ಮಂಡ್ಯ:ಯಾವುದು ಮಾರಣಾಂತಿಕವಾಗುತ್ತದೋ ಹೇಳುವುದು ಕಷ್ಟ. ಅಂಥದ್ದೇ ಒಂದು ಪ್ರಕರಣ ಇಲ್ಲಿ ಸಂಭವಿಸಿದ್ದು, ರಸ್ತೆ ವಿಚಾರವಾಗಿ ನಡೆದ ಗಲಾಟೆಯಿಂದ ಬದುಕೇ ಅಂತ್ಯಗೊಂಡಿದೆ. ಮಾತ್ರವಲ್ಲ, ಬರೀ ನೂಕಿದ್ದಕ್ಕೆ ಒಬ್ಬ ಕೊಲೆ ಪ್ರಕರಣ ಎದುರಿಸುವಂತಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಂಡರವಾಡಿಯಲ್ಲಿ ಈ ಪ್ರಕರಣ ನಡೆದಿದೆ. ಶಿವಕುಮಾರ್​ ಎಂಬಾತ ಸಾವಿಗೀಡಾಗಿದ್ದು, ಅಶೋಕ್ ಎಂಬಾತ ಕೊಲೆ ಆರೋಪಿ ಎನಿಸಿಕೊಂಡಿದ್ದಾನೆ. ಒಂದು ರಸ್ತೆ ವಿಚಾರವೇ ಇಂಥ ಅವಸ್ಥೆಗೆ ಕಾರಣವಾಗಿದೆ.
ರಸ್ತೆಯೊಂದರ ವಿಷಯವಾಗಿ ಶಿವಕುಮಾರ್ ಮತ್ತು ಅಶೋಕ್ ಮಧ್ಯೆ ಏ. 25ರಂದು ಜಗಳವಾಗಿತ್ತು. ಈ ಸಂದರ್ಭ ಶಿವಕುಮಾರ್​ನನ್ನು ಅಶೋಕ್ ನೂಕಿದ್ದು, ಶಿವಕುಮಾರ್ ಕೆಳಕ್ಕೆ ಬಿದ್ದಿದ್ದ. ಆಗ ಆತನ ತಲೆಗೆ ಗಂಭೀರವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿತ್ತು.
ತಕ್ಷಣ ಆತನನ್ನು ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಗಿದ್ದರೂ ಫಲಿಸದೆ ಶಿವಕುಮಾರ್ ಇಂದು ಮೃತಪಟ್ಟಿದ್ದಾನೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಇದು ಬರೀ ಹೆದ್ದಾರಿಯಲ್ಲ, ‘ಮದ್ಯ’ರಸ್ತೆ: ಆಲ್ಕೋಹಾಲ್​ಗಾಗಿ ಮುಗಿಬಿದ್ದ ಪಾನಪ್ರಿಯರು..

ಸ್ಕ್ಯಾನಿಂಗ್ ಮಾಡಿಸುವುದಾಗಿ ಹೇಳಿ ಮಾಂಗಲ್ಯವನ್ನೇ ಎಗರಿಸಿದ ನಕಲಿ ಆಶಾ ಕಾರ್ಯಕರ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
