ಬೆಳಗಾವಿ:ಗ್ರಾಮದ ದೇವರ ಜಾಗವನ್ನ ಒಳಗಾಕಿಕೊಳ್ಬೇಡ್ರಪ್ಪಾ, ದೇವಸ್ಥಾನದ ಜಾಗವನ್ನ ಬಿಟ್ಟುಬಿಡಿ ಎಂದು ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಇದನ್ನೂ ಓದಿ:ಬೆತ್ತಲೆಯಾಗಿ ಲಂಡನ್​ ಸುತ್ತಿದ ಸುಂದರಿ- ಇದರ ಕಾರಣ ಕೇಳಿ ಭೇಷ್ ಎಂದ ನೆಟ್ಟಿಗರು!
ತಾಲೂಕಿನ ಗೊಂಡವಾಡ ಗ್ರಾಮದ ದೇವಸ್ಥಾನಕ್ಕೆ ಸೇರಿದ್ದ 5 ಎಕರೆ ಜಮೀನನ್ನು ಪ್ರಭಾವಿಗಳು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಇದರ ವಿರುದ್ಧ ಕಳೆದ ಹಲವು ತಿಂಗಳಿಂದ‌‌ ಗ್ರಾಮಸ್ಥರ ಹೋರಾಟ ನಡೆಸುತ್ತಿದ್ದಾರೆ. ಗ್ರಾಮಸ್ಥರ ಪರ ನಿಂತು ಹೋರಾಡಿದ ಯುವಕ ಸತೀಶ್ ಪಾಟೀಲ್(34) ಮೇಲೆ ಹಲ್ಲೆ ನಡೆಸಲಾಗಿದೆ. ನವೆಂಬರ್ 30ರ ರಾತ್ರಿ ಹಲ್ಲೆ ನಡೆಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಗಜಾನನ ಬಿರ್ಜೆ, ಮಾರುತಿ ಪಾಟೀಲ್, ಕೇದಾರಿ ಪಾಟೀಲ್, ಕೃಷ್ಣಾ ಪಾಟೀಲ್ ಬಸವಂತ ಕತ್ರಾಯ್ ಎಂಬುವವರು ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ. ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ಅವರ ಮೇಲೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ‘ರಾಮ್​ ಸೇತು’ ಶೂಟಿಂಗ್​ ವಿಚಾರ: ಅಕ್ಷಯ್​ ಬೇಡಿಕೆಗೆ ಸಿಎಂ ಆದಿತ್ಯನಾಥ ಏನಂದ್ರು?
ಘಟನೆ ಹಿನ್ನೆಲೆ ಶಾಸಕ ಸತೀಶ್ ಜಾರಕಿಹೋಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಹಲ್ಲೆ ಆರೋಪಿಗಳಿಗೆ ಶಿಕ್ಷೆ ಕೊಡಿಸಿ, ಅತಿಕ್ರಮಣವಾಗಿರುವ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಹಿಂದಿರುಗಿಸುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬಸ್ಸೊಳಗೆ ತೂರಿಬಂದ ಪೈಪ್​​- ಶಿಶು ಎತ್ತಿಕೊಂಡಿದ್ದ ಯುವತಿಯ ರುಂಡವೇ ಕಟ್ಟಾಯ್ತು!

ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
