ಬೆಂಗಳೂರು:ನಟಿ ಸ್ಪಂದನಾ ಅಕಾಲಿಕ ಮರಣ ಇಡೀ ಸ್ಯಾಂಡಲ್​ವುಡ್​ನಲ್ಲೇ ಸೂತಕದ ವಾತಾವರಣ ನಿರ್ಮಿಸಿದ್ದು, ರಾಜಕಾರಣಿಗಳು, ಸಚಿವರು, ಹಿರಿಯ ನಟ ನಟಿಯರು ಸೇರಿದಂತೆ ಅನೇಕ ಗಣ್ಯರು, ಸ್ಪಂದನಾ ಮರಣದ ಕುರಿತಾಗಿ ಸಂತಾಪ ಸೂಚಿಸಿದ್ದಾರೆ.
ಇದೀಗ ಸ್ಪಂದನಾ ಕುಟುಂಬಸ್ಥರು, ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆಯನ್ನು ನೆರವೇರಿಸಲು ನಿರ್ಧರಿಸಿದ್ದು ಹರಿಶ್ಚಂದ್ರ ಘಾಟ್​ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮಲ್ಲೇಶ್ವರಂನಲ್ಲಿರುವ ಬಿ.ಕೆ ಹರಿಪ್ರಸಾದ್​ ಮನೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಸುಮಾರು 4 ಗಂಟೆಗೆ ಸ್ಪಂದನ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಶ್ರೀರಾಂಪುರಂನ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು ಈ ಹಿನ್ನೆಲಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಹದಿನೈದು ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

ಅದಲ್ಲದೇ ಸಾರ್ವಜನಿಕ ದರ್ಶನದ ಅವಧಿ ಮುಗಿದ ನಂತರ, ಸ್ಪಂದನಾರನ್ನು ಹರಿಶ್ಚಂದ್ರ ಘಾಟ್​ಗೆ ಕರೆದೊಯ್ಯಲು ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದ್ದು ಮೆರವಣಿಗೆ ನಡೆಯುವಾಗಲೂ ಜನರಿಗೆ ಅಂತಿಮ ದರ್ಶನ ಪಡೆಯುವ ಅವಕಾಶ ಇರುವ ಸಾಧ್ಯತೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
