ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದಷ್ಟೇಕರ್ನಾಟಕ ಸರ್ಕಾರ ಖಾಸಗಿ ಉದ್ಯೋಗ ಕೋಟಾ ಮಸೂದೆಯನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಿತ್ತು. ಬಳಿಕ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮತ್ತಷ್ಟು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿತ್ತು. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೋನ್​ ಪೇ ಸಿಇಒ ಸಮೀರ್‌ ನಿಗಮ್‌, ಟ್ವೀಟ್‌ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಸಮೀರ್‌ ನಡೆಗೆ ಕನ್ನಡಿಗರು ವ್ಯಾಪಕವಾಗಿ ವಿರೋಧಿಸಿ, ತಕ್ಷಣವೇ ಕ್ಷಮೆಕೋರುವಂತೆ ಒತ್ತಾಯಿಸಿದ್ದರು. ಅದರಂತೆಯೇ ಇದೀಗ ಕಡೆಗೂ ಕನ್ನಡಿಗರ ಮುಂದೆ ಸಮೀರ್ ತಲೆಬಾಗಿದ್ದಾರೆ.
My personal statement, clarifying my views on the Karnataka draft job reservation bill and its unintended consequences.pic.twitter.com/vt5aLjmezK
— Sameer.Nigam (@_sameernigam)July 21, 2024

ಅನೇಕ ಕನ್ನಡಿಗರು ಫೋನ್‌ಪೇ ಆ್ಯಪ್​ ಅನ್ನು ಎಲ್ಲರೂ ಅನ್‌ಇನ್‌ಸ್ಟಾಲ್‌ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದೇ ತಡ ಇದೀಗ ಟ್ವೀಟ್​ ಮೂಲಕ ಕನ್ನಡಿಗರಲ್ಲಿ ಸಮೀರ್ ಕ್ಷಮೆಯಾಚಿಸಿದ್ದಾರೆ. ನನ್ನ ಮಾತುಗಳಿಂದ ಯಾರದಾದ್ದರೂ ಮನಸ್ಸಿಗೆ ನೋವುಂಟಾಗಿದ್ದರೇ ಅದಕ್ಕೆ ದಯವಿಟ್ಟು ಕ್ಷಮಿಸಿ. ಕನ್ನಡಿಗರಾಗಲಿ ಅಥವಾ ಕರ್ನಾಟಕ ರಾಜ್ಯಕ್ಕೆ ಆಗಲಿ ಅವಮಾನ ಮಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
