ಮೈಸೂರು:ಬೀಡಾ ಅಂಗಡಿಯಲ್ಲಿ ಹಣ ನೀಡುವ ವಿಚಾರವಾಗಿ ಕೆ.ಆರ್​.ನಗರ ಕ್ಷೇತ್ರದ ಮಾಜಿ ಶಾಸಕ ಸಾರಾ.ಮಹೇಶ್​ ಪುತ್ರ ಹಾಗೂ ಪತ್ರಕರ್ತರೊಬ್ಬರ ಮಗನ ನಡುವೆ ಭಾನುವಾರ ರಾತ್ರಿ ಗಲಾಟೆಯಾಗಿದೆ.
ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮೈಸೂರಿನ ಕುಂವೆಂಪುನಗರದಲ್ಲಿರುವ ಹೋಟೆಲ್​ ಒಂದರ ಮುಂಭಾಗ ಘಟನೆ ನಡೆದಿದೆ.
ಇದನ್ನೂ ಓದಿ:ಅಂಬೇಡ್ಕರ್​ ಪ್ರತಿಮೆ ತೆರವು ಮಾಡಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಾಟ
ಉಟದ ಬಳಿಕ ಬೀಡ ತಿಂದು ಹಣ ನೀಡಲು ಸಾರಾ. ಜಯಂತ್​ ಮುಂದಾಗಿದ್ದು, ಈ ವೇಳೆ ಪತ್ರಕರ್ತರ ಮಗ ಸ್ಕ್ಯಾನರ್​​ಗೆ ಅಡ್ಡ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಬಡಿದಾಟಕ್ಕೆ ಕಾರಣವಾಗಿದೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಕುವೆಂಪುನಗರ ಪೊಲೀಸರು ಪರಿಸ್ಥಿತಿಯನ್ನು ಹತ್ತೋಟಿಗೆ ತಂದು ಇಬ್ಬರನ್ನು ಠಾಣೆಗೆ ಕರೆದೊಯ್ದು, ಬುದ್ದಿವಾದ ಹೇಳಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಕಳುಹಿಸಿದ್ಧಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಈ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
