ಬೆಂಗಳೂರು:ಎಂಥ ಕ್ಷುಲ್ಲಕ ವಿಚಾರಗಳಿಗೆಲ್ಲ ಕೊಲೆಯಾಗಿ ಹೋಗಿಬಿಡುತ್ತದೆ ಎಂದು ಹೇಳಲಿಕ್ಕೇ ಕಷ್ಟ. ಮೊನ್ನೆಮೊನ್ನೆಯಷ್ಟೇ ಬರೀ ಆಮ್ಲೆಟ್ ವಿಚಾರಕ್ಕೆ ಒಂದು ಕೊಲೆಯಾಗಿತ್ತು. ಇದೀಗ ಮಂಚದ​ ಮೇಲೆ ಮಲಗುವಂಥ ಸಣ್ಣ ವಿಚಾರಕ್ಕೂ ಕೊಲೆಯೊಂದು ನಡೆದುಹೋಗಿದೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬ ನಾಣ್ಣುಡಿ ಇದೆ. ಆದರೆ ಇಲ್ಲಿ ಇಬ್ಬರ ಜಗಳವೇ ಮತ್ತೊಬ್ಬನಿಗೆ ಕೇಡಾಗಿ ಪರಿಣಮಿಸಿದೆ.
ಹೌದು.. ಕಾಟ್​ ಮೇಲೆ ಮಲಗುವ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಬಿಡಿಸಲು ಹೋದ ಸಂಬಂಧಿಯೊಬ್ಬ ಕೊಲೆಗೀಡಾಗಿದ್ದಾನೆ. ಬೆಂಗಳೂರಿನ ಜೀವನ್​ಬಿಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ವೆಂಕಟೇಶ್ ಎಂಬಾತ ಕೊಲೆಗೀಡಾಗಿದ್ದು, ಆತನ ಸಂಬಂಧಿ ವಿನಯ್ ಕೊಲೆ ಆರೋಪಿ.
ಇದನ್ನೂ ಓದಿ:ಆಮ್ಲೆಟ್ ವಿಚಾರಕ್ಕೆ ನಡೆದುಹೋಯ್ತು ಕೊಲೆ; ಕತ್ತುಕೊಯ್ದು ಸಾಯಿಸಿ ಶವ ಕೆರೆಗೆ ಎಸೆದಿದ್ದ ಇಬ್ಬರ ಬಂಧನ
ನಿನ್ನೆ ರಾತ್ರಿ 10.30ರ ಸುಮಾರಿಗೆ ಜೀವನ್​ಬಿಮಾನಗರದ ಹನುಮನಗರದಲ್ಲಿ ಸಹೋದರರಾದ ವಿನಯ್-ಮನು ಮಧ್ಯೆ ಜಗಳ ನಡೆಯುತ್ತಿತ್ತು. ಕಾಟ್​ ಮೇಲೆ ಮಲಗುವ ವಿಚಾರವಾಗಿ ನಡೆಯುತ್ತಿದ್ದ ಜಗಳ ಕೇಳಿ ಪಕ್ಕದ ಮನೆಯಲ್ಲಿ ವಾಸವಿದ್ದ ಸಂಬಂಧಿ ವೆಂಕಟೇಶ್​ ಅಲ್ಲಿಗೆ ಬಂದಿದ್ದ.
ಇದನ್ನೂ ಓದಿ:ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!
ಜಗಳವಾಡುತಿದ್ದ ಅಣ್ಣ-ತಮ್ಮಂದಿರನ್ನು ವೆಂಕಟೇಶ್​ ಸಮಾಧಾನ ಪಡಿಸಲು ಮುಂದಾಗಿದ್ದ. ಆಗ ಕುಡಿದ ಅಮಲಿನಲ್ಲಿದ್ದ ವಿನಯ್ ಅಲ್ಲೇ ಇದ್ದ ಗಾಜಿನ ಬಾಟಲ್​ನಿಂದ ವೆಂಕಟೇಶ್​ ಎದೆಗೆ ಚುಚ್ಚಿದ್ದ. ತೀವ್ರ ರಕ್ತಸ್ರಾವವಾಗಿ ವೆಂಕಟೇಶ್​ ಮೃತಪಟ್ಟಿದ್ದು, ಪ್ರಕರಣ ಸಂಬಂಧ ವಿನಯ್​ನನ್ನು ಜೀವನ್​ಬಿಮಾನಗರ ಪೊಲೀಸರು ಬಂಧಿಸಿದ್ದಾರೆ.
ಠಾಣೆಗೇ ಬಂದಿತ್ತು ಎಸ್​ಪಿ ಕಾರು: ಸರ್ಕಲ್ ಇನ್​ಸ್ಪೆಕ್ಟರ್​ಗೂ ಮುಳುವಾಯ್ತು ಎಸ್​ಐ ದರ್ಬಾರು…

ವಂಚಕ ಪತಿಯ ಅರಸಿ ಬೆಂಗಳೂರಿಗೆ ಬಂದ್ಲು ಎರಡನೇ ಪತ್ನಿ; ಇವ ಶ್ರೀಮಂತರನ್ನೇ ನೋಡಿ ಮದ್ವೆ ಆಗಿ ಮೋಸ ಮಾಡ್ತಿದ್ದ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
