಬೆನ್ನಲ್ಲೇ ‘ಸಂಡೇ ಥಾಟ್ಸ್’ ಹೆಸರಿನ ಕಥೆಯೊಂದನ್ನು ಟ್ವೀಟ್ ಮಾಡಿರುವ ಸುಧಾಕರ್, ‘ಸ್ಥಾನದಿಂದ ನಾಯಕತ್ವ ಬರುವುದಿಲ್ಲ. ನಾಯಕತ್ವ ಬರೋದು ನಾವು ಮಾಡುವ ಕೆಲಸದಿಂದ’ ಎಂದಿದ್ದಾರೆ. ಕೆಲವರಿಗೆ ಪರೋಕ್ಷವಾಗಿಯೇ ಸುಧಾಕರ್​ ಟಾಂಗ್​ ಕೊಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ.ಇದನ್ನೂ ಓದಿರಿಸಿಎಂ ಮನೆ ಬಳಿಯ ಧರಣಿ ಹಿಂಪಡೆದ ದೇವೇಗೌಡ
”ಶಾಲಾ ದಿನಗಳಲ್ಲಿ ನಾನು ಓದಿದ ಕಥೆಯೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಕಥೆಯ ನೈತಿಕತೆಗೆ ಇಷ್ಟೆ. ನಮ್ಮ ಕೆಲಸವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಮತ್ತು ಉತ್ತಮ ಉದ್ದೇಶದಿಂದ ಮಾಡಬೇಕು. ನಾವು ಮಾಡುವ ಕೆಲಸದಿಂದ ನಾಯಕತ್ವ ಬರುತ್ತದೆಯೇ ಹೊರತು ಸ್ಥಾನದಿಂದ ಅಲ್ಲ. ನಾನು ಈ ತತ್ವ ನಂಬಿರುವವನು” ಎಂದು ಬರೆದುಕೊಂಡಿರುವ ಸುಧಾಕರ್​, ”That’s not my job” ಶೀರ್ಷಿಕೆಯುಳ್ಳ ಕಥೆಯೊಂದರ ಪತ್ರಿಯನ್ನು ಶೇರ್​ ಮಾಡಿಕೊಂಡಿದ್ದಾರೆ.
Sunday thoughts: I am sharing a story which I read in my school days. Moral of the story: Let’s do our job with conscience and with a great sense of purpose. I believe that Leadership is not in position but in action.pic.twitter.com/2kVavEQle3
— Dr Sudhakar K (@mla_sudhakar)June 28, 2020

ಸುಧಾಕರ್ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲ ಕೆರಳಿಸಿದ್ದು, ಇದು ಕೆಲವರಿಗೆ ಟಾಂಗ್ ನೀಡುವಂತಿದೆ ಎಂದೇ ಬಣ್ಣಿಸಲಾಗುತ್ತಿದೆ. ಸಚಿವರಿಬ್ಬರ ನಡುವೆ ಕರೊನಾ ನಿಯಂತ್ರಣ ಕ್ರೆಡಿಟ್​ಗಾಗಿ ಪಾಲಿಟಿಕ್ಸ್ ನಡೆಯುತ್ತಿದೆ ಎಂದೂ ಹೇಳಲಾಗುತ್ತಿದೆ.
ಸುಧಾಕರ್​ ಕ್ವಾರಂಟೈನ್​ನಲ್ಲಿರುವ ಕಾರಣ ಮತ್ತು ರಾಜಧಾನಿಯಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ಅವರು ಅಶೋಶ್​ಗೆ ನೀಡಿದರು. ಉಸ್ತುವಾರಿ ಬದಲಾವಣೆ ವಿಚಾರ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬೆಂಗಳೂರು ಉಸ್ತುವಾರಿ ಕೊಟ್ಟ ಬೆನ್ನಲ್ಲೇ ಫುಲ್ ಆಕ್ಟೀವ್ ಆಗಿರುವ ಅಶೋಕ್, ನಿನ್ನೆ ಮತ್ತು ಇಂದು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಶೋಕ್ ಆಕ್ಟೀವ್ ಆದ ಬೆನ್ನಲ್ಲೇ ಸುಧಾಕರ್​ಗೆ ಟೆನ್ಷನ್ ಶುರುವಾಗಿದೆ ಎಂಬ ಮಾತೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಿದೆ ಸುಧಾಕರ್​ ಟ್ವೀಟ್​ ಮಾಡಿಕೊಂಡಿರುವ ಸ್ಟೋರಿ.
ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
