ಹಾಸನ:ಕ್ಷುಲ್ಲಕ ಕಾರಣಕ್ಕೆ ಸೈನಿಕರಿಬ್ಬರ ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿದ್ದು, ಜಗಳ ವಿಕೋಪಕ್ಕೆ ತೆರಳಿ ಒಬ್ಬ ಸೈನಿಕ ಇನ್ನೊಬ್ಬ ಸೈನಿಕನ ತಮ್ಮನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಿರುಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಲಾಟೆಯ ವಿಡಿಯೋ ಕೂಡ ಮೊಬೈಲ್​ಫೋನ್​ ಒಂದರಲ್ಲಿ ಸೆರೆಯಾಗಿದೆ. ಯೋಧರಾದ ಯತೀಶ್ ಮತ್ತು ಚಂದನ್ ಅವರ ಮನೆಯವರ ಮಧ್ಯೆ ಈ ಜಗಳ ನಡೆದಿದೆ. ಈ ಜಗಳಲ್ಲಿ ಯತೀಶ್ ತಮ್ಮ ಯಶ್ವಂತ್​ ಮೇಲೆ ಚಂದನ್ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆತ ಸಾವಿಗೀಡಾಗಿದ್ದಾನೆ.
ಚಂದನ್​ನಿಂದ ಹಲ್ಲೆಗೆ ಒಳಗಾದ ಯಶ್ವಂತ್​ (25) ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈ ಜಗಳದಲ್ಲಿ ಯೋಧ ಸತೀಶ್ ಮೇಲೂ ಹಲ್ಲೆ ನಡೆದಿದ್ದು, ಆತನೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನ. 19ರಂದು ಜಾಗದ ಸರ್ವೆ ನಡೆಸುವ ಸಂದರ್ಭ ಈ ಜಗಳವಾಗಿದ್ದು, ಗ್ರಾಮ ಪಂಚಾಯತ್ ಅಧಿಕಾರಿಗಳು ಸರ್ವೇ ಕಾರ್ಯ ಮುಗಿಸಿಹೋದ ಬಳಿಕ ಮಾರಾಮಾರಿ ನಡೆದಿದೆ. ಯೋಧ ಚಂದನ್, ಆತನ ತಮ್ಮ ಅಶ್ವಥ್ ಮತ್ತು ಯೋಧ ಯತೀಶ್ ಹಾಗೂ ಆತನ ತಮ್ಮ ಯಶ್ವಂತ್ ನಡುವೆ ಪ್ರಾರಂಭವಾದ ಜಗಳ ವಿಕೋಪಕ್ಕೆ ತೆರಳಿತ್ತು. ಚಂದನ್​ ಮಚ್ಚಿನಿಂದ ಯಶ್ವಂತ್ ಮೇಲೆ ಹಲ್ಲೆ ನಡೆಸಿದ್ದು, ಆತ ಕುಸಿದು ಬಿದ್ದು ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದು. ಚಂದನ್ ಮತ್ತವನ ಸ್ನೇಹಿತರು ಯತೀಶ್ ಮೇಲೂ ಹಲ್ಲೆ ನಡೆಸಿದ್ದು, ಗಾಯಗೊಂಡ ಆತನನ್ನು ಬಳಿಕ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಯತೀಶ್​ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಎರಡನೇ ಹೆಂಡ್ತಿಯಂತೆ ನಾಲ್ಕನೇ ಪತ್ನಿಯನ್ನೂ ಕಟ್ಟಿಗೆಯಿಂದ ಹೊಡೆದು ಕೊಂದ ಪಾನಮತ್ತ ಪತಿ!

ಗೃಹಪ್ರವೇಶದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ; ಮಗಳಿಂದಲೇ ಅಂತಿಮಸಂಸ್ಕಾರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + ten =
Remember me
