ಬೆಂಗಳೂರು:ಬಡ ಕುಟುಂಬಗಳ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ. ಭತ್ಯೆ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ನಿರ್ಬಂಧ ವಿಧಿಸಬೇಕೆಂಬ ಆರ್ಥಿಕ ಇಲಾಖೆ ಪ್ರಸ್ತಾವನೆಯನ್ನು ಸರ್ಕಾರ ಬದಿಗಿಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.ಸದ್ಯದ ವಿತ್ತೀಯ ಸ್ಥಿತಿಗತಿ ಅವಲೋಕಿಸಿದರೆ ಬಹುದೊಡ್ಡ ಮೊತ್ತ ಬೇಡುವ ಗೃಹಲಕ್ಷ್ಮಿ ಪ್ರಸಕ್ತ ವರ್ಷವೇ ಜಾರಿ ಕಷ್ಟಕರವೆಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿಯೇ ತಿಳಿಸಿದೆ.
ರಾಜಸ್ವ ಮತ್ತು ಬಂಡವಾಳ ವೆಚ್ಚದ ಮೇಲೂ ವ್ಯತಿರಿಕ್ತ ಪರಿಣಾಮಬೀರಲಿದೆ. ಬಜೆಟ್‌ನಲ್ಲಿ ಕಾದಿಟ್ಟ ಲೆಕ್ಕಶೀರ್ಷಿಕೆ ವೆಚ್ಚ ಮತ್ತು ವಿವಿಧ ಇಲಾಖೆಗಳ ಕಾರ್ಯಕ್ರಮಗಳಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ಕಡಿತ ಮಾಡಬೇಕಾದ ಪರಿಸ್ಥಿತಿ ತಲೆದೋರಲಿದೆ.ಆದಾಗ್ಯೂ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.
ಪ್ರಸ್ತುತ ವಿತ್ತೀಯ ಕ್ಲಿಷ್ಟತೆಯ ನಡುವೆ ಗೃಹಲಕ್ಷ್ಮಿ ಯೋಜನೆಯನ್ನು ಬಿಪಿಎಲ್ ಕುಟುಂಬಗಳಿಗೆ ಮಾತ್ರ ಅನ್ವಯಿಸಿದರೆ, ಕನಿಷ್ಟ 32,423 ಕೋಟಿ ರೂ.ಗಳ ವಾರ್ಷಿಕ ಹೊರೆ ಬೀಳಲಿದೆ. ಪ್ರತಿವರ್ಷ ಈ ಪಾಟಿ ಮೊತ್ತವನ್ನು ಭರಿಸುವುದು ಸವಾಲಾಗಲಿದೆ. ವಿತ್ತೀಯ ಶಿಸ್ತು, ಆರ್ಥಿಕ ದಕ್ಷತೆಗೆ ಸಾಧಿಸಲು ವೆಚ್ಚ ಕಡಿತ ಅನಿವಾರ್ಯ. ಇದಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸಿದರೆ ಲಾನುಭವಿಗಳ ಸಂಖ್ಯೆ ತಗ್ಗಲಿದ್ದು, ಅಷ್ಟರಮಟ್ಟಿಗೆ ಆರ್ಥಿಕ ಹೊರೆ ತಗ್ಗಲಿದೆ ಎಂದು ಆರ್ಥಿಕ ಇಲಾಖೆಯು ಜೂನ್‌ನಲ್ಲಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಿತ್ತು.
ಆದರೆ ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆ ಪ್ರಸ್ತಾಪಿಸಿದ್ದ ಷರತ್ತುಗಳಿಗೆ ನೋ ಸಿಗ್ನಲ್ ತೋರಿಸಿ, ಸರಳ ನಿರ್ಬಂದಗಳಿಗೆ ಅವಕಾಶ ಮಾಡಿಕೊಟ್ಟಿದ್ದರು. ಲಾನುಭವಿಗಳ ಸಂಖ್ಯೆಯ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷಕ್ಕೆ 13,500 ಕೋಟಿ ರೂ. ಬೇಕಾಗುವ ಅಂದಾಜಿದ್ದು, ಮುಂದಿನ ವರ್ಷಕ್ಕೆ 31,423 ಕೋಟಿ ರೂ. ವೆಚ್ಚವಾಗಬಹುದು.ಜನರಿಗೆ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಕೆಲವು ತೆರಿಗೆ ಹೆಚ್ಚಳ, ದಕ್ಷತೆಯಿಂದ ತೆರಿಗೆ ವಸೂಲಿ ಮಾಡಿದರೆ ಗ್ಯಾರಂಟಿಗಳಿಗೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸಾಧ್ಯ. ವಿತ್ತೀಯ ಮಿತಿ, ಶಿಸ್ತಿನ ಬಗ್ಗೆ ಆತಂಕ ಬೇಡವೆಂದು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ಗೃಹಲಕ್ಷ್ಮಿ ಜಾರಿ ಮಾರ್ಗ ಸುಗಮಗೊಳಿಸಿದರು ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ರಿಟರ್ನ್ಸ್ ೈಲ್ ಮಾಡುವ ಮಹಿಳೆ, ವೃತ್ತಿ ತೆರಿತೆ ಪಾವತಿ ಮಾಡುವವರು, ಐದು ಎಕರೆಗಿಂತ ಹೆಚ್ಚು ಖುಷ್ಕಿ ಕೃಷಿ ಜಮೀನು ಹೊಂದಿದವರು, ವಾರ್ಷಿಕ 1.2 ಲಕ್ಷ ರೂ. ಅಧಿಕ ಆದಾಯ, ನಾಲ್ಕು ಚಕ್ರಗಳುಳ್ಳ ವಾಹನಗಳ ಮಾಲೀಕತ್ವ, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರು, ಸರ್ಕಾರಿ ಹೊರಮೂಲ/ಗುತ್ತಿಗೆ ಸಿಬ್ಬಂದಿ ಆಗಿರಬಾರದು ಎಂಬ ಷರತ್ತುಗಳನ್ನು ವಿಧಿಸಲು ಇಲಾಖೆ ಪ್ರಸ್ತಾಪಿಸಿತ್ತು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
