ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಿಕೊಳ್ಳುವ ಉದ್ದೇಶದಿಂದ 16ನೇ ಹಣಕಾಸು ಆಯೋಗ ಮತ್ತು ಕೇಂದ್ರ ಸರ್ಕಾರದ ಮುಂದೆ ಬಲವಾದ ಪ್ರತಿಪಾದನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಕರ್ನಾಟಕದ ರೀತಿಯೇ ತೆರಿಗೆ ಪಾಲು ಪಡೆಯುವಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ದೊಡ್ಡ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಸಹ ನಿರ್ಧರಿಸಲಾಯಿತು. ಈ ಬಗ್ಗೆ ವಿವರಣೆ ನೀಡಿದ ಕೃಷ್ಣಬೈರೇಗೌಡ, 14ನೇ ಹಣಕಾಸು ಆಯೋಗ ಮತ್ತು 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಾದ ಆರ್ಥಿಕ ಅನುಕೂಲತೆಗಳು, ನೈಜವಾದ ಹಕ್ಕು, ಅವುಗಳಿಗೆ ವ್ಯತಿರಿಕ್ತವಾಗಿ ಆಗಿರುವ ಪರಿಣಾಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ರಾಜ್ಯಕ್ಕೆ ಬಹುದೊಡ್ಡ ಆರ್ಥಿಕ ಆಘಾತವಾಗಿದೆ ಎಂಬುದು ಅರಿವಿಗೆ ಬಂದಿದೆ ಎಂದರು.
ಇದೀಗ 16ನೇ ಹಣಕಾಸು ಆಯೋಗ ರಚನೆಯಾಗಿದೆ. ಅಧ್ಯಕ್ಷರನ್ನೂ ನೇಮಕ ಮಾಡಲಾಗಿದೆ. ಈ ಆಯೋಗದ ಮುಂದೆ ವಾದ ಏನಿರಬೇಕೆಂದು ಸಭೆಯಲ್ಲಿ ವಿಚಾರ ವಿನಿಮಯ ಮಾಡಲಾಯಿತು. ರಾಜ್ಯದ ವಾದವನ್ನು ಸಮರ್ಥವಾಗಿ ಮಂಡಿಸಲು ತೀರ್ವನಿಸಿದ್ದು, ಸರ್ಕಾರಕ್ಕೆ ಸಹಕಾರ ನೀಡಲು ಸಲಹಾ ಕೋಶ ರಚನೆಗೂ ತೀರ್ಮಾನ ಮಾಡಲಾಯಿತೆಂದರು. 14ನೇ ಹಣಕಾಸು ಆಯೋಗದ ಸದಸ್ಯ ಗೋವಿಂದರಾವ್, ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ, ನಿಯಾಜ್​ನ ನಿರ್ದೇಶಕ ಪ್ರೊ. ನರೇಂದ್ರ ಪಾಣಿ ಸಮಿತಿಯಲ್ಲಿ ಇರುತ್ತಾರೆ.
ಖೋತಾ ಹೇಗೆ?:ದೇಶದಲ್ಲಿ ಎರಡನೇ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ. ವಾರ್ಷಿಕ ನಾಲ್ಕು ಲಕ್ಷ ಕೋಟಿ ರೂ. ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿದೆ. ಎಪ್ಪತ್ತು ಸಾವಿರ ಕೋಟಿ ರೂ. ಮಾತ್ರ ವಾಪಸ್ ಬರುತ್ತಿದೆ. ನೂರು ರೂ. ಜಮೆಯಾದರೆ ಹನ್ನೆರಡು ರೂ. ಮಾತ್ರ ವಾಪಸ್ ಬರುತ್ತಿದೆ. ರಾಜ್ಯದ ಐಟಿ ಕ್ಷೇತ್ರದಿಂದ ವಾರ್ಷಿಕ ಮೂರೂವರೆ ಲಕ್ಷ ಕೋಟಿ ರೂ. ವಹಿವಾಟು ನಡೆದು, ಡಾಲರ್​ನಲ್ಲಿ ವರಮಾನ ತಂದುಕೊಡುತ್ತಿದೆ. ಪ್ರತಿಯಾಗಿ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಕೃಷ್ಣಬೈರೇಗೌಡ ವಿವರಿಸಿದರು. ಹದಿನಾಲ್ಕನೇ ಆಯೋಗದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಕೊಡುವ ಪಾಲು ಶೇ. 4.71 ಬರುತಿತ್ತು. 15 ನೇ ಆಯೋಗದಲ್ಲಿ 3.64ಕ್ಕೆ ಇಳಿದಿದೆ. ಇದರಿಂದ ಕೇಂದ್ರದಿಂದ ಬರುವ ಅನುದಾನ, ತೆರಿಗೆಯಲ್ಲಿ ರಾಜ್ಯದ ಪಾಲು ಶೇ. 25 ಇಳಿಕೆಯಾಗಿದೆ. ಇದರಿಂದ ಅಂದಾಜು ವರ್ಷಕ್ಕೆ 14 ಸಾವಿರ ಕೋಟಿ ರೂ. ಖೋತಾ ಆಗಿದೆ. 2020-21ರಿಂದ ಐದು ವರ್ಷದಲ್ಲಿ ಒಟ್ಟಾರೆ 62 ಸಾವಿರ ಕೋಟಿ ರೂ. ನಷ್ಟ ಆಗುತ್ತಿದೆ ಎಂದು ಮಾಹಿತಿ ನೀಡಿದರು. ಇನ್ನೊಂದು ನಷ್ಟವೆಂದರೆ ಕೇಂದ್ರದಿಂದ ಬರುವ ತೆರಿಗೆಯಲ್ಲಿ 41 ಶೇ. ಪಾಲು ಇರಬೇಕು. ಆದರೆ 30 ಶೇ. ಮಾತ್ರ ಬರುತ್ತಿದೆ. ಇನ್ನೊಂದೆಡೆ ಕೆಲವಷ್ಟಕ್ಕೆ ತೆರಿಗೆ ಎಂದು ಕರೆಯುವ ಬದಲು ಕರ ಎಂದು ಬದಲಿಸಿ ತೆರಿಗೆ ಎಂದು ತೋರಿಸುತ್ತಿಲ್ಲ. ತೆರಿಗೆ ಹಣ ಹಂಚಿಕೆ ಮಾಡಲಾಗುತ್ತದೆ, ಸೆಸ್, ಸರ್ ಚಾರ್ಜ್ ರಾಜ್ಯಕ್ಕೆ ಪಾಲು ಕೊಡಲ್ಲ. ಹೀಗಾಗಿ ಇದರಿಂದಲೂ ಅನ್ಯಾಯವಾಗುತ್ತಿದೆ. ಅಂದಹಾಗೆ ಕರ ಅಥವಾ ಸರ್​ಚಾರ್ಜ್ ಈ ಸರ್ಕಾರ ಬಂದ ಮೇಲೆ ಆಗಿರುವುದಲ್ಲ ಎಂದೂ ಸ್ಪಷ್ಟಪಡಿಸಿದರು. ಪೆಟ್ರೋಲ್, ಡೀಸೆಲ್ ತೆರಿಗೆ ಬದಲು ಸೆಸ್ ಎಂದು ಕರೆದರು. ಅದರಲ್ಲಿ ಶೇ. 95 ಕೇಂದ್ರವೇ ಇಟ್ಟುಕೊಳ್ಳುತ್ತಿದೆ. ಈ ವಿಧಾನದಿಂದ ರಾಜ್ಯಕ್ಕೆ ನಷ್ಟವಾಗಿದೆ. ಒಂದು ವರ್ಷಕ್ಕೆ 8,200 ಕೋಟಿ ರೂ.ನಷ್ಟು ವರ್ಷಕ್ಕೆ ನಷ್ಟ ಆಗುತ್ತಿದೆ. ರಾಜ್ಯದಿಂದ ವಾರ್ಷಿಕ ಪೆಟ್ರೋಲ್, ಡೀಸೆಲ್ ಮೇಲೆ 35 ಸಾವಿರ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಅಂದಾಜು 1 ಸಾವಿರ ಕೋಟಿ ರೂ. ವಾಪಸ್ ಬೇರೆ ರೂಪದಲ್ಲಿ ಬರುತ್ತಿದೆ ಎಂದರು.
ಜಿಎಸ್​ಟಿ ಲಾಗು ಆಗುವ ಮೊದಲು ವಾಣಿಜ್ಯ ತೆರಿಗೆ ಪ್ರಗತಿ 14-15 ಶೇ. ಇರುತ್ತಿತ್ತು, ಈಗ ಸ್ವಾಯತ್ತತೆ ಇಲ್ಲ. ಇದರಿಂದ ರಾಜ್ಯಕ್ಕೆ ಬರುವ ತೆರಿಗೆ 25-30 ಸಾವಿರ ಕೋಟಿ ಕಡಿಮೆ ಆಗುತ್ತಿದೆ ಎಂದ ಅವರು, ಜಿಎಸ್​ಟಿ ಜಾರಿಯಿಂದ ಆಗುವ ನಷ್ಟವನ್ನು ತುಂಬಿಕೊಡುವ ಅವಕಾಶವನ್ನೂ ಈಗ ನಿಲ್ಲಿಸಲಾಗಿದೆ ಎಂದರು.
ಕೇಂದ್ರ ಮತ್ತು ಹಣಕಾಸು ಆಯೋಗದ ಮುಂದೆ ನಮ್ಮ ವಾದ ಮುಂದಿಡುತ್ತೇವೆ. ಆಯೋಗದ ಟರ್ಮ್ರ್ಸ್​​ ಆಂಡ್ ರೆಫರೆನ್ಸ್ ಮಾಡುವಾಗ ನಮ್ಮನ್ನು ಪರಿಗಣಿಸ ಬೇಕೆಂಬುದು ಒತ್ತಾಯ. ಅನ್ಯ ರಾಜ್ಯದ ಅಭಿಪ್ರಾಯ ಪಡೆಯಲು ಸಿಎಂ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷಾತೀತವಾಗಿ ಮಂಡನೆ ಮಾಡುವ ವಿಚಾರವಿದೆ.
| ಕೃಷ್ಣಬೈರೇಗೌಡ ಕಂದಾಯ ಸಚಿವ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − 11 =
Remember me
