|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಮುಂದಿನ ವರ್ಷದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಕಳವಳಕಾರಿಯಾಗುವ ಆತಂಕ ತಲೆದೋರಿದ್ದು, ರಾಜಸ್ವ ಹೆಚ್ಚಿಸಿ, ಸಾಲ ಕಡಿಮೆ ಮಾಡುವ ಹಾಗೂ ಬದ್ಧ ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯ ಎದುರಾಗಿದೆ. ರಾಜ್ಯದ ಆರ್ಥಿಕ ಸಮೀಕ್ಷೆ, ಮಧ್ಯಮಾವಧಿ ವಿತ್ತೀಯ ಯೋಜನೆ 2022-26 (ಎಂಟಿಎಫ್​ಪಿ) ವರದಿಗಳಲ್ಲಿ ರಾಜ್ಯ ಸರ್ಕಾರಕ್ಕೆ ಇಂತಹ ಎಚ್ಚರಿಕೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯವ್ಯಯ ಭಾಷಣದಲ್ಲಿ ವಿತ್ತೀಯ ಕೊರತೆ ಹಾಗೂ ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳಲು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮಕ್ಕೆ ತಿದ್ದುಪಡಿ ತರುವ ಪ್ರಸ್ತಾಪ ಮಾಡಿದ್ದಾರೆ. ಆದರೆ ಎಂಟಿಎಫ್​ಪಿಯಲ್ಲಿ ವಿತ್ತೀಯ ನಿರ್ವಹಣೆ ಪರಿಶೀಲನೆ ಸಮಿತಿಯಿಂದ ಹಿಂದಿನ ಪದ್ಧತಿಗೆ ಮರಳುವಂತೆ ಸಲಹೆ ಬಂದಿದೆ. ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ವಿತ್ತೀಯ ಕೊರತೆ ಜಿಎಸ್​ಡಿಪಿ ಶೇ.3ರ ಒಳಗೆ ಹಾಗೂ ಸಾಲದ ಪ್ರಮಾಣ ಶೇ.25 ರೊಳಗೆ ಇರಬೇಕಿತ್ತು. ಆದರೆ ಕಳೆದ ವರ್ಷ ಕರೊನಾ ಕಾರಣಕ್ಕಾಗಿ ಶೇ. 4 ಹಾಗೂ ಸಾಲದ ಪ್ರಮಾಣವನ್ನು ಜಿಎಸ್​ಡಿಪಿಯ ಶೇ.27ಕ್ಕೆ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಮುಂದಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಶೇ.3.26 ಹಾಗೂ ಸಾಲದ ಪ್ರಮಾಣ ಶೇ.27.49ಕ್ಕೆ ಮುಟ್ಟಲಿದೆ. ಆದ್ದರಿಂದಲೇ ಸರ್ಕಾರ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ತಿದ್ದುಪಡಿಯ ಬಗ್ಗೆ ಪ್ರಸ್ತಾಪ ಮಾಡಿದೆ. ಆದರೆ ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಫೆಬ್ರವರಿಯಲ್ಲಿ ಸಭೆ ನಡೆಸಿ ಮುಂದಿನ 2-3 ವರ್ಷಗಳಲ್ಲಿ ರಾಜ್ಯದ ರಾಜಸ್ವವು ಹೆಚ್ಚಾಗಲು ಹಾಗೂ ಹೊಣೆಗಾರಿಕೆಗಳನ್ನು ಜಿಎಸ್​ಡಿಪಿಯ ಶೇ. 25ಕ್ಕಿಂತ ಕಡಿಮೆ ಮಾಡಲು ಮಾರ್ಗಸೂಚಿಯನ್ನು ಪ್ರಾರಂಭಿಸಬಹುದೆಂದು ಸಲಹೆ ನೀಡಿದೆ. ಆದರೆ ಬಜೆಟ್​ನಲ್ಲಿ ಆ ಸಲಹೆ ನಿರ್ಲಕ್ಷಿಸಲ್ಪಟ್ಟಿದೆ.
ಸಾಲದ ಮೇಲೆ ಅವಲಂಬಿತ:ರಾಜ್ಯ ಈಗ ಸಾಲದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅದರ ಮೂಲಕವೇ ಬದ್ಧ ವೆಚ್ಚಗಳನ್ನು ಭರಿಸಲಾಗುತ್ತಿದೆ. ಇದರಿಂದ ರಾಜಸ್ವ ವೆಚ್ಚದ ಬಹುಪಾಲು ಬಡ್ಡಿ ಮರುಪಾವತಿಗೆ ಹೋಗುತ್ತಿದ್ದು, ಅದನ್ನು ಕಡಿಮೆ ಮಾಡಬೇಕೆಂದು ಸಲಹೆ ನೀಡಲಾಗಿದೆ. ಸಾಲದ ಅಗತ್ಯ ಇದ್ದರೂ ಸಹ ಮುಂದಿನ ದಿನಗಳಲ್ಲಿ ಮರು ಪಾವತಿಯ ಹೊರೆಯನ್ನು ಹೆಚ್ಚಿಸುವುದರಿಂದ ಎಚ್ಚರಿಕೆ ಯಲ್ಲಿ ಸುಸ್ಥಿರ ಮಟ್ಟ ಕಾಯ್ದುಕೊಳ್ಳುವ ಮಹತ್ವವನ್ನು ಹೇಳಿದೆ.
ರಾಜಸ್ವ ಕೊರತೆ
2022-23- 14699
2023-24- 40568
2024-25- 45109
ನಿಂತಿರುವ ತೆರಿಗೆ ಬೆಳವಣಿಗೆ:ತೆರಿಗೆ ಬೆಳವಣಿಗೆ ಬಹಳ ವರ್ಷಗಳಿಂದ ಶೇ.6.3 ರಲ್ಲಿ ನಿಂತಿರುವುದನ್ನು ಆರ್ಥಿಕ ಸಮೀಕ್ಷೆ ಗುರುತಿಸಿದೆ. ತೆರಿಗೆ ಸಂಗ್ರಹಣೆಯಲ್ಲಿ ದೇಶದ ಮೊದಲ ಐದು ರಾಜ್ಯಗಳಲ್ಲಿ ಸ್ಥಾನ ಪಡೆದಿದ್ದರೂ ಬೆಳವಣಿಗೆಯ ಹೆಚ್ಚಳ ಕಡಿಮೆ ಇದೆ. ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕಿಂತ ಕಡಿಮೆ ಪ್ರಮಾಣದ ಅಭಿವೃದ್ಧಿ ವೆಚ್ಚ ಮಾಡುತ್ತಿರುವುದನ್ನು ಸಮೀಕ್ಷೆ ಹೇಳಿದೆ. ಹೆಚ್ಚುವರಿ ಆದಾಯ ಸಂಗ್ರಹವಾದರೆ ಅದನ್ನು ಸಾಲದ ಅಸಲು ತೀರಿಸಲು ಬಳಸಬೇಕು, ಆ ರೀತಿ ಮಾಡಿದರೆ ಹಣಕಾಸು ವ್ಯವಸ್ಥೆಯನ್ನು ಬಲಿಷ್ಠಗೊಳಿಸಬಹುದೆಂದು ಸಮೀಕ್ಷೆ ಹೇಳಿದೆ.
ರಾಜಸ್ವ ಕೊರತೆ:ರಾಜಸ್ವದ ಕೊರತೆ ಮುಂದಿನ ವರ್ಷಗಳಲ್ಲಿ ಬಾಧಿಸಲಿದೆ. 2022-23ಕ್ಕೆ 14699 ಕೋಟಿ ರೂ.ಗಳಿದ್ದರೆ, 2023-24ಕ್ಕೆ 40568 ಕೋಟಿ ರೂ.ಗಳು, 2024-25ಕ್ಕೆ 45109 ಕೋಟಿ ರೂ.ಗಳಿಗೆ ಕೊರತೆ ಹೆಚ್ಚಾಗುತ್ತದೆ. ಜಿಎಸ್​ಟಿ ಪರಿಹಾರ ಸ್ಥಗಿತ ಕೊರತೆ ಹೆಚ್ಚಲು ಕಾರಣವಾಗುತ್ತದೆ. ಅದು ಬದ್ಧ ವೆಚ್ಚಗಳ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಪರಿಣಾಮ ಬೀರಿ ಬಜೆಟ್ ಗಾತ್ರವನ್ನೇ ತಗ್ಗಿಸಿಕೊಳ್ಳಬೇಕಾಗುತ್ತದೆ ಎಂಬ ಆತಂಕವಿದೆ.
ಕಡಿಮೆಯಾಗಲಿದೆ ಬಂಡವಾಳ ವೆಚ್ಚ:ಜಿಎಸ್​ಟಿ ಪರಿಹಾರ ಇದೇ ಜೂನ್​ಗೆ ನಿಂತು ಹೋದರೆ ರಾಜಸ್ವ ಸಂಗ್ರಹಕ್ಕೆ ಅಡ್ಡಿಯಾಗಿ ಬಂಡವಾಳ ವೆಚ್ಚ ಕಡಿಮೆಯಾಗುತ್ತದೆ. ಅದರಿಂದ ಅಭಿವೃದ್ಧಿಯಲ್ಲಿ ರಾಜ್ಯ ಹಿಂದುಳಿಯಲಿದೆ. 2022-23ಕ್ಕೆ ಬಂಡವಾಳ ವೆಚ್ಚ 46955 ಕೋಟಿ ರೂ.ಗಳಿದ್ದರೆ, 2023-24ಕ್ಕೆ ಅದು 20729 ಕೋಟಿ ರೂ.ಗಳಿಗೆ ಕುಸಿಯುವ ಅಪಾಯ ಇದೆ. ಅರ್ಧಕ್ಕರ್ಧ ಕಡಿಮೆಯಾದರೆ ಅಭಿವೃದ್ಧಿಯನ್ನು ಸಾಧಿಸುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತದೆ. ಮುಂದಿನ ವರ್ಷಕ್ಕೆ ಸರ್ಕಾರ ರಾಜಸ್ವ ಸಂಗ್ರಹಣೆಯಲ್ಲಿ ಸಾಕಷ್ಟು ಹಿಂದುಳಿಯುತ್ತಿದೆ. 2021-22 ಹಾಗೂ 2022-23ರ ಬಜೆಟ್​ಗೆ ಹೋಲಿಕೆ ಮಾಡಿದರೆ ರಾಜಸ್ವ ಸಂಗ್ರಹ ಕೇವಲ 308.27 ಕೋಟಿ ರೂ. ಹೆಚ್ಚಿಗೆ ಮಾಡಲಾಗಿದೆ. ಅದರರ್ಥ ಸಂಪನ್ಮೂಲ ಸಂಗ್ರಹಣೆಗೆ ದಾರಿಗಳನ್ನು ಕಂಡುಕೊಳ್ಳುವಲ್ಲಿ ಸರ್ಕಾರ ಹಿಂದುಳಿದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
