ಬೆಂಗಳೂರು:ನೈಋತ್ಯ ಮಾನ್ಸೂನ್​( ಮುಂಗಾರು ಮಳೆ) ಕುರಿತು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂತಿಮ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಕರ್ನಾಟಕದಲ್ಲಿಯೂ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿಯಲಿದೆ. ಜೂನ್​ನಲ್ಲಿ ದಕ್ಷಿಣ ಭಾರತ ಸೇರಿ ದೇಶಾದ್ಯಂತ ವಾಡಿಕೆಯಷ್ಟೇ ಬೀಳಲಿದೆ. ಜುಲೈನಲ್ಲಿ ಬೀಳುವ ಮಳೆ ವರದಿಯನ್ನು ಜೂನ್​ ಕೊನೆಯ ವಾರದಲ್ಲಿ ಐಎಂಡಿ ಬಿಡುಗಡೆ ಮಾಡಲಿದೆ.
ಫೆಸಿಫಿಕ್​ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್​ನಿಂದ 1.5 ಡಿಗ್ರಿ ಸೆಲ್ಸಿಯಸ್​ವರೆಗೆ ಹೆಚ್ಚು ದಾಖಲಾದರೆ “ಎಲ್​ ನಿನೋ’ ಉಂಟಾಗುತ್ತದೆ.ಫೆಸಿಫಿಕ್​ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ “ಲಾ-ನಿನಾ’ ಎಂದು ಕರೆಯಲಾಗುತ್ತಿದೆ. ಎಲ್​ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮಳೆ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ನಿಯಂತ್ರಕ ಸೂಚ್ಯಂಕ ಪ್ರಕಾರ ಕಳೆದ ಫೆಬ್ರವರಿಯಿಂದ ದುರ್ಬಲಗೊಂಡು ಮಧ್ಯಮ ಹಂತಕ್ಕೆ ಬಂದಿರುವ “ಎಲ್​ ನಿನೋ’ ಜೂನ್​ ಅಥವಾ ಜುಲೈನಲ್ಲಿ ಶೂನ್ಯ ಹಂತಕ್ಕೆ ಬರಲಿದೆ. ನಂತರ, “ಲಾ-ನಿನಾ’ ಉಂಟಾಗುವ ಹಿನ್ನೆಲೆಯಲ್ಲಿ ಮುಂಗಾರಿನಲ್ಲಿ ವಾಡಿಕೆಗಿಂತ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಈ ಬಾರಿ ಲಾ-ನಿನಾ’ದಿಂದ ಉತ್ತಮ ಮಳೆ ಬೀಳು ಸಾಧ್ಯತೆ ಇದೆ ಎಂದು ವರದಿಯಲ್ಲಿ ಐಎಂಡಿ ಉಲ್ಲೇಖಿಸಿದೆ. ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಿಂದ ಮೇ 19ರಿಂದ ಮಾನ್ಸೂನ್​ ಆರಂಭವಾಗಿದೆ. ಸದ್ಯ ಬಂಗಾಳಕೊಲ್ಲಿಯ ಮಧ್ಯ, ಈಶಾನ್ಯ ಭಾಗದಿಂದ ಇನ್ನಷ್ಟು ವ್ಯಾಪಿಸಲು ಪೂರಕ ವಾತಾವರಣ ಇದೆ. ಮುಂದಿನ 4 ದಿನಗಳಲ್ಲಿ ಹಂತ ಹಂತವಾಗಿ ಕೇರಳಕ್ಕೆ ಸಮೀಪಿಸುವ ಸಾಧ್ಯತೆ ಇದೆ. ರಾಜ್ಯಕ್ಕೆ ಜೂನ್​ ಮೊದಲ ವಾರದಲ್ಲಿ ಆಗಮಿಸಬಹುದು.
ರೈತ ಆತ್ಮಹತ್ಯೆ ಪ್ರಕರಣ ನಿಲ್ಲಿಸಲು ಶಾಶ್ವತ ಪರಿಹಾರ ತೋರಿಸಿ; ರಾಕೇಶ ಟಿಕಾಯತ್
ಮಳೆ ತುಸು ಕ್ಷೀಣರಾಜ್ಯದ ಹಲವೆಡೆ ಬಿರುಸಾಗಿ ಸುರಿಯುತ್ತಿದ್ದ ಮಳೆ ಸೋಮವಾರದಿಂದ ತುಸು ಇಳಿಮುಖವಾಗಿದೆ. ಕೊಪ್ಪಳದ ಗಂಗಾವತಿ, ಯಾದಗಿರಿಯ ಕವಡಿಮಟ್ಟಿ, ದಾವಣಗೆರೆ, ಕೊಡಗಿನ ಗೋಣಿಕೊಪ್ಪ ಸೇರಿ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಸೋಮವಾರ ವರ್ಷಧಾರೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ಧಾರವಾಡ, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ,ಶಿವಮೊಗ್ಗದಲ್ಲಿ ಮೇ 28ರಿಂದ ಮೇ 30ರವರೆಗೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಬೀಳಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಡಿಕೆಗಿಂತ ಹೆಚ್ಚು ಮಳೆಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಬರಗಾಲ ಕಾಡಿದ್ದ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿರುವುದು ಗಮನಾರ್ಹ. ಮೇ 1ರಿಂದ ಮೇ 27ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 60 ಮಿಮೀ ಮಳೆ ಬೀಳಬೇಕಿತ್ತು. ಆದರೆ, 127 ಮಿಮೀ ವರ್ಷಧಾರೆಯಾಗಿದ್ದು, ವಾಡಿಕೆಗಿಂತ ಶೇ.110 ಹೆಚ್ಚು ಸುರಿದಿದೆ. ದಕ್ಷಿಣ ಕರ್ನಾಟಕದಲ್ಲಿ ಶೇ. 118, ಉತ್ತರ ಕರ್ನಾಟಕದಲ್ಲಿ ಶೇ.45, ಮಲೆನಾಡಲ್ಲಿ ಶೇ.64, ಕರಾವಳಿಯಲ್ಲಿ ಶೇ.55 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪೂರ್ವ ಮುಂಗಾರು ವರ್ಷಧಾರೆಯಿಂದ ಈಗಾಗಲೇ ರಾಜ್ಯದ ಹಲವೆಡೆ ಕೃಷಿ ಚಟುವಟಿಕೆಗಳು ಬಿರುಸಾಗಿ ಸಾಗಿದೆ. ಜಮೀನು ಹದಗೊಳಿಸಿ ಬೀಜ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
