ಕೀರ್ತಿನಾರಾಯಣ ಸಿ. ಬೆಂಗಳೂರು
ಮಹಾಮಾರಿ ಕರೊನಾ ಹೊಡೆತಕ್ಕೆ ವಿಶ್ವದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿರುವ ಸಂದರ್ಭದಲ್ಲೂ ಫೈನಾನ್ಸ್ ಸ್ಕಾ್ಯಮ್ಳಿಗೆ ಲೆಕ್ಕವಿಲ್ಲ! ಕೋಟ್ಯಂತರ ಜನರು ಉದ್ಯೋಗ, ಜೀವನೋಪಾಯದ ಚಿಂತೆಯಲ್ಲಿದ್ದರೆ ಕರೊನಾ ಸೇವೆ ಹೆಸರಲ್ಲಿ ಲೂಟಿ ಮಾಡಿದ ಕೋಟಿ ಕೋಟಿ ಹಣ ಕೆಲವರ ಖಜಾನೆ ತುಂಬಿದೆ!
ಕರೊನಾಗೆ ಚಿಕಿತ್ಸೆ, ಆರೋಗ್ಯ ವಿಮೆ, ತುರ್ತು ಸಾಲ, ಉದ್ಯೋಗಾವಕಾಶ, ದೇಣಿಗೆ ಸಂಗ್ರಹಿಸುವ ಟ್ರಸ್ಟ್​ಗಳ ಹೆಸರಿನಲ್ಲಿ ಸೈಬರ್ ಖದೀಮರ ದಾಳಿ ಒಂದೆಡೆಯಾದರೆ ಸರ್ಕಾರದಲ್ಲಿ ಸ್ಯಾನಿಟೈಸರ್, ಪಿಪಿಇ ಕಿಟ್, ಮಾಸ್ಕ್ ಖರೀದಿ, ಆಹಾರ ಕಿಟ್ ವಿತರಣೆ ಹಾಗೂ ಪಡಿತರ ವಿತರಣೆ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ. ಗೋಲ್‍ಮಾಲ್ ನಡೆದಿರುವ ಹಾಗೂ ಕರೊನಾ ಸೋಂಕು ನಿಯಂತ್ರಣಕ್ಕೆ ಖರ್ಚು ಮಾಡಿರುವುದಾಗಿ ಹೇಳಿ ಕೋಟ್ಯಂತರ ರೂ. ಲಪಟಾಯಿಸಿರುವ ಆರೋಪಗಳು ಕೇಳಿಬಂದಿವೆ.
ಕೇಂದ್ರ ಸರ್ಕಾರದ ಆರೋಗ್ಯ ಸೇತು ಆಪ್, ಡಬ್ಲ್ಯುಎಚ್​ಒ ಮಾರ್ಗಸೂಚಿ, ಕರೊನಾ ಪರೀಕ್ಷೆ ಮತ್ತು ಔಷಧ ಕೊಡುವುದಾಗಿ ಸರ್ಕಾರದ ಹೆಸರಿನಲ್ಲೇ ಲಿಂಕ್ ಅಥವಾ ಇ ಮೇಲ್ ಕಳುಹಿಸಿ ನಡೆಯಬಹುದಾದ ದೊಡ್ಡಮಟ್ಟದ ಸೈಬರ್ ದಾಳಿ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಿಬಿಐ ಹಾಗೂ ಕೇಂದ್ರ ಸರ್ಕಾರ ಅಧೀನದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟಿವೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ದೇಶಾದ್ಯಂತ 2020 ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 1.6 ಮಿಲಿಯನ್ ಸೈಬರ್ ಕ್ರೖೆಂ ಪ್ರಕರಣ ವರದಿಯಾಗಿವೆ. ಲಾಕ್​ಡೌನ್ ಸಂದರ್ಭದಲ್ಲಿ ಹಠಾತ್ತನೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಆರಂಭವಾಗಿದ್ದರಿಂದ ಸೈಬರ್ ಖದೀಮರಿಗೆ ಕೃತ್ಯವೆಸಗಲು ನೆರವಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಹಗರಣ
*14 ಲಕ್ಷ ಕಾರ್ವಿುಕರಿಗೆ ಸಹಾಯಧನ ಕೊಟ್ಟ ಮಾಹಿತಿ, 1 ಲಕ್ಷ ಜನರ ಖಾತೆ ವಿವರವೇ ಇಲ್ಲ, 5.58 ಲಕ್ಷ ಕಾರ್ವಿುಕರಿಗೆ ಫುಡ್ಕಿಟ್ ವಿತರಣೆ, ಬಹುತೇಕ ಕ್ಷೇತ್ರಗಳಲ್ಲಿ ಕೊಟ್ಟಿಲ್ಲವೆಂಬ ಆರೋಪ
*4.10 ಕೋಟಿ ರೂ.ಖರ್ಚು ಮಾಡಿ ಉಚಿತ ಸೋಪ್, ಸ್ಯಾನಿಟೈಸರ್, ಮಾಸ್ಕ್ ವಿತರಣೆ ಅಕ್ರಮ, 2 ಬಾರಿ ದುಬಾರಿ ಬೆಲೆಗೆ ಮಹಾರಾಷ್ಟ್ರ ಕಂಪನಿಯ ಪಿಪಿಇ ಕಿಟ್ ಖರೀದಿ
*ಚೀನಾ ಕಂಪನಿಯಿಂದ ಪಿಪಿಇ ಕಿಟ್​ಗಳ ಖರೀದಿ, ಕಳಪೆ ಕಾರಣಕ್ಕೆ ಬಳಕೆ ಸ್ಥಗಿತ
*ಬಳಕೆ ಮಾಡಿದ ವೆಂಟಿಲೇಟರ್ ದೆಹಲಿ ಕಂಪನಿಯಿಂದ ಖರೀದಿ, ಕೋಟ್ಯಂತರ ರೂ. ವೆಚ್ಚ
*97 ರೂ. ಮೌಲ್ಯದ ಸ್ಯಾನಿ ಟೈಸರ್ ಬಾಟಲ್​ಗಳನ್ನು 250 ರೂ. ಕೊಟ್ಟು ಖರೀದಿಸಿರುವುದು
*ದುಬಾರಿ ಬೆಲೆ ಕೊಟ್ಟು ಮದ್ರಾಸ್ ಕಂಪನಿಯಿಂದ ಸಿರಿಂಜ್, ಸಿರಿಂಜ್ ಪಂಪ್ ಖರೀದಿ
*ಕಪ್ಪುಪಟ್ಟಿಗೆ ಸೇರಿದ ಗುಜರಾತ್ ಕಂಪನಿಯಿಂದ 4 ಕೋಟಿ ರೂ.ಗೆ ಗ್ಲೂಕೋಸ್ ಖರೀದಿ.
ಲಸಿಕೆ ಹೆಸರಲ್ಲಿ 13 ಲಕ್ಷ ರೂ.ಧೋಖಾ
ಬೆಂಗಳೂರಿನ ಅಮರಾನಾಯಕ್ ಎಂಬುವರಿಗೆ ಟೆಲಿಗ್ರಾಂನಲ್ಲಿ ಲಿಂಕ್ ಕಳುಹಿಸಿದ ವಂಚಕರು, ಕರೊನಾಗೆ ಔಷಧ ಕಂಡುಹಿಡಿಯುತ್ತಿರುವ ಯುಕೆ ಕಂಪನಿಗೆ ಇಲ್ಲಿಂದ ಲಿಕ್ವಿಡ್ ಪೂರೈಕೆ ಮಾಡಿದರೆ ಒಳ್ಳೆಯ ಕಮಿಷನ್ ಸಿಗುತ್ತದೆ, ಅದಕ್ಕಾಗಿ ಮುಂಗಡವಾಗಿ ಹಣ ಪಾವತಿಸಬೇಕು ಎಂದು ನಂಬಿಸಿ ಹಂತಹಂತವಾಗಿ 13 ಲಕ್ಷ ರೂ.ಪಡೆದು ವಂಚಿಸಿದ್ದಾರೆ. ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗ್ಳೂರಲ್ಲಿ 1500 ಕೇಸ್
ಬೆಂಗಳೂರಲ್ಲಿ ಕೇವಲ 2 ತಿಂಗಳಲ್ಲಿ (ಮಾರ್ಚ್-ಏಪ್ರಿಲ್) ಅಂದಾಜು 1500 ಸೈಬರ್ ಪ್ರಕರಣಗಳು ವರದಿಯಾಗಿವೆ. ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ಮೋಸ, ನಕಲಿ ಇಮೇಲ್, ಲಿಂಕ್​ಗಳನ್ನು ಕಳುಹಿಸಿ, ಉದ್ಯೋಗ ಕೊಡಿಸುವುದಾಗಿ, ಉದ್ದಿಮೆ ಆರಂಭಿಸಲು ಸಾಲ ಕೊಡಿಸುವುದಾಗಿ ಹಾಗೂ ದೇಣಿಗೆ ಸಂಗ್ರಹಿಸುವ ಹೆಸರಲ್ಲಿ ಹೀಗೆ ಹಲವು ರೀತಿಯಲ್ಲಿ ವೈಯಕ್ತಿಕ ಹಾಗೂ ಬ್ಯಾಂಕ್ ವಿವರಗಳನ್ನು ಕಳವು ಮಾಡಿ ಖಾತೆಗೆ ಕನ್ನ ಹಾಕಿದ್ದಾರೆ.
ಕರೊನಾ ಪರಿಸ್ಥಿತಿಯನ್ನೇ ಬಳಸಿಕೊಂಡು ಸೈಬರ್ ವಂಚಕರು, ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಿವೆ. ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಕೋವಿಡ್-19 ಹೆಸರಿನಲ್ಲಿ ಬರುವಂಥ ಇ ಮೇಲ್ ಸಂದೇಶಗಳನ್ನು ತೆರೆಯಬೇಡಿ. ಇ ಮೇಲ್ ಅಥವಾ ಫೋನ್ ಮೂಲಕ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ. ಮೊಬೈಲ್​ಗೆ ಬರುವ ಅಪರಿಚಿತ ಲಿಂಕ್​ಗಳ ಮೇಲೆ ಕ್ಲಿಕ್ ಮಾಡಬೇಡಿ.
| ಎಂ.ಡಿ.ಶರತ್-ಎಸ್​ಪಿ, ಸಿಐಡಿ ಸೈಬರ್ ಘಟಕ
ಸೈಬರ್ ಕಳ್ಳರ ಕೃತ್ಯ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
