ಮೈಸೂರು:ಇತ್ತೀಚೆಗೆ ಮಕ್ಕಳನ್ನು ಇಂಗ್ಲಿಷ್​ನಲ್ಲೇ ಓದಿಸಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಕೆಲಸ ಸಿಗುವುದು ಇಂಗ್ಲಿಷ್ ಇದ್ದರೆ ಮಾತ್ರ. ಆದರೆ, ಇಂಗ್ಲಿಷ್ ಅನ್ನು ಕೆಲಸಕ್ಕೆ ಇಟ್ಟುಕೊಳ್ಳಿ, ಕನ್ನಡದ ಅಸ್ಮಿತೆ ಉಳಿಸಲು ಕನ್ನಡವನ್ನು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು ಎಂದು ನಾದಬ್ರಹ್ಮ ಹಂಸಲೇಖ ಅವರು ತಿಳಿಸಿದರು.
ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದು, ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.
ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವರು ನನ್ನ ಆಯ್ಕೆಯನ್ನು ಕಾವ್ಯಕ್ಕೆ ಸಿಕ್ಕ ಗೌರವ ಅಂದರು. ಇನ್ನು ಕೆಲವರು ಸಾಮಾಜಿಕ ನ್ಯಾಯ ಎಂದು ಹೇಳಿದರು. ಆದರೆ, ಅದ್ಯಾವುದನ್ನು ವ್ಯಾಖ್ಯಾನಿಸಲು ಕಷ್ಟ. ನಾವು ಸಿನಿಮಾ ಬರಹಗಾರ. ನನ್ನನ್ನು ಕವಿ ಅಂದರೆ, ಕವಿ ಪಟ್ಟ ಬೇಡ ಎಂದು ಹೇಳುತ್ತೇನೆ. ಕವಿ ಪಟ್ಟ ತೆಗೆದುಕೊಂಡರೆ ಮೇಲು, ಮಧ್ಯ ಹಾಗೂ ಕೆಳಗೆ ಅಂತ ಮೂರು ಭಾಗ ಮಾಡುತ್ತಾರೆ. ದಸರಾ ಉದ್ಘಾಟನೆ ಸಿಕ್ಕಿದ್ದು, ಸಾಮಾಜಿಕ ನ್ಯಾಯ ಎಂದು ಹೇಳುತ್ತಾರೆ. ಆದರೆ, ಸಾಮಾಜಿಕ ನ್ಯಾಯಾವು ಅಲ್ಲ, ಕಾವ್ಯಕ್ಕೆ ಸಿಕ್ಕ ನ್ಯಾಯ ಎಂದೂ ಹೇಳುವುದಿಲ್ಲ ಎಂದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ವಿಚಾರವಾಗಿ ಮಾತನಾಡಿದ ಹಂಸಲೇಖ, ನಿಜಕ್ಕೂ ಇದನ್ನ ನಾವು ಗಮನಿಸಲೇಬೇಕಿದೆ. ರೈತರ ಬಗ್ಗೆ ನನಗೆ ಕಾಳಜಿ ಇದೆ. ಸ್ಮಾರ್ಟ್ ಸಿಟಿ ಮಾಬೇಕೆಂಬುದು ಕೆಲವರ ಆಶಯ. ಆದರೆ, ಇದು ನನಗೆ ಇಷ್ಟವಿಲ್ಲ. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಮಾಡುವುದು ಮುಖ್ಯ. ಸ್ಮಾರ್ಟ್ ವಿಲೇಜ್ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಇದನ್ನೂ ಓದಿ:ಪುಷ್ಪ 2 ಪೋಸ್ಟರ್​​​ನಲ್ಲಿ ಅಲ್ಲು ಅರ್ಜುನ್​​​​​ ಕಿರುಬೆರಳಿಗೆ ಪಿಂಕ್ ಕಲರ್​​​​​ ನೈಲ್ ಪಾಲಿಶ್ ಹಚ್ಚಿರುವುದು ಏಕೆ?
ನನಗೆ ಕನ್ನಡ ಒಂದಂಶ ಆಗಬೇಕು. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡಕ್ಕಾಗಿ ಕಾವಲಿಡಿ’ ಕನ್ನಡವನ್ನು ರಕ್ಷಿಸಬೇಕು. ಹಿಂದಿ ಹೇರಿಕೆ ಇಂದಿನಿಂದ ಅಲ್ಲ ನಾನು 8ನೇ ತರಗತಿ ಇದ್ದಾಗಿನಿಂದಲೂ ಇದೆ. ದೆಹಲಿಗೆ ನಮ್ಮ ಕನ್ನಡ ಬೇಕಾಗಿಲ್ಲ ಹಾಗೆಯೇ ನಮಗೂ ಹಿಂದಿ ಬೇಕಾಗಿಲ್ಲ. ಆದರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ ಹಿಂದಿನ ಕಾಲದಿಂದಲೂ ನಡೆಯುತ್ತಿದೆ. ಆದರೆ, ಈಗ ಅದು ಜಾಸ್ತಿಯಾಗಿದೆ ಎಂದು ತಿಳಿಸಿದರು.
ಕನ್ನಡ ಶಾಲೆ ಮುಚ್ಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಹಂಸಲೇಖ, ಇಡೀ ಕರ್ನಾಟಕದ ಸೈಟ್‌ಗೆ ಕನ್ನಡವೇ ಪತ್ರ. ತಾಯಿಯು ತನ್ನ ಮಕ್ಕಳಿಗೆ ಮೊದಲು ಕನ್ನಡದ ಬಗ್ಗೆ ಹೇಳಿಕೊಡಬೇಕು. ಇತ್ತೀಚೆಗೆ ಮಕ್ಕಳನ್ನು ಇಂಗ್ಲಿಷ್​ನಲ್ಲೇ ಓದಿಸಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಕೆಲಸ ಸಿಗುವುದು ಇಂಗ್ಲಿಷ್ ಇದ್ದರೆ ಮಾತ್ರ. ಹಾಗಾಗಿ ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಹೋಗಿದ್ದಾರೆ. ಇಂಗ್ಲಿಷ್ ಅನ್ನು ನಿಮ್ಮ ಕೆಲಸಕ್ಕೆ ಇಟ್ಟುಕೊಳ್ಳಿ ಆದರೆ, ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು.ಇದರಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸನಾತನ ಧರ್ಮದ ಪ್ರಶ್ನೆ ಹಾಗೂ ಮಹಿಷಾ ದಸಾರ ಕುರಿತಾದ ಪ್ರಶ್ನೆಗೆ ಹಂಸಲೇಖ ಅವರು ಸನ್ನೆ ಮೂಲಕ ನೋ ಕಮೆಂಟ್ಸ್ ಎಂದರು.
ಸಣ್ಣಪುಟ್ಟ ಸಮಸ್ಯೆ ಪರಿಹಾರಕ್ಕೂ ಜನ ನನ್ನ ಬಳಿಗೆ ಬರುತ್ತಾರೆಂದರೆ ನೀವು ಇದ್ದೇನು ಪ್ರಯೋಜನ? ಸಿದ್ದು ಕ್ಲಾಸ್!

ರಾಮ ಜನ್ಮಭೂಮಿಯ ಭದ್ರತೆಗಾಗಿ ಅಯೋಧ್ಯೆ ತಲುಪಿದ ಎಸ್‌ಎಸ್‌ಎಫ್‌ನ ಮೊದಲ ತಂಡ

ಅಮೆರಿಕ ಎಚ್ಚರಿಕೆ ನಡುವೆಯೂ ರಷ್ಯಾಗೆ ಆಗಮಿಸಿದ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
