ಬೆಂಗಳೂರು:ಹೇಳಿಕೊಳ್ಳೋಕೆ ಈತ ಸಮಾಜದಲ್ಲಿ ಗಣ್ಯವಕ್ತಿ. ಆದ್ರೆ ಒಳಗೊಳಗೆ ಮಾಡೋದೆಲ್ಲ ನೀಚ ಕೆಲಸ, ಹೆಣ್ಣುಬಾಕ. ಬೇರೆ ಹೆಣ್ಮುಕ್ಳ ಜತೆ ಪೋಲಿ ಚಾಟ್​ ಮಾಡ್ತಾನೆ. ಬೇರೆ ಸ್ತ್ರೀಯರ ಜತೆಗಿನ ರಾಸಲೀಲೆ ವಿಡಿಯೋ ಮಾಡಿಕೊಂಡು ಹಿಂಸಿಸುತ್ತಾನೆ… ಇದು ‘ಮಲ್ಲು ಪ್ರೊಡ್ಯೂಸರ್’​ ದಿನಕರ್​ನ ರಾಸಲೀಲೆ ಸ್ಟೋರಿ.
ಇವನ ಮೇನ್​ ಟಾರ್ಗೆಟ್​ ಫೇಸ್​ಬುಕ್​- ಇನ್​ಸ್ಟಾಗ್ರಾಂನಲ್ಲಿರುವ ಸುಂದರ ಯುವತಿಯರು. ಸಿನಿಮಾದಲ್ಲಿ ನಟಿಸುವ ಆಸೆಯುಳ್ಳ ಮಹಿಳೆಯರು ಮತ್ತು ಯುವತಿಯರಿಗೆ ತಾನು ಸಿನಿಮಾ ಪ್ರೊಡ್ಯೂಸರ್​, ನನ್ನ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡ್ತೀನಿ ಎಂದು ಸ್ನೇಹ ಬೆಳೆಸಿಳ್ಳುತ್ತಿದ್ದ. ಅವರ ಮೊಬೈಲ್​ ನಂಬರ್​ ಪಡೆದು ಅಶ್ಲೀಲ ಮೆಸೇಜ್​ಗಳನ್ನ ಕಳುಹಿಸುತ್ತಿದ್ದ. ಆ ಮೇಲ ‘ಮಂಚಕ್ಕೆ ಬನ್ನಿ’ ಎಂದು ಕರೆಯುತ್ತಿದ್ದ. ಇದೆಲ್ಲವನ್ನೂ ಪ್ರಶ್ನಿಸಿದ ಪತ್ನಿ ರೋಷಿಣಿಗೆ ಆತ ಟಾರ್ಚರ್​ ಕೊಡ್ತಿದ್ದ. ಈ ವಿಚಾರವನ್ನು ನೀನು ಎಲ್ಲೂ ಹೇಳಂಗಿಲ್ಲ. ಹೇಳಿದ್ರೆ ಸುಮ್ನೆ ಬಿಡಲ್ಲ ಎಂದು ಧಮ್ಕಿ ಹಾಕ್ತಿದ್ದ… ಹೀಗೆಂದು ನೊಂದ ರೋಷಿಣಿ ಅಳಲು ತೋಡಿಕೊಂಡಿದ್ದಾರೆ. ಸಿನಿಮಾ ನಿರ್ದೇಶಕಿ ಹಾಗೂ ಫಿಲ್ಮಿ ಫ್ಯಾಷನ್ ಡಿಸೈನರ್ ಆಗಿರುವ ರೋಷಿಣಿಯೇ ತನ್ನ ಗಂಡನ ರಾಸಲೀಲೆಯನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದು. ನ್ಯಾಯ ಕೊಡಿಸುವಂತೆ‘ದಿಗ್ವಿಜಯ ನ್ಯೂಸ್​‘ ಮೊರೆ ಹೋಗಿದ್ದಾರೆ.
ಪತ್ನಿ ಇದ್ರೂ ಹಲವರ ಜತೆ ಮಲಯಾಳಂ ಸಿನಿಮಾ ನಿರ್ಮಾಪಕ ದಿನಕರ್​ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆ ಜತೆಗಿನ ರಾಸಲೀಲೆಯ ವಿಡಿಯೋವನ್ನೂ ದಿನಕರ್​ ಮೊಬೈಲ್​ನಲ್ಲಿ ಮಾಡಿಕೊಂಡಿದ್ದ. ಈ ವಿಡಿಯೋ ಬಗ್ಗೆ ಸಂತ್ರಸ್ತ ಮಹಿಳೆ ರೇಖಾ ಎಂಬಾಕೆ ದಿನಕರ್​ ಪತ್ನಿ ರೋಷಿಣಿಗೆ ತಿಳಿಸಿದ್ದಾರೆ. ನಿನ್ನ ಗಂಡನಿಂದ ಕಿರುಕುಳ ಜಾಸ್ತಿ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ ರೋಷಿಣಿಗೆ ದಿನಕರ್​ ಮನಸೋಇಚ್ಛೆ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದಾನೆ. ಸೆಪ್ಟೆಂಬರ್​ನಲ್ಲಿ ಮನೆ ಬಿಟ್ಟು ಹೋದವನು ಇದುವರೆಗೂ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿಲ್ಲ.ಇದನ್ನೂ ಓದಿರಿಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?
ಮಾಡಬಾರದ ಕೆಲ್ಸ ಮಾಡಿ ತಲೆಮರೆಸಿಕೊಂಡಿರುವ ಆರೋಪಿ ದಿನಕರ್​ನನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ನಾನು ಮತ್ತು ರೇಖಾ ಎಂಬಾಕೆ ದೂರು ಕೊಟ್ಟು ನಾಲ್ಕು ತಿಂಗಳಾಗಿದೆ. ಆದರೂ ಆತನ್ನು ಬಂಧಿಸಿಲ್ಲ ಏಕೆ? ಎಂದು ‘ದಿಗ್ವಿಜಯ ನ್ಯೂಸ್​’ ಕಚೇರಿಯಲ್ಲಿ ರೋಷಿಣಿ ಅಸಮಾಧಾನ ಹೊರ ಹಾಕಿದ್ದಾರೆ.
‘ಮದುವೆಯಾದ ಮೊದಲ ವಾರವೇ ನನ್ನ ಗಂಡ ಸರಿ ಇಲ್ಲ ಎಂಬುದು ಗೊತ್ತಾಯ್ತು. ಆಗಲೂ ಆತನಿಗೆ ಮತ್ತೊಂದು ಹುಡುಗಿಯ ಸಹವಾಸ ಇತ್ತು. ಆದರೂ ನಾನೂ ಸಹಿಸಿಕೊಂಡೇ ಬಂದೆ. ಕಳೆದ ಜುಲೈ 7ರಂದು ರೇಖಾ ಎಂಬಾಕೆ ನಿನ್ನ ಗಂಡ ವಿಡಿಯೋ ಇಟ್ಟುಕೊಂಡು ಹಿಂಸಿಸುತ್ತಿದ್ದಾನೆ ಎಂದು ಅಳಲುತೋಡಿಕೊಂಡರು. ಆಗಲೇ ನನಗೆ ಗೊತ್ತಾಗಿದ್ದು ಅವನೊಬ್ಬ ಕಾಮುಕ ಎಂದು. ಗಂಡನ ಮೊಬೈಲ್​ ಚೆಕ್​ ಮಾಡಿದೆ. ಲೆಕ್ಕವಿಲ್ಲದಷ್ಟು ಯುವತಿಯರಿಗೆ ಅಶ್ಲೀಲ ಫೋಟೋ ಕಳುಹಿಸಿದ್ದ. ನನ್ನ ಸಂಬಂಧಿಕರ ಹುಡುಗಿಯೊಬ್ಬಳಿಗೂ ಅಶ್ಲೀಲ ಮೆಸೇಜ್​ ಕಳುಹಿಸಿದ್ದ. ನಾನು ಇಲ್ಲದ ವೇಳೆ ಹಲವು ಯುವತಿಯರು ಮನೆಗೆ ಬಂದು ಹೋಗಿದ್ದಾರೆ. ಅನುಮಾನ ಬಂದು ಪಕ್ಕದ ಮನೆಯವರನ್ನ ಕೇಳಿದೆ. ಅವರು ಹೇಳಿದರು ಈ ಮನೆಗೆ ”ಸೂ.. ಮನೆ” ಎಂದೇ ಕರೀತಾರೆ ಅಂತ. ನನಗೆ ಶಾಕ್​ ಆಯ್ತು’ ಎಂದು ರೋಷಿಣಿ ಕಣ್ಣೀರಿಟ್ಟರು.
‘ರೇಖಾ ಮೈಯನ್ನ ಸಿಗರೇಟ್​ನಿಂದ ದಿನಕರ್​ ಸುಟ್ಟಿ ಹಿಂಸಿಸಿದ್ದಾನೆ. ಆಕೆಗೆ ಚಿತ್ರಹಿಂಸೆ ಕೊಟ್ಟಿದ್ದಾನೆ. ಎಲ್ಲರಿಂದರೂ ದೂರ ಮಾಡಿದ್ದಾನೆ. ಇವನಿಂದ ಅದೆಷ್ಟು ಹೆಣ್ಮಕ್ಳ ಜೀವನ ಹಾಳಾಗಿದೆಯೋ ಗೊತ್ತಿಲ್ಲ ರೋಷಿಣಿ, ನಾನು ಮತ್ತು ರೇಖಾ ಇಬ್ಬರೂ ದಿನಕರ್​ ವಿರುದ್ಧ ಪ್ರತ್ಯೇಕ ದೂರು ನೀಡಿದ್ದೇವೆ. ದೂರು ಕೊಟ್ಟು ನಾಲ್ಕು ತಿಂಗಳು ಆಯ್ತು. ಯಾಕೆ ಅವನು ಇನ್ನೂ ಅರೆಸ್ಟ್​ ಆಗ್ತಿಲ್ಲ?’ ಎಂದರು.ಇದನ್ನೂ ಓದಿರಿಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ದಿಗ್ವಿಜಯ ನ್ಯೂಸ್​ಗೆ ಕಾಲ್​ ಮಾಡಿದ್ದ ಮತ್ತೊಬ್ಬ ಸಂತ್ರಸ್ತೆ, ’11 ವರ್ಷದಿಂದ ದಿನಕರ್​ ಜತೆಗಿದ್ದ. ಅವನು ನನ್ನ ತಂದೆಯ ಸ್ನೇಹಿತ. ಹಾಗಾಗಿ ಪರಿಚಯ ಆಯ್ತು. ಎಲ್ಲ ರೀತಿಯಲ್ಲೂ ನನ್ನ ಲೈಫ್​ನ ಡ್ಯಾಮೇಜ್​ ಮಾಡಿದ್ದಾನೆ’ ಎನ್ನುತ್ತಾ ಕಣ್ಣೀರಿಟ್ಟರು. ‘ನನಗೆ ಗೊತ್ತಿಲ್ಲದೆ ಫೋಟೋ ತೆಗೆದುಕೊಂಡಿದ್ದ. ರೋಷಿಣಿ ಅವರನ್ನ ಸಂಪರ್ಕಿಸಿ ವಿಷಯ ಹೇಳಲು ಪ್ರಯತ್ನಿಸಿದೆ. ಈ ವಿಚಾರ ಗೊತ್ತಾಗಿ ಅವನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ…’ ಎಂದು ನೋವನ್ನು ಹೊರಹಾಕಿದರು.
ಸಿನಿಮಾ ನಟನೆಯ ಹುಚ್ಚಿರುವ ಹುಡುಗಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮೂವಿಯಲ್ಲಿ ಚಾನ್ಸ್ ಕೊಡಿಸ್ತೀನಿ ಅಂತ ಹೇಳುವ ಈತನ ಮಾತಿಗೆ ಮರುಳಾಗಬೇಡಿ. ಇವನ ಪರಿಚಯ ಈಗಾಗಲೇ ನಿಮಗಿದ್ದರೆ ಜಾಗ್ರತೆ. ಇವನ ಫ್ರೆಂಡ್​ಶಿಪ್​ ಕಟ್​ ಮಾಡಿಕೊಳ್ಳೋದು ಒಳಿತು.
ದಿನಕರ್ ಮೂಲತಃ ಮಲಯಾಳಿ ಆದರೂ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ರೋಷಿಣಿ ಕೊಡಗಿನವರು. 2006ರಲ್ಲಿ ದಿನಕರ್ ಹಾಗೂ ರೋಷಿಣಿ ಮದುವೆ ಆಗಿದ್ದರು. ಮದುವೆ ನಂತರ ದಂಪತಿ ಬೆಂಗಳೂರಿನಲ್ಲೇ ವಾಸವಿದ್ದರು. ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿನಕರ್ ಮಲಯಾಳಂನ ‘ಮೈ ಸ್ಟೋರಿ’ ಚಿತ್ರ ನಿರ್ಮಾಣ ಮಾಡಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಹಾಗೂ ಪಾರ್ವತಿ ಮೆನನ್ ಅಭಿನಯದ ಚಿತ್ರ 2018ರಲ್ಲಿ ತೆರೆ ಕಂಡಿತ್ತು. ರೋಷಿಣಿ ‘ಮೈ ಸ್ಟೋರಿ’ ಚಿತ್ರ ನಿರ್ದೇಶನ ಮಾಡಿದ್ದರು. ಕನ್ನಡ, ತಮಿಳು, ಮಲಯಾಳಂ ಸೇರಿ ಸೌತ್ ಇಂಡಿಯಾದ 70ಕ್ಕೂ ಹೆಚ್ಚು ಸಿನಿಮಾಗಳಿಗೆ ರೋಷಿಣಿ ವಸ್ತ್ರ ವಿನ್ಯಾಸಕಿ ಆಗಿದ್ದಾರೆ.
ಕನ್ನಡದ ಕಲ್ಲರಳಿ ಹೂವಾಗಿ, ಮುಂಗಾರು ಮಳೆ-2 ಹಾಗೂ ದರ್ಶನ್ ಅಭಿನಯದ ರಾಜವೀರ, ಮದಕರಿ ನಾಯಕ ಸಿನಿಮಾಗಳಿಗೂ ವಸ್ತ್ರ ವಿನ್ಯಾಸಕಿ ರೋಷಿಣಿ. ದಿನಕರ್-ರೋಷಿಣಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

ಅಯ್ಯೋ ಅಮ್ಮ… ಎನ್ನುತ್ತ ಬಂದ ಪುಟ್ಟಕಂದನನ್ನೂ ಕೊಂದೇ ಬಿಟ್ಟ! ತಾಯಿಯದ್ದು ಅರ್ಧಜೀವ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 1 =
Remember me
