ಬಾಲ್ಯದಿಂದ ಹೊನ್ನಾವರ, ಉಡುಪಿ, ಮುಂಬೈ ಸೇರಿ ಹಲವು ಸ್ಥಳಗಳಲ್ಲಿ ವಿದ್ಯಾಭ್ಯಾಸ ಹಾಗೂ ಕೆಲಸ ನಿರ್ವಹಿಸಿದ ಅನಂತ್ ನಾಗ್, ‘ಎಲ್ಲಿಯೂ ಒಂದೆಡೆ ನಿಂತವನಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆ ಪಯಣಿಸುತ್ತಿದ್ದೆ. ಹೀಗಾಗಿ ನನ್ನ ಬದುಕಿನಲ್ಲಿ ಒಂದಿಬ್ಬರು ಆಪ್ತ ಗೆಳೆಯರು ಎಂದು ಹೇಳುವುದು ಕಷ್ಟ. ಒಂದೊಂದು ಘಟ್ಟದಲ್ಲಿ ಒಂದಿಷ್ಟು ಒಳ್ಳೆಯ ಸ್ನೇಹಿತರಾದರು. ಎಲ್ಲರೂ ನನ್ನವರೆಂದು ಭಾವಿಸಿ ಬದುಕಿದ್ದೇನೆ. ‘ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು, ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು’ ಎಂಬ ಹಾಡಿನ ಸಾಲಿನಂತೆ ನನ್ನ ಜೀವನ. ಈ ಪಯಣದಲ್ಲಿ ನನ್ನ ಜತೆ ಬಂದ, ಬರುವ, ಇದ್ದ, ಇರುವ ಪ್ರತಿಯೊಬ್ಬರೂ ಸ್ನೇಹಿತರೇ..’ ಎಂದು ಹೇಳಿಕೊಳ್ಳುತ್ತಾರೆ. ‘ಆನಂದಾಶ್ರಮದ ಸ್ವಾಮಿ ರಾಮ್ಾಸ್ ಗುರುಗಳು ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಅವರ ಪ್ರವಚನಗಳು, ಮಾತುಗಳು, ಅಧ್ಯಾತ್ಮ ಪುಸ್ತಕಗಳು ಯಾವ ಕಾಲಕ್ಕೂ ನನ್ನ ಜತೆಗಿರುತ್ತವೆ. ಇನ್ನು ಪುಸ್ತಕಗಳು ನನಗೆ ಪರ್ಮನೆಂಟ್ ಸ್ನೇಹಿತರು’ ಎನ್ನುತ್ತಾರೆ. ಸ್ನೇಹ ಸಂಬಂಧದ ಬಗ್ಗೆ ಭಾರತೀಯ ಸಂಸ್ಕೃತಿಯಲ್ಲೂ ಮಹತ್ವವಿದೆ ಎನ್ನುವ ಅವರು, ‘ಯಾರನ್ನೂ ದ್ವೇಷಿಸದೇ ಬದುಕುವುದು. ಭಗವದ್ಗೀತೆಯ ಶ್ಲೋಕದಲ್ಲಿ ಹೇಳಿರುವಂತೆ ಮನುಷ್ಯ ಕರುಣೆಯನ್ನು ತೋರುತ್ತಾ, ನಿರಹಂಕಾರಿಯಾಗಿ, ನಿಮೋಹಿಯಾಗಿ, ದ್ವೇಷವಿಲ್ಲದೇ, ಇತರರನ್ನು ನಿಂದಿಸದೇ ಬದುಕಿದರೆ ಪ್ರಪಂಚವೇ ಸ್ನೇಹ ಬಯಸುತ್ತದೆ. ಎಲ್ಲರೂ ಮಿತ್ರರಾಗುತ್ತಾರೆ. ಅಜಾತಶತ್ರುವಾಗಿ ಬದುಕುವುದೇ ನಮ್ಮ ಸಂಸ್ಕೃತಿ. ಯುವ ಪೀಳಿಗೆಯೂ ಅದನ್ನೇ ಅನುಸರಿಸಿದರೆ ಚೆಂದ’ ಎನ್ನುತ್ತಾರೆ ಅನಂತ್ ನಾಗ್.
ನಟ ಡಾಲಿ ಧನಂಜಯ ಮತ್ತು ನಾಗಭೂಷಣ ಮೈಸೂರಿನಲ್ಲಿ ಒಟ್ಟಿಗೇ ಓದಿದವರು. ಕಾಲೇಜು ದಿನಗಳಿಂದಲೂ ಒಳ್ಳೆಯ ಗೆಳೆಯರು. ಚಿತ್ರರಂಗದಲ್ಲಿ ಬೆಳೆದಂತೆ, ಅವರ ಗೆಳೆತನವೂ ಗಾಢವಾಗಿ ಸಾಗಿದೆ. ಡಾಲಿ ಜತೆಗಿನ ಗೆಳೆತನದ ಬಗ್ಗೆ ನಾಗಭೂಷಣ, ‘ಧನಂಜಯ, ಪೂರ್ಣ ಸೇರಿ ಗೆಳೆಯರ ದೊಡ್ಡ ಗ್ಯಾಂಗ್ ಇದೆ. ಅದು ಫ್ರೆಂಡ್​ಶಿಪ್ ಡೇ, ಹುಟ್ಟುಹಬ್ಬಗಳಿಗೆಷ್ಟೇ ಸೀಮಿತವಾಗದೇ ಅವನ್ನೂ ಮೀರಿದ ಗೆಳೆತನ. ಧನಂಜಯ ಕಷ್ಟ ಸುಖಗಳಲ್ಲಿ ಹೆಗಲಿಗೆ ಹೆಗಲಾಗಿ ಇರುತ್ತಾನೆ. ‘ಬಡವ ರಾಸ್ಕಲ್’ ಸಮಯದಲ್ಲಿಯೇ ನಿನಗೊಂದು ಸಿನಿಮಾ ಮಾಡುತ್ತೇನೆ, ಒಳ್ಳೆ ಕಥೆ ಬಂದಾಗ ಹೇಳು ಎಂದಿದ್ದ. ‘ಟಗರು ಪಲ್ಯ’ ಕಥೆ ಇಷ್ಟವಾಯಿತು. ಧನಂಜಯ ಸಿನಿಮಾ ನಿರ್ವಿುಸುತ್ತಿದ್ದಾನೆ. ನಾನು ನಾಯಕನಾಗಿದ್ದೇನೆ. ಇದಕ್ಕಿಂತ ಒಬ್ಬ ಗೆಳೆಯನಿಂದ ಇನ್ನೇನು ಬೇಕು?’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ನಾಗಭೂಷಣ.
‘ಪ್ರೇಮಂ ಪೂಜ್ಯಂ’, ‘ಜೂಲಿಯೆಟ್ 2’ ಹಾಗೂ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರಗಳಲ್ಲಿ ನಟಿಸಿರುವ ಬೃಂದಾ ಆಚಾರ್ಯ ಅವರಿಗೆ ಅವರ ತಾಯಿಯೇ ಬೆಸ್ಟ್ ಫ್ರೆಂಡ್ ಅಂತೆ. ‘ತುಂಬ ಜನ ಫ್ರೆಂಡ್ಸ್ ಇದ್ದಾರೆ. ಆದರೆ, ಹುಟ್ಟಿದಾಗಿನಿಂದ ಇದುವರೆಗೆ ನನ್ನ ಬೆಸ್ಟ್ ಫ್ರೆಂಡ್ ಅಂದರೆ ಅದು ಅಮ್ಮ. ಅಪ್ಪ, ಅಕ್ಕ ಮತ್ತು ನನ್ನ ಬಗ್ಗೆ ಅವರ ಬಳಿ ಪೂರ್ತಿ ಮಾಹಿತಿ ಇರುತ್ತದೆ. ಬಾಲ್ಯದಿಂದಲೂ ಅಮ್ಮ ನಮ್ಮನ್ನು ಫ್ರೆಂಡ್​ನಂತೆ ನೋಡುತ್ತಾ ಬಂದಿದ್ದಾರೆ. ಕ್ಲೋಸ್ ಫ್ರೆಂಡ್ಸ್ ಬಳಿ ಎಲ್ಲವನ್ನೂ ಹೇಳಿಕೊಳ್ಳುವಂತೆ, ನಾನು ಪ್ರತಿದಿನ ಬೆಳಗ್ಗೆ ಒಂದು ತಾಸು ಅಮ್ಮನ ಜತೆ ಮಾತನಾಡುತ್ತೇನೆ. ಹಿಂದಿನ ದಿನ ಏನೆಲ್ಲಾ ಆಯಿತು ಎಂಬುದನ್ನು ಸಂಪೂರ್ಣವಾಗಿ ಅವರಿಗೆ ಹೇಳುತ್ತೇನೆ. ನಾನು ಆ ಘಟನೆಗಳನ್ನು ಮರೆತಿದ್ದರೂ, ಅವರು ಮರೆಯುವುದಿಲ್ಲ. ಅಷ್ಟು ನೆನಪಿನ ಶಕ್ತಿ ಅವರದು. ಅಮ್ಮ ನನ್ನ ಫಸ್ಟ್ ಮತ್ತು ಬೆಸ್ಟ್ ಫ್ರೆಂಡ್’ ಎಂದು ಹೇಳಿಕೊಳ್ಳುತ್ತಾರೆ ಬೃಂದಾ ಆಚಾರ್ಯ.
2000 ರೂ. ನೋಟು ಹಿಂಪಡೆ ವಿಚಾರ: ಆರ್​ಬಿಐನಿಂದ ಮತ್ತೆ ಮನವಿ; ಇಲ್ಲಿದೆ ವಿವರ..

ಇನ್ನು ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ದಾಖಲೆ; ಸಂಸತ್ತಲ್ಲಿ ಮಹತ್ವದ ಮಸೂದೆ ಅಂಗೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 14 =
Remember me
