ಬಾಗಲಕೋಟೆ:40 ರೂಪಾಯಿ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ಶುರುವಾದ ಜಗಳ ಒಬ್ಬರ ಸಾವಲ್ಲಿ ಅಂತ್ಯ ಕಂಡಿದೆ. ಈ ಪ್ರಕರಣ ಸಂಬಂಧ ಅಮ್ಮ-ಮಗನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇಂತಹ ದುರ್ಘಟನೆ ಬಾಗಲಕೋಟೆ ತಾಲೂಕಿನ ನಕ್ಕರಗುಂದಿ ಗ್ರಾಮದಲ್ಲಿ ಸಂಭವಿಸಿದೆ. ರಂಗವ್ವ ಗುಳ್ಳಣ್ಣವರ(29) ಮೃತ ದುರ್ದೈವಿ. ಭೀಮವ್ವ ಗುಳ್ಳಣ್ಣವರ ಎಂಬುವರ ಪುತ್ರ ಮಳಿಯಪ್ಪ ಗುಳ್ಳಣ್ಣವರ ತನ್ನ ಸೋದರ ಮಾವನ ಮಗಳು ರಂಗವ್ವನ ಜತೆ 12 ವರ್ಷದ ಹಿಂದೆ ಮದುವೆ ಆಗಿದ್ದ. ನಕ್ಕರಗುಂದಿ ಗ್ರಾಮದಲ್ಲಿ ಕುಟುಂಬ ವಾಸವಿತ್ತು. ಮಳಿಯಪ್ಪ ಹಮಾಲಿ ಕೆಲಸ ಮಾಡುತ್ತಿದ್ದ.
ನಿನ್ನೆ(ಗುರುವಾರ) ಸಂಜೆ ಭೀಮವ್ವರ 40 ರೂಪಾಯಿ ಕಳವಾಗಿತ್ತಂತೆ. ಈ ಹಣವನ್ನು ನೀನೆ ತಗೊಂಡಿದ್ದೀಯಾ ಎಂದು ಸೊಸೆ ಬಳಿ ಅತ್ತೆ ಭೀಮವ್ವ ಆರೋಪಿಸಿದ್ದರು. ನಾನು ಹಣ ತೆಗೆದುಕೊಂಡಿಲ್ಲ ಎಂದು ಸೊಸೆ ಎಷ್ಟೇ ಹೇಳಿದರೂ ಅತ್ತೆ ಕೇಳಿಲ್ಲ. ಮಾತಿಗೆ ಮಾತು ಬೆಳೆದು ಅತ್ತೆ-ಸೊಸೆ ನಡುವೆ ಜಗಳ ಶುರುವಾಗಿದೆ. ಇದನ್ನು ನೋಡಿ ಸಿಟ್ಟಿಗೆದ್ದ ಮಳಿಯಪ್ಪ, ಪತ್ನಿಯ ಕಪಾಳಕ್ಕೆ ಜೋರಾಗಿ ಬಾರಿಸಿದ್ದಾನೆ. ಕುಸಿದು ಬಿದ್ದ ಪತ್ನಿ, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಸ್ತಮಾ, ಬಿಪಿಯಿಂದ ರಂಗವ್ವ ಬಳಲುತ್ತಿದ್ದಳು ಎನ್ನಲಾಗಿದೆ.
40 ರೂಪಾಯಿಗಾಗಿ ಅತ್ತೆ-ಸೊಸೆ ನಡುವೆ ಶುರುವಾದ ಜಗಳದಲ್ಲಿ ಕೋಪಕ್ಕೆ ಬುದ್ಧಿಕೊಟ್ಟು ಪತ್ನಿಯ ಸಾವಿಗೆ ಕಾರಣನಾದ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದಲ್ಲಿ 3 ಮಕ್ಕಳಿಗೆ ವಿಷವುಣಿಸಿ ದುರಂತ ಅಂತ್ಯ ಕಂಡ ನರ್ಸ್​! ಪ್ರೀತಿಸಿ ಮದ್ವೆಯಾದಾಕೆಯ ಬಾಳಲ್ಲಿ ಗಂಡ ಆಡಿದ ಆಟ ಅಷ್ಟಿಷ್ಟಲ್ಲ…

ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನನ್ನು ಹಿಂಬಾಲಿಸಿದ ಪೊಲೀಸರಿಗೆ ಶಾಕ್​! ಆತನ ಕೈಯಲ್ಲಿತ್ತು ಲಕ್ಷ ಲಕ್ಷ ಹಣ, ಕೆಜಿಗಟ್ಟಲೆ ಬಂಗಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + sixteen =
Remember me
