ಮೈಸೂರು:ಸ್ನೇಹಿತರಿಬ್ಬರ ಮಧ್ಯೆ ಬಾರ್​ನಲ್ಲಿ ಮದ್ಯದ ಮತ್ತಿನಲ್ಲಿ ಶುರುವಾದ ಜಗಳ, ಬಾರ್​ನಿಂದ ಹೊರಬಂದ ಬಳಿಕವೂ ಮುಂದುವರಿದಿದ್ದು, ಕೊನೆಗೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರಿನ ಆಲನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.
ಆಲನಹಳ್ಳಿ ಬಾರ್ ಆ್ಯಂಡ್​ ರೆಸ್ಟೋರೆಂಟ್​ವೊಂದರಲ್ಲಿ ಕುಡಿಯುತ್ತಿದ್ದ ಸ್ನೇಹಿತರ ಮಧ್ಯೆ, ಮದ್ಯದ ಮತ್ತಿನಲ್ಲಿ ಜಗಳ ಆರಂಭವಾಗಿತ್ತು. ನಿವೇಶನವೊಂದರ ವಿಚಾರವಾಗಿ ಶುರುವಾದ ಈ ಜಗಳ ಬಾರ್​ನಿಂದ ಹೊರಬಂದರೂ ಮುಗಿದಿರಲಿಲ್ಲ.ಬಾರ್​ನಿಂದ ಹೊರಬಂದಾಗ ನಡೆದ ವಾಗ್ವಾದದ ಸಂದರ್ಭ ಸ್ನೇಹಿತರಾದ ರಾಕೇಶ್, ಮಹೇಶ್, ಪ್ರಮೋದ್‌ ಅವರು ಕಿರಣ್​ಗೆ ಚಾಕುವಿನಿಂದ ಇರಿದಿದ್ದರು.
ಇದನ್ನೂ ಓದಿ:ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು
ಗಾಯಗೊಂಡ ಕಿರಣ್ ಸಾವಿಗೀಡಾಗಿದ್ದು, ರಾಕೇಶ್ ಹಾಗೂ ಮಹೇಶ್​ನನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮೋದ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಶಾಲೆಯಲ್ಲೇ ನಮಾಜ್​!; ಹಿಜಾಬ್ ಬೆನ್ನಿಗೇ ಮತ್ತೊಂದು ವಿವಾದ?

ರಾಜ್ಯದ ಮತ್ತೊಂದು ಶಾಲೆಯಲ್ಲೂ ನಮಾಜ್; ಹಿಜಾಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
